Breaking News

Shaikh BIG TV NEWS, Hubballi

ರೈತರ ಹೆಸರಲ್ಲಿ ರಾಜಕೀಯ ಬಿಟ್ಟು ಅವರ ಕಷ್ಟಗಳಿಗೆ ಸ್ಪಂದಿಸಿ: ಸಿಎಂ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು

ಬೆಂಗಳೂರು: ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಿ. ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುತ್ತಾ ಹೋಗುವುದು ಅನ್ನದಾತನಿಗೆ ಮಾಡಿದ ಅನ್ಯಾಯ. ಭರವಸೆಯ ಮಾತುಗಳನ್ನು ಬಿಟ್ಟು ಪ್ರಾಮಾಣಿಕವಾಗಿ ರೈತರ ಕಷ್ಟಗಳಿಗೆ ಸ್ಪಂದಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವರಿಗೆ ಸುಮಲತಾ ತಿರುಗೇಟು ನೀಡಿದ್ದಾರೆ.ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಅವರು, ರೈತರು ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನಕ್ಕಿಂತ ಬರೀ ಮಾತನಾಡುವುದು ಅನ್ಯಾಯ. ಅದು ರೈತಾಪಿ ವರ್ಗಕ್ಕೆ ಮಾಡಿದ ಮೋಸ …

Read More »

ಚುನಾವಣಾ ಕಣಕ್ಕೆ ಇಳಿಯುತ್ತಿದೆ ಕೋಟ್ಯಂತರ ಹಣ.

ಬೆಂಗಳೂರು ಹಾಗೂ ಹಾವೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಸುಮಾರು 2 ಕೋಟಿ ರೂ. ಹಣ ಪತ್ತೆಯಾಗಿದೆ. ಈ ಹಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಗುತ್ತಿಗೆದಾರರು ನೀಡಿದ್ದು, ಚುನಾವಣೆ ಪ್ರಚಾರಕ್ಕಾಗಿ ಬಳಸಲು ಉದ್ದೇಶಿಸಲಾಗಿತ್ತು ಎಂದು ವರದಿಯಾಗಿದೆ. ಇದಲ್ಲದೆ, ರಾಜ್ಯದಲ್ಲಿ ಈವರೆಗೆ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8.57 ಕೋಟಿ ರೂ. ಮೌಲ್ಯದ ಮದ್ಯ, 54 ಲಕ್ಷ ರೂ. ನಗದು, 650 ಗ್ರಾಂ ಚಿನ್ನ ಹಾಗೂ …

Read More »

ದೇವೇಗೌಡರು ಸ್ಪರ್ಧೆ ಮಾಡಿದರೆ ಹೆದರುವುದಕ್ಕೆ ನಾನು ಸೀರೆ ಉಟ್ಟಿಲ್ಲ: ಜಿ ಎಸ್ ಬಿ

ತುಮಕೂರು, ಮಾರ್ಚ್ 15: “ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಗೆ ನಾನೂ ಆಕಾಂಕ್ಷಿ. ದೇವೇಗೌಡರಲ್ಲ ಯಾರಾದರೂ ಸ್ಪರ್ಧೆ ಮಾಡಲಿ, ಹೆದರುವ ಪ್ರಶ್ನೆಯೇ ಇಲ್ಲ. ನಾವೇನೂ ಸೀರೆ ಉಟ್ಟುಕೊಂಡು ಕೂತಿಲ್ಲ. ನಮಗೂ ಕಾರ್ಯಕರ್ತರ ಬೆಂಬಲ ಇದೆ” ಎಂದು ತುಸು ಖಾರವಾಗಿಯೇ ಉತ್ತರ ನೀಡಿದರು ಮಾಜಿ ಸಂಸದರಾದ ಜಿ.ಎಸ್.ಬಸವರಾಜ್.ಈ ಸಲ ತುಮಕೂರಿನಿಂದ ಜೆಡಿಎಸ್ ಗೆ ದೇವೇಗೌಡರು ಅಭ್ಯರ್ಥಿಯಾದರೆ ಎಪ್ಪತ್ತೇಳು ವರ್ಷದ ಬಸವರಾಜ್ ತಾವು ಬಿಜೆಪಿಯಿಂದ ಸ್ಪರ್ಧಿಸುವುದಿಲ್ಲ ಎಂದಿರುವುದಾಗಿ ವದಂತಿ ಹರಿದಾಡುತ್ತಿದೆ. ಈ …

Read More »

ನರೇಂದ್ರ ಮೋದಿ ಬೆಂಬಲಿಗರನ್ನು ಮೂರ್ಖರು ಎಂದು ಕರೆದ ರಮ್ಯಾ..?

ನವದೆಹಲಿ: ವಿವಾದಾತ್ಮಕ ಟ್ವೀಟ್ ಮತ್ತು ನಡೆಗಳಿಂದ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳನ್ನು ಕೆರಳಿಸುವ ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.ಪ್ರಧಾನಿ ಮೋದಿ ಅವರ ಬೆಂಬಲಿಗರನ್ನು ‘ಮೂರ್ಖರು’ ಎಂದು ಲೇವಡಿ ಮಾಡುವ ಮೀಮ್ ಅನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಮ್ಯಾ ಅವರ ಟ್ವೀಟ್‌ಗೆ ಅಷ್ಟೇ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ದಾಂಡಿ ಸತ್ಯಾಗ್ರಹ, ಆರೆಸ್ಸೆಸ್ ಮತ್ತು ರಮ್ಯಾ …

Read More »

ನ್ಯೂಜಿಲ್ಯಾಂಡ್​​ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ, 27 ಮಂದಿ ಸಾವು ..

ನ್ಯೂಜಿಲ್ಯಾಂಡ್​​ನ ಕ್ರೈಸ್ಟ್​​ಚರ್ಚ್​​ ನಗರದಲ್ಲಿರೋ ಎರಡು ಮಸೀದಿಗಳಲ್ಲಿ ನಿನ್ನೆ ಭಕ್ತರ ಮೇಲೆ ಗುಂಡಿನ ದಾಳಿ ನಡೆದಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಮಿಲಿಟರಿ ಸ್ಟೈಲ್​​ ಬಟ್ಟೆ ಧರಿಸಿ, ಆಟೋಮ್ಯಾಟಿಕ್​​ ರೈಫಲ್​​​ ಹಿಡಿದು ಬಂದಿದ್ದ ವ್ಯಕ್ತಿ ಅಲ್​​ ನೂರ್​ ಮಸೀದಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗುಂಡಿನ ದಾಳಿ ನಡೆದ ವೇಳೆ ಬಾಂಗ್ಲಾದೇಶ ಕ್ರಿಕೆಟ್​​ ತಂಡ ಪ್ರಾರ್ಥನೆಗಾಗಿ ಮಸೀದಿಗೆ ಆಗಮಿಸುತ್ತಿತ್ತು. ಸದ್ಯ ತಂಡದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು …

Read More »

ಇನ್ನೂ ಮುಗಿದಿಲ್ಲ ಯುದ್ಧದ ಛಾಯೆ, ನಿನ್ನೆ ರಾತ್ರಿ ಶಬ್ದದ ವೇಗಕ್ಕಿಂತಲೂ ವೇಗವಾಗಿ ವಾಯುಪಡೆ ವಿಮಾನ ಹಾರಾಟ..!

ಭಾರತೀಯ ವಾಯು ಸೇನೆ ನಿನ್ನೆ ರಾತ್ರಿ ಪಂಜಾಬ್​​ ಹಾಗೂ ಜಮ್ಮುವಿನಲ್ಲಿ ಭಾರೀ ದೊಡ್ಡ ತರಬೇತಿ ನಡೆಸಿದೆ. ಸಾಕಷ್ಟು ಸಂಖ್ಯೆಯ ಯುದ್ಧವಿಮಾನಗಳನ್ನು ಬಳಸಿಕೊಂಡು ನಿನ್ನೆ ರಾತ್ರಿ ರೆಡಿನೆಸ್​ ಎಕ್ಸರ್ಸೈಜ್​ ಮಾಡಲಾಗಿದೆ. ಈ ವೇಳೆ ಐಎಎಫ್​​​ ವಿಮಾನಗಳು ಗಡಿ ಜಿಲ್ಲೆಗಳಲ್ಲಿ ಶಬ್ದದ ವೇಗಕ್ಕಿಂತಲೂ ವೇಗದಲ್ಲಿ ಹಾರಾಟ ಮಾಡಿವೆ. ಒಂದು ವೇಳೆ ಪಾಕಿಸ್ತಾನ ವಾಯು ಪಡೆ ಯಾವುದೇ ದಾಳಿ ನಡೆಸಿದ್ರೆ ಅದನ್ನ ಮಣಿಸಲು ಸಿದ್ಧವಾಗಿರುವ ಉದ್ದೇಶದಿಂದ ಈ ತರಬೇತಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Read More »

ಸುಮಲತಾ ಬೆಂಬಲಕ್ಕೆ ನಿಂತ ಬಿಜೆಪಿ: ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕದಿರಲು ನಿರ್ಧಾರ..

ಬೆಂಗಳೂರು: ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದೇ ಭಾವಿಸಲಾಗಿತ್ತು, ಆದರೆ ಮೈತ್ರಿ ಸರ್ಕಾರದ ಧರ್ಮದಂತೆ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ.ಹೀಗಾಗಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನಟಿ ಸುಮಲತಾ ಅಂಬರೀಷ್ ಅವರನ್ನು ಬೆಂಬಲಿಸಲು ನಿರ್ಧರಿಸಿರುವ ಕೇಂದ್ರ ಬಿಜೆಪಿ ನಾಯಕರು ಅಭ್ಯರ್ಥಿಯನ್ನು ಹಾಕದರಿಲು ನಿರ್ಧರಿಸಿದ್ದಾರೆ.ಮಂಡ್ಯ ಲೋಕಸಕ್ಷೇ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್ …

Read More »

ಬಿಜೆಪಿಯದ್ದು ಸುಳ್ಳು ಪೊಳ್ಳು ಜೊಳ್ಳು ಭರವಸೆ: ಕಾಂಗ್ರೆಸ್ ನಿಂದ ಕಿರುಹೊತ್ತಿಗೆ ಬಿಡುಗಡೆ..

ಬೆಂಗಳೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಸಾಧನೆ ಶೂನ್ಯ. ಮಾಡಿರುವ ಸಾಧನೆಗಳು ಏನೂ ಇಲ್ಲದಿರುವಾಗ ಬಿಜೆಪಿ ಭಾವನಾತ್ಮಕ ಹೇಳಿಕೆಗಳ ಮೂಲಕ ಮತ ಯಾಚಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ `ಸುಳ್ಳು, ಪೊಳ್ಳು, ಜೊಳ್ಳು’ ಎಂಬ ಘೋಷಣೆಯಡಿಯಲ್ಲಿ ಕಾಂಗ್ರೆಸ್ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನರೇಗಾ ಯೋಜನೆ ದುರ್ಬಳಕೆ ಮಾಡುವ ಪ್ರಯತ್ನ ಮಾಡಿತ್ತು. ಭೂ ಸ್ವಾಧೀನ ಕಾಯ್ದೆ ಸಡಿಲ ಮಾಡುವ …

Read More »

ಮುಂಬೈನಲ್ಲಿ ಮೇಲ್ಸೇತುವೆ ಕುಸಿತ, 6 ಮಂದಿ ಸಾವು

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​​​ ಟರ್ಮಿನಸ್​​​ ರೇಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ ಕುಸಿದು 6 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ 33 ಮಂದಿಗೆ ಗಾಯಗಳಾಗಿದೆ. ಈ ಮೇಲ್ಸೇತುವೆ ರಿಪೇರಿಯಲ್ಲಿತ್ತು. ಆದ್ರೂ ಇದನ್ನು ಬಳಕೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. ನಿನ್ನೆ ಸಂಜೆ ಹೆಚ್ಚಿನ ಜನಸಂದಣಿ ಇದ್ದಾಗಲೇ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಟ್ವಿಟರ್​ ಮೂಲಕ ಸಾಂತ್ವನ …

Read More »

ಕೂದಲು ಕಸಿ ಮಾಡಿಸಿದ ಎರಡೇ ದಿನದಲ್ಲಿ ಸಾವನ್ನಪ್ಪಿದ ಮುಂಬೈ ಉದ್ಯಮಿ

ಮುಂಬೈ: ಕಳೆದ ವಾರ ಸುಮಾರು 12 ಗಂಟೆಗಳ ಕಾಲ ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 43 ರ ಹರೆಯದ ಮುಂಬೈ ಉದ್ಯಮಿಯೊಬ್ಬರು ಕೂದಲು ಕಸಿ ಮಾಡಿಸಿದ ಎರಡೇ ದಿನದಲ್ಲಿ ಪೌಯಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶ್ರವಣ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿರುವ ಉದ್ಯಮಿಯು ಮಾರ್ಚ್ 7 ರಂದು ಕೇಂದ್ರ ಮುಂಬಯಿಯ ಚಿಂಚ್ಪೋಕ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕೂದಲು ಕಸಿ ಸೆಷನ್ ನಲ್ಲಿ ಭಾಗವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸಖಿನಕ …

Read More »