Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ನನ್ನನ್ನು ಪ್ರೀತಿಸುತ್ತೀನಿ ಅಂತಾ ಸುಳ್ಳು ಹೇಳಿದ್ರಿ, ನನಗಿಂತ ಹೆಚ್ಚಾಗಿ ನೀವು ಪ್ರೀತಿಸಿದ್ದು ದೇಶವನ್ನು’

ಈ ದೇಶದ ಭೂಮಿ ಕೇವಲ ವೀರ ಯೋಧರ ತವರೊಂದೇ ಅಲ್ಲ. ವೀರ ಸೀಪಾಯಿಗಳ ಮಹಾ ಧೈರ್ಯವಂತ ಪತ್ನಿಯರ ಪುಣ್ಯ ಭೂಮಿಯೂ ಹೌದು. ದೇಶಕ್ಕಾಗಿ ಒಂದೆಡೆ ರಕ್ತ ಹರಿಸೋ ವೀರ ವನಿತೆಯರು ಇದ್ದರೆ, ಇನ್ನೊಂದೆಡೆ ದೇಶಕ್ಕಾಗಿ ವೀರಮರಣವನ್ನಪ್ಪಿದ ಯೋಧನ ಬಗ್ಗೆ ಹೆಮ್ಮೆ ಪಡುತ್ತ, ತಮ್ಮ ಅಶ್ರುತರ್ಪಣದಿಂದಲೇ ವೈರಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಹಾನ್ ಗೃಹಿಣಿಯರು ಇದ್ದಾರೆ. ಅಂಥ ಮಹಾನ್ ಗೃಹಿಣಿಯರ ಸಾಲಿಗೆ ಸೇರುವ ನಿಕಿತಾ ಕೌಲ್, ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಿದ ರೀತಿಗೆ ಇಡೀ ದೇಶವೇ ತಲೆಬಾಗಿ ನಮಿಸಿದೆ.ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ವಂಚನೆಯಿಂದ 44 ಯೋಧರ ಸಾವಿಗೆ ಪಾಕ್​ ಬೆಂಬಲಿತ ಉಗ್ರ ಸಂಘಟನೆ ಜೈಷ್​​-ಎ-ಮೊಹಮ್ಮದ್ ಕಾರಣವಾದ ಬೆನ್ನಲ್ಲೇ ಭಾರತೀಯ ಸೇನೆ ಆಪರೇಷನ್ ಆಲ್​ಔಟ್ ಆರಂಭಿಸಿತ್ತು. ಈ ಘಟನೆ ನಡೆದು ಕೇವಲ 100 ಗಂಟೆಯಲ್ಲೇ ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ ಜೈಷ್ ನಾಯಕತ್ವವನ್ನು ಭಾರತೀಯ ಸೇನೆ ಮಟ್ಟ ಹಾಕಿತು. ಈ ಎನ್​ಕೌಂಟರ್​ ವೇಳೆ ಐವರು ಭಾರತೀಯ ಯೋಧರೂ ಸಹ ವೀರ ಸ್ವರ್ಗ ಸೇರಿದರು. ಹೀಗೆ ವೀರ ಮರಣವನ್ನಪ್ಪಿದ ಮೇಜರ್​ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿಯೇ ನಿಕಿತಾ ಕೌಲ್.ಮೂಲತಃ ಡೆಹ್ರಾಡೂನ್​ನವರಾದ ಮೇಜರ್ ಧೌಂಡಿಯಾಲ್​ ಅವರ ಪಾರ್ಥಿವ ಶರೀರವನ್ನು ಅವರ ಇಲ್ಲಿನ ನಿವಾಸಕ್ಕೆ ತರಲಾಗಿತ್ತು. ಭಾರೀ ಮಳೆಯ ನಡುವೆಯೇ ಅವರಿಗೆ ಅಂತಿಮ ನಮನ ಸಲ್ಲಿಸಲಾಗುತ್ತಿತ್ತು. ಈ ವೇಳೆ ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಲು ಬಂದ ನಿಕಿತಾ ಕೌಲ್​ ಅಕ್ಷರಶಃ ಅಂತರಂಗದಲ್ಲಿ ಜ್ವಾಲಾಮುಖಿಯನ್ನು ಹೊತ್ತು ಅದನ್ನು ಕಣ್ಣ ಹನಿಯಿಂದ ಹೊರ ಹಾಕಗೊಡದೆ, ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪುಟ್ಟದಾಗಿ ತಮ್ಮ ಪತಿ ಜೊತೆ ಮಾತನಾಡಿದ ಅವರು, ನೀವು ನನಗೆ ಸುಳ್ಳು ಹೇಳಿದ್ರಿ ಅಂತಾ ಹೇಳಿ ಬಿಟ್ಟರು. ಇದೇನಪ್ಪ ಇವರು ಹೀಗೇಕೆ ಹೇಳುತ್ತಿದ್ದಾರೆ ಅಂತಾ ಇನ್ನೊಬ್ಬರು ಯೋಚಿಸುವ ಮೊದಲೇ ತಮ್ಮ ಮಾತನ್ನು ಮುಂದುವರೆಸಿದ ನಿಕಿತಾ, ಮೇಜರ್​ ಸಾಹೇಬ್ರೆ ನೀವು ನನ್ನನ್ನು ಪ್ರೀತಿಸುತ್ತೀನಿ ಅಂತಾ ಸುಳ್ಳು ಹೇಳಿದ್ರಿ. ಹಾಗೆ ನೋಡಿದ್ರೆ ನೀವು ನನಗಿಂತ ಹೆಚ್ಚಾಗಿ, ನಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ರಿ. ಅದರ ಬಗ್ಗೆ ಹೊಟ್ಟೆ ಕಿಚ್ಚು ಇದೆ. ಆದ್ರೆ, ಆ ಬಗ್ಗೆ ನಾನೇನು ಮಾಡಲು ಸಾಧ್ಯವಿಲ್ಲ. ನಿಮ್ಮಂಥ ದೇಶಪ್ರೇಮಿಯನ್ನು ಹೆತ್ತ ಭಾರತ ಮಾತೆ ನಿಜಕ್ಕೂ ಪುಣ್ಯವಂತೆ ಅಂತಾ ಹೇಳಿ ಪತಿಗೆ ಅಂತಿಮ ನಮನ ಸಲ್ಲಿಸಿದ್ರು.ಅಷ್ಟೇ ಅಲ್ಲ ತಮ್ಮ ಪತಿಯನ್ನು ಹೊತ್ತು ತಂದ ಶವಪೆಟ್ಟಿಗೆಯನ್ನು ಮುಟ್ಟಿದ ಅವರು ನಂತರ ತಮ್ಮ ಪತಿಯ ಕೆನ್ನೆ ಸವರಿದ್ರು. ದೂರದಿಂದಲೇ ಚುಂಬನವನ್ನು ಸಹ ತೇಲಿ ಬಿಟ್ಟ ನಿಕಿತಾ, ತಮ್ಮ ಕಣ್ಣೀರನ್ನು ಒರೆಸಿಕೊಂಡು, ‘ನಿಮ್ಮನ್ನು ನಾವೆಲ್ಲರೂ ಪ್ರೀತಿಸುತ್ತೇವೆ. ಈ ದೇಶಕ್ಕಾಗಿ ನೀವು ಮಹಾತ್ಯಾಗ ಮಾಡಿದ್ದೀರಿ. ನೀವು ಮಹಾನ್ ಧೈರ್ಯವಂತ. ನಾನು ನಿಮ್ಮನ್ನು ಪತಿಯಾಗಿ ಪಡೆದಿದ್ದಕ್ಕೆ ಹೆಮ್ಮೆ ಪಡುತ್ತೇನೆ. ನನ್ನ ಕೊನೆ ಉಸಿರು ಇರೋ ತನಕ ನಾನು ನಿಮ್ಮನ್ನು ಪ್ರೀತಿಸುತ್ತೇನೆ ವಿಭು. ನೀವು ನನ್ನನ್ನು ಬಿಟ್ಟು ಹೋಗುತ್ತಿದ್ದೀರಿ ಅನ್ನೋದು ಅಗಾಧ ನೋವನ್ನುಂಟು ಮಾಡುತ್ತಿದೆ. ಆದರೂ ನೀವು ನಮ್ಮ ಜೊತೆನೇ ಇರುತ್ತೀರಿ ಅಂತ ನಮಗೆ ತಿಳಿದಿದೆ. ನಾನು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ. ನನಗೆ ಸಾಂತ್ವನ ಹೇಳಬೇಡಿ, ಬದಲಿಗೆ ನೀವೂ ಗಟ್ಟಿಯಾಗಿರಿ’ ಅಂತಾ ಹೇಳುತ್ತಾ ಸೆಲ್ಯೂಟ್ ಮಾಡಿದ್ರು. ಈ ವೇಳೆ ಅಲ್ಲಿ ನೆರದಿದ್ದವರ ಕಣ್ಣೀರು ಮಳೆಗೂ ಅಂಜದೇ ಚಿಮ್ಮುತ್ತಿದ್ದರೆ, ಎಲ್ಲರ ಹೃದಯದಲ್ಲೂ ದೇಶಪ್ರೇಮ ತಾಂಡವವಾಡುತ್ತಿತ್ತು.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *