ಹುಬ್ಬಳ್ಳಿ: ಹಲಗಿ ಎಂಬುವುದು ದಲಿತರ ಮೂಲ ಕಸುಬು ಆಗಿದ್ದು, ಹಲಗಿ ಎಂಬ ಪದವನ್ನು ಬಳಿಸಿ ಹಲಗಿ ಹಬ್ಬ ಆಚರಣೆಯಿಂದ ದಲಿತ ಸಮುದಾಯದ ಜಾತಿ ನಿಂದನೆಯಾಗುತ್ತದೆ ಈ ಹಿನ್ನೆಲೆಯಲ್ಲಿ ಹಲಗಿ ಹಬ್ಬ ಎಂಬುವಂತ ಹೆಸರನ್ನು ಶೀಘ್ರವಾಗಿ ಕೈ ಬಿಡಬೇಕು ಎಂದು ದಲಿತ ಸಮುದಾಯದ ಮುಖಂಡರಾದ ಪೀತಾಂಬ್ರಪ್ಪ ಬಿಳ್ಳಾರ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಸೇರಿದ ಶೋಷಿತ ಸಮುದಾಯದ ಹೆಸರಾಗಿರುವ ಹಲಗೆಯನ್ನು ಬಳಕೆ ಮಾಡುವ ಮೂಲಕ ಪರಿಶಿಷ್ಟ ಜಾತಿ ನಿಂಧನೆಯಾಗುತ್ತಿದೆ ಎಂದರು. ಹೋಳಿ ಹಬ್ಬ ಎಂದು ಆಚರಿಸಿಕೊಳ್ಳಲಿ ಆದರೇ ಹಲಗಿ ಹಬ್ಬ ಎಂದು ಪರಿಶಿಷ್ಟ ಸಮುದಾಯಕ್ಕೆ ನೋವು ತರುವಂತ ಹಲಗಿ ಹಬ್ಬವನ್ನು ಕೈಬಿಡಬೇಕು ಎಂದು ಅವರು ಹೇಳಿದರು. ಹೋಳಿ ಹಬ್ಬ ಹುಬ್ಬಳ್ಳಿಗೆ ಈ ಹಿಂದೆ ಸಾಕಷ್ಟು ಕಳಂಕವನ್ನು ತಂದಿದೆ. ಆದರೇ ಇಂದು ಹುಬ್ಬಳ್ಳಿಯ ಹೆಮ್ಮೆ ಎಂಬುವಂತ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಸವರ್ಣಿಯ ಮುಖಂಡೆರೆಂದು ಹೇಳಿಕೊಳ್ಳುವವರು ಜಾತ್ಯಾತೀತ ಮುಖವಾಡ ಧರಿಸಿಕೊಂಡು ಪರಿಶಿಷ್ಟ ಜಾತಿಯಲ್ಲಿ ಒಂದಾಗಿರುವ ಹಲಗಿ ಪದವನ್ನು ಕಾನೂನು ಬಾಹಿರವಾಗಿ ಬಳಸಿ ಹಲಗಿ ಹಬ್ಬ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದರು. ಹೋಳಿ ಹಬ್ಬ ಆಚರಣೆಗೆ ನಮ್ಮ ವಿರೋಧವಿಲ್ಲ ಆದರೇ ಹಲಗಿ ಎಂಬುವಂತ ಪದಬಳಕೆಯನ್ನು ಕೈ ಬೀಡಬೇಕು ಈ ಕುರಿತು ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಸೂಕ್ತ ಕ್ರಮಗಳನ್ನು ಜಾರಿ ಮಾಡಬೇಕು ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪರ್ವತಪ್ಪ ದೊಡ್ಡಮನಿ, ಮಲ್ಲೇಶ ಯಲವಿಗಿ, ಗುರುನಾಥ ಉಳ್ಳಿಕಾಶಿ, ಗುರುಸಿದ್ಧಪ್ಪ ಹಲಗಿ ಸೇರಿದಂತೆ ಇತರರು ಇದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





