Breaking News

Shaikh BIG TV NEWS, Hubballi

ಕಟ್ಟಡ ದುರಂತ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಧಾರವಾಡ: ಕಟ್ಟಡ ದುರಂತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. ಇಂದು ಕೂಡ ರಕ್ಷಣಾಕಾರ್ಯ ಮುಂದುವರಿದಿದ್ದು, ಇಬ್ಬರ ಶವವನ್ನ ಹೊರಕ್ಕೆ ತರಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಎಂಬ ಬಾಲಕಿ ಹಾಗೂ ಮತ್ತೋರ್ವ ಮಹಿಳೆಯ ಮೃತದೇಹವನ್ನ ಹೊರಕ್ಕೆ ತರಲಾಗಿದೆ. ಮಹಿಳೆ ಮೇಲೆ ಕಟ್ಟಡದ ಫಿಲ್ಲರ್​​ ಬಿದ್ದು ಕಾರಣ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.ಮಾ. 19ರಂದು ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಸಂಪೂರ್ಣ ನೆಲಸಮವಾಗಿತ್ತು. ಕಟ್ಟಡದ ಅವಶೇಷಗಳ …

Read More »

ಕಮಲ್​ ಹಾಸನ್​ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ..

ತಮಿಳುನಾಡಿನ ಖ್ಯಾತ ನಟ ಕಮ್ ರಾಜಕಾರಣಿ ಕಮಲ್​ ಹಾಸನ್​ ಅವರು ತಮ್ಮ ಮಕ್ಕಳ್​ ನಿಧಿ ಮೈಯ್ಯಂ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸ್ಪರ್ಧಿಸುವ 21 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಆದ್ರೆ ಈ ಪಟ್ಟಿಯಲ್ಲಿ ಕಮಲ್​ ಹಾಸನ್​ ಹೆಸರಲಿಲ್ಲ. ಇನ್ನುಳಿದ 19 ಸ್ಥಾನಗಳಿಗೆ 2ನೇ ಪಟ್ಟಿ ಮಾರ್ಚ್​ 24 ಭಾನುವಾರ ಕೊಯಮತ್ತೂರಿನಲ್ಲಿ ಬಿಡುಗಡೆಯಾಗಲಿದೆ. ಇನ್ನು ತಾವು ಚುನಾವಣೆಯಲ್ಲಿ ಸ್ಪರ್ಧಿಸೋ ವಿಚಾರವಾಗಿ ಪ್ರತಿಕ್ರಿಯಿಸಿದ ಕಮಲ್​, …

Read More »

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ..

ಬೆಂಗಳೂರು: ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಏಪ್ರಿಲ್​ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ರಾಜ್ಯದ ಸುಮಾರು 2 ಸಾವಿರದ 800ಕ್ಕೂ ಅಧಿಕ ಪರೀಕ್ಷಾ ಕೇಂದ್ರದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಿಗ್ಗೆ 9.30ರಿಂದ ಪರೀಕ್ಷೆ ಆರಂಭವಾಗಲಿದ್ದು, ಮೊದಲ ದಿನವಾದ ಇಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯಲಿದೆ.ಮೊಬೈಲ್, ಸ್ಮಾರ್ಟ್‍ಪೋನ್, ಸ್ಮಾರ್ಟ್ ವಾಚ್‍ಗಳನ್ನು …

Read More »

ಸೋಷಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣಿಟ್ಟ ಆಯೋಗ..

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ದೇಶಾದ್ಯಂತ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸ್ತಿವೆ. ಇದರ ಜೊತೆ ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಖಡಕ್​ ನೀತಿ ಸಂಹಿತೆ ಕೂಡಾ ಜಾರಿಯಲ್ಲಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾಗಳ ಮೇಲೂ ಚುನಾವಣಾ ಆಯೋಗ ಕೆಲವು ನಿಯಮಗಳನ್ನು ಹೇರಿದೆ.ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಣು..!ಲೋಕಸಭಾ ಚುನಾವಣೆ ಮುಕ್ತಾಯಕ್ಕೂ 48 ಗಂಟೆಗಳ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಪರ ರಾಜಕೀಯ ಪ್ರಚಾರಕ್ಕೆ …

Read More »

ರಾತ್ರಿಯಿಡೀ ಶೋಧಕಾರ್ಯ ನಡೆಸಿದ್ದು, ರಕ್ಷಣಾ ಕಾರ್ಯ ಮೂವರ ದುರ್ಮರಣ, 55 ಜನರ ರಕ್ಷಣೆ

ಧಾರವಾಡ: ವಿದ್ಯಾನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ ಮೂವರು ಮೃತಪಟ್ಟಿದ್ದಾರೆ. ಕಟ್ಟಡದ ಕೆಳಗೆ ಸುಮಾರು 60 ರಿಂದ 70 ಜನ ಸಿಲುಕಿರುವ ಶಂಕೆ ಇದ್ದು, ಇಲ್ಲಿಯವರೆಗೆ ಒಟ್ಟು 55 ಜನರ ರಕ್ಷಣೆ ಮಾಡಲಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನುಳಿದವರಿಗಾಗಿ NDRF ತಂಡ ರಾತ್ರಿಯಿಡೀ ಶೋಧಕಾರ್ಯ ನಡೆಸಿದ್ದು, ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ. ಲಖನೌದಿಂದ 25 ಜನರ ಎನ್‌ಡಿಆರ್‌ಎಫ್ ತಂಡ ಧಾರವಾಡಕ್ಕೆ ಧಾವಿಸಿದ್ದು, ಶೋಧಕಾರ್ಯ ನಡೆಸ್ತಿದೆ. ಇನ್ನು …

Read More »

ನಿರ್ಮಾಣ ಹಂತದ ಕಟ್ಟಡ ಕುಸಿತ, ಹಲವರಿಗೆ ಗಾಯ

ಧಾರವಾಡ ಕುಮಾರೇಶ್ವರ ನಗರದಲ್ಲಿ ಇಂದು ನಿರ್ಮಾಣ ಹಂತದ ಕಟ್ಟಡ ಕುಸಿದು ಭಾರೀ ದುರಂತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡ ಸಂಪೂರ್ಣ ನೆಲಸಮವಾಗಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಕೆಲವರು ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Read More »

ವಿದ್ಯಾರ್ಥಿ ಮೇಲೆ ಪುಂಡ ಯುವಕರ ಗುಂಪಿನಿಂದ ಹಲ್ಲೆ.ಕಿಮ್ಸ್ ದಾಖಲು

ಹುಬ್ಬಳ್ಳಿ: ಪ್ರೌಢ ಶಾಲಾ ವಿದ್ಯಾರ್ಥಿಗೆ‌ ಪುಂಡ ಯುವಕರ ಗುಂಪೊಂದು ಚಾಕುವಿನಿಂದ ಇರಿದು‌ ಪರಾರಿಯಾದ ಘಟನೆ ಗೊಪ್ಪನಕೊಪ್ಪದಲ್ಲಿ ನಡೆದಿದೆ.ಕಂಚಿಕೇರಿ ಓಣಿಯ9 ನೇ ತರಗತಿ ವಿದ್ಯಾರ್ಥಿ ಅಭಿಷೇಕ ಕೆರೂರು ಗಾಯಗೊಂಡ ಬಾಲಕ. ತೀವ್ರವಾಗಿ ಗಾಯಗೊಂಡ ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೊಪ್ಪನಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಬಳಿ‌ ನಿಂತಿದ್ದ ಬಾಲಕನಿಗೆ ಏಕಾಏಕಿ ಯುವಕರ ಗುಂಪು ಚಾಕುವಿನಿಂದ ಹಲ್ಲೆ ನಡೆಸಿದೆ. ಯಾಕೆ ಗುರಾಯಿಸುತ್ತೀಯಾ ಎಂದು ಬಾಲಕನ ಮೇಲೆ ದಾಳು ಮಾಡಿದ ಯುವಕರ ಗುಂಪು ಚಾಕುವಿನಿಂದ …

Read More »

ಆನಂದನಗರದ ಸ್ಟೇಟ್ ಬ್ಯಾಂಕ್ ಶಾಖೆ ಪುನರ್ನಿರ್ಮಾಣಕ್ಕೆ ಆಗ್ರಹ..

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಆನಂದನಗರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ನಂ-17787 ಆನಂದನಗರ ಶಾಖೆಯನ್ನು ದಿಡಿರನೇ ಮುಚ್ಚಿರುವುದು ಖಂಡನೀಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ಪೂರಕವಾಗಿ ಸ್ಟೇಟ್ ಬ್ಯಾಂಕ್ ಆನಂದನಗರ ಶಾಖೆಯನ್ನು ಪುನರ್ನಿರ್ಮಾಣ ಮಾಡಬೇಕು ಎಂದು ಆನಂದನಗರ ಹಿತರಕ್ಷಣಾ ಸಮಿತಿಯ ಮುಖಂಡರಾದ ರಾಜು ಹಿರೇವಡೆಯ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದನಗರದಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಶಾಖೆಯು ಯಾವುದೇ ಮಾಹಿತಿಯಿಲ್ಲದೇ ದಿಡಿರನೇ ಮುಚ್ಚಿರುವುದು …

Read More »

ನ್ಯಾಯಲಯದ ತಡೆಯಾಜ್ಞೆ ಇದ್ದರು ಕೂಡ ಡೊಮೆಸ್ಟಿಕ್ ವಿಚಾರಣೆ ನಡೆಸುತ್ತಿರುವುದು ಖಂಡನೀಯವಾಗಿದೆ: ಬಿಜಾಪುರ ಆರೋಪ

ಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ವೃತ್ತದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಕಾರ್ಯನಿರ್ವಹಸುತ್ತಿರುವ ಪಿ.ಜಿ.ಮುನವಳ್ಳಿ ಅವರು ಸಮನ್ಸ್ ಜಾರಿಗೊಳಿಸಿದ್ದು, ಆಡಳಿತ ಮಂಡಳಿಯು ಜಿಲ್ಲಾ ಉಪನಿಬಂಧಕರ ಆದೇಶವನ್ನು ಉಲ್ಲಂಘಿಸಿದೆ.ಅಲ್ಲದೇ ತಡೆಯಾಜ್ಞೆ ಜಾರಿಯಲ್ಲಿದ್ದರೂ ಕೂಡ ದುರುದ್ದೇಶದಿಂದ ಅರ್ಚಕರನ್ನು ತೆಗೆದುಹಾಕಲು ಹುನ್ನಾರ ನಡೆಸುತ್ತಿದ್ದಾರೆ ಅಷ್ಟೇ ಅಲ್ಲದೇ ತಡೆಯಾಜ್ಞೆ ಇದ್ದರು ಕೂಡ ಡೊಮೆಸ್ಟಿಕ್ ವಿಚಾರಣೆ ನಡೆಸುತ್ತಿದ್ದಾರೆ ಎಂದು ದತ್ತಾತ್ರೇಯ ಬಿಜಾಪುರ ಹಾಗೂ ಪೂರ್ಣಿಮಾ ಗುಡಿ ಆರೋಪಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಸಾಯಿಬಾಬಾ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಂಡುರಂಗ …

Read More »

ಹಲಗಿ ಹಬ್ಬ ಎಂಬುವಂತ ಹೆಸರನ್ನು ಕೈ ಬಿಡಲು ಬಿಳ್ಳಾರ ಆಗ್ರಹ

ಹುಬ್ಬಳ್ಳಿ: ಹಲಗಿ ಎಂಬುವುದು ದಲಿತರ ಮೂಲ ಕಸುಬು ಆಗಿದ್ದು, ಹಲಗಿ ಎಂಬ ಪದವನ್ನು ಬಳಿಸಿ ಹಲಗಿ ಹಬ್ಬ ಆಚರಣೆಯಿಂದ ದಲಿತ ಸಮುದಾಯದ ಜಾತಿ ನಿಂದನೆಯಾಗುತ್ತದೆ ಈ ಹಿನ್ನೆಲೆಯಲ್ಲಿ ಹಲಗಿ ಹಬ್ಬ ಎಂಬುವಂತ ಹೆಸರನ್ನು ಶೀಘ್ರವಾಗಿ ಕೈ ಬಿಡಬೇಕು ಎಂದು ದಲಿತ ಸಮುದಾಯದ ಮುಖಂಡರಾದ ಪೀತಾಂಬ್ರಪ್ಪ ಬಿಳ್ಳಾರ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಸೇರಿದ ಶೋಷಿತ ಸಮುದಾಯದ ಹೆಸರಾಗಿರುವ ಹಲಗೆಯನ್ನು ಬಳಕೆ ಮಾಡುವ ಮೂಲಕ ಪರಿಶಿಷ್ಟ ಜಾತಿ ನಿಂಧನೆಯಾಗುತ್ತಿದೆ‌ …

Read More »