ಮಂಡ್ಯ: ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ. ಸುಮಲತಾ ಅವರು ನಮ್ಮ ಸಂಬಂಧಿಕರೆ, ಆದ್ರೆ ಸಂಬಂಧ ಮತ್ತು ಪಕ್ಷ ಎಂದು ಬಂದಾಗ ನನಗೆ ಪಕ್ಷವೇ ಮುಖ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.ಮದ್ದೂರಿನ ಕೆ.ಎಂ.ದೊಡ್ಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡರಸಿನಕೆರೆ ಗ್ರಾಮದಲ್ಲಿರೊ ಅವರ ಸಂಬಂಧಿಕರ ಮೂಲಕ ಸಿಎಂ ಜೊತೆ ಮಾತಾಡಿ ನಿರ್ಧಾರ ಮಾಡುವ ಬಗ್ಗೆ ಸುಮಲತಾ ಅವರಿಗೆ ತಿಳಿಸಲು ಹೇಳಿದ್ದೆ. ಆದರೆ ಅವರು ಬರಲಿಲ್ಲ. …
Read More »ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಬಂಧನ..
ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.ಲಕ್ನೋ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ಬಳಿಕ ನಡೆಸಲಾದ ಕ್ಷಿಪ್ರ ಕಾರ್ಯಚರನೆಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಶುಕ್ರವಾರ ಘೋಷಿಸಿದೆ.ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಹರನಪುರ …
Read More »ವರದಕ್ಷಿಣೆ ಕಿರುಕುಳ: ನಟ ರಾಜೇಶ್ ಧ್ರುವಗೆ ನಿರೀಕ್ಷಣಾ ಜಾಮೀನು..!
ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟ ರಾಜೇಶ್ ಧ್ರುವಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ನೊಂದ ಪತ್ನಿ ದೂರು ನೀಡುತ್ತಿದ್ದಂತೆ ಬಂಧನ ಭೀತಿ ಎದುರಿಸಿದ್ದ ರಾಜೇಶ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.ಇನ್ನು ಪ್ರಕರಣ ಸಂಬಂಧ ರಾಜೇಶ್ ಭಟ್ ಅಲಿಯಾಸ್ ರಾಜೇಶ್ ಧ್ರುವ ವಿರುದ್ಧ ಕುಮಾರಸ್ವಾಮಿ ಲೇಔಟ್ ಹಾಗೂ ಬಸವನಗುಡಿ …
Read More »ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅನಾಹುತ; 69 ಮಂದಿ ಸಜೀವ ದಹನ
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 69 ಮಂದಿ ಸಜೀವ ದಹನವಾದ ದಾರುಣ ಘಟನೆ ಬುಧವಾರ ತಡರಾತ್ರಿ ನಡೆದಿದೆ.ಢಾಕಾದ ಚೌಕ್‌ಬಜಾರ್ ಪ್ರದೇಶದ ಮಸೀದಿಯ ಹಿಂಭಾಗವಿರುವ ನಾಲ್ಕು ಅಂತಸ್ತಿನ ಹಾಜಿ ಶಾಹಿದ್ ಮ್ಯಾನ್ಶನ್ ಎಂಬ ಕಟ್ಟಡದಲ್ಲಿ ರಾಸಾಯಕ ಸಂಗ್ರಹಿಸಿಡಲಾಗಿದ್ದು, ನೆಲ ಮಹಡಿಯಲ್ಲಿ ಬುಧವಾರ ರಾತ್ರಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸಮೀಪದ ಜನವಸತಿ ಕಟ್ಟಡಗಳೂ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.ಕಟ್ಟಡದ ಎರಡು, ಮೂರು ಮತ್ತು ನಾಲ್ಕನೇ …
Read More »ಕಾಶ್ಮೀರ ಕುರಿತು ಪೋಸ್ಟ್ ಮಾಡಿದ್ದಾಕ್ಕೆಗೆ ಅತ್ಯಾಚಾರದ ಬೆದರಿಕೆ..
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೈನಿಕರು ದಾಳಿಯ ಮಾಸ್ಟರ್ಮೈಂಡ್ನನ್ನೇ ಹತ್ಯೆಗೈದಿದ್ದಾರೆ. ಭಯೋತ್ಪಾದಕರ ಹೆಡೆಮುರಿಕಟ್ಟಲು ಇನ್ನೂ ಕಾರ್ಯಾಚರಣೆ ನಡೆಯುತ್ತಲೇ ಇದೆ. ಪಾಕಿಸ್ತಾನದ ಪರ ಪೋಸ್ಟ್ ಹಾಕಿದವರನ್ನೂ ಕೂಡ ಪೊಲೀಸರು ಬಂಧಿಸುತ್ತಿದ್ದಾರೆ. ಈ ಮಧ್ಯೆ ಕಾಶ್ಮೀರ ಜನರ ಪರವಾಗಿ ಪೋಸ್ಟ್ ಮಾಡಿದ್ದ ಯುವತಿಯೊಬ್ಬಳಿಗೆ ವ್ಯಕ್ತಿಯೊಬ್ಬ ಫೇಸ್ಬುಕ್ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಕೊಲ್ಕತ್ತಾದ ಯುವತಿಯೊಬ್ಬಳು ತನ್ನ ಫೇಸ್ಬುಕ್ ಪೇಜ್ನಲ್ಲಿ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಮೋದಿ ಆಡಳಿತವನ್ನ ಟೀಕಿಸಿ ಪೋಸ್ಟ್ ಮಾಡಿದ್ದಳು. ಯುವತಿಯ …
Read More »ಬಂಧಿತ ದೇಶದ್ರೋಹಿಗಳ ಪರ ವಕಾಲತ್ತು ವಹಿಸಲ್ಲ’ ವಕೀಲರ ಸಂಘ ನಿರ್ಧಾರ…
ರಾಯಚೂರು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಇತ್ತ ರಾಯಚೂರು ಜಿಲ್ಲೆಯ ತಲೇಖಾನ್ ಗ್ರಾಮದಲ್ಲಿ ಪಾಕಿ ಮನಸ್ಥಿತಿಯ ಕೆಲ ದೇಶದ್ರೋಹಿಗಳು ಉಗ್ರರ ದಾಳಿ ಬೆಂಬಲಿಸಿ ಕೆಕೆ ಹಾಕಿ ಸಂಭ್ರಮಿಸಿದ್ದರು. ಪರಸ್ಪರ ಹಸಿರು ಬಣ್ಣ ಎರಚಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸದ್ದರು. ಘಟನೆ ಕುರಿತಂತೆ 5 ಜನ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಅವರನ್ನ ಜೈಲಿಗಟ್ಟಿದ್ದಾರೆ. ಈಗ ಆರೋಪಿಗಳ ಪರವಾಗಿ ವಕಾಲತ್ತು ಮಾಡದಿರಲು …
Read More »ಕಂಪ್ಲಿ ಶಾಸಕ ಗಣೇಶ್ ಕೊನೆಗೂ ಅರೆಸ್ಟ್.
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಜನವರಿ 20ರ ರಾತ್ರಿ ಈಗಲ್ಟನ್ ರೆಸಾರ್ಟ್ನಲ್ಲಿ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಕೊನೆಗೂ ಅರೆಸ್ಟ್ ಆಗಿದ್ದಾರೆ. ಘಟನೆಯ ನಂತ್ರ, ಗಣೇಶ್ ತಲೆ ಮರೆಸಿಕೊಂಡಿದ್ದರು. ಈ ನಡುವೆ, ನಿನ್ನೆಯಷ್ಟೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ತೆಗೆದುಕೊಂಡಿದ್ದರು.ರಾಮನಗರ ಪೊಲೀಸರು ಶಾಸಕ ಕಂಪ್ಲಿ ಗಣೇಶ್ರನ್ನು ಮುಂಬೈನಲ್ಲಿ ಅರೆಸ್ಟ್ ಮಾಡಿದ್ದಾರೆ. ಇಂದು …
Read More »ಆಡಿಯೋ ಪ್ರಕರಣ: ಅದು ಹೇಗೆ ಲಂಚದ ಪ್ರಕರಣವಾಗುತ್ತೆ ಸಿ.ವಿ.ನಾಗೇಶ್ ವಾದ
ಕಲಬುರ್ಗಿ: ಆಪರೇಷನ್ ಕಮಲದ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ರದ್ದು ಕೋರಿ ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಕೋರ್ಟ್ ನಂಬರ್ 4ರಲ್ಲಿ ಬಿ.ಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ರು. ಇದಾದ ನಂತ್ರ, ನ್ಯಾಯಪೀಠವು ತೀರ್ಪು ಕಾಯ್ದಿರಿಸಿ, ಪ್ರಕರಣವನ್ನು ಮುಂದೂಡಿದೆ.ವಾದ ಏನಿತ್ತು..ಸತತ ಒಂದೂವರೆ ಗಂಟೆಗಳ ಕಾಲ ಬಿಎಸ್‌ವೈ ಪರ ವಕೀಲ ನಾಗೇಶ್ ವಾದ ಮಂಡಿಸಿದರು. ಶರಣಗೌಡ ನೀಡಿದ ದೂರಿನ ಪ್ರತಿಯನ್ನು …
Read More »ನನ್ನನ್ನು ಪ್ರೀತಿಸುತ್ತೀನಿ ಅಂತಾ ಸುಳ್ಳು ಹೇಳಿದ್ರಿ, ನನಗಿಂತ ಹೆಚ್ಚಾಗಿ ನೀವು ಪ್ರೀತಿಸಿದ್ದು ದೇಶವನ್ನು’
ಈ ದೇಶದ ಭೂಮಿ ಕೇವಲ ವೀರ ಯೋಧರ ತವರೊಂದೇ ಅಲ್ಲ. ವೀರ ಸೀಪಾಯಿಗಳ ಮಹಾ ಧೈರ್ಯವಂತ ಪತ್ನಿಯರ ಪುಣ್ಯ ಭೂಮಿಯೂ ಹೌದು. ದೇಶಕ್ಕಾಗಿ ಒಂದೆಡೆ ರಕ್ತ ಹರಿಸೋ ವೀರ ವನಿತೆಯರು ಇದ್ದರೆ, ಇನ್ನೊಂದೆಡೆ ದೇಶಕ್ಕಾಗಿ ವೀರಮರಣವನ್ನಪ್ಪಿದ ಯೋಧನ ಬಗ್ಗೆ ಹೆಮ್ಮೆ ಪಡುತ್ತ, ತಮ್ಮ ಅಶ್ರುತರ್ಪಣದಿಂದಲೇ ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಹಾನ್ ಗೃಹಿಣಿಯರು ಇದ್ದಾರೆ. ಅಂಥ ಮಹಾನ್ ಗೃಹಿಣಿಯರ ಸಾಲಿಗೆ ಸೇರುವ ನಿಕಿತಾ ಕೌಲ್, ತಮ್ಮ ಪತಿಗೆ ಅಂತಿಮ ನಮನ …
Read More »ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!
ಇಸ್ಲಾಮಾಬಾದ್, ಫೆಬ್ರವರಿ 19: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸಿರುವ ಭಾರತಕ್ಕೆ ಸಾಕ್ಷ್ಯ ನೀಡುವಂತೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ. ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆ. ನನ್ನ ಈ ಹೇಳಿಕೆ ಭಾರತ ಸರ್ಕಾರಕ್ಕೆ. ನೀವು ಯಾವುದೇ ಸಾಕ್ಷ್ಯ ಇಲ್ಲದೆ ಪಾಕಿಸ್ತಾನ ಸರ್ಕಾರವನ್ನು ಆರೋಪಿಸಿದ್ದೀರಿ. ನಮ್ಮ ನೆಲದಿಂದ ಯಾರೂ ಹಿಂಸೆಯನ್ನು ಹರಡಬಾರದು ಎನ್ನುವುದು ನಮ್ಮ ಹಿತಾಸಕ್ತಿ. ಪಾಕಿಸ್ತಾನದಲ್ಲಿನ ಯಾರೊಬ್ಬರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





