Breaking News

ಕಮಲಾಪುರ | ಐಪಿಎಲ್ ಬೆಟ್ಟಿಂಗ್‌ನಲ್ಲಿ ನಷ್ಟ: ಹಿನ್ನೀರಿಗೆ ಹಾರಿ ವ್ಯಕ್ತಿ ಸಾವು

ಕಮಲಾಪುರ: ತಾಲ್ಲೂಕಿನ ನಾಗೂರ ಬಳಿಯ ಸೇತುವೆ ಮೇಲಿಂದ ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಹಾರಿ ಶುಕ್ರವಾರ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಗಿ ತಾಲ್ಲೂಕಿನ ರುಮ್ಮನಗೂಡ ಗ್ರಾಮದ ನಿವಾಸಿ ಚಂದ್ರಕಾಂತ ಮಾಧವರಾವ ದೇಸಾಯಿ (40) ಮೃತಪಟ್ಟವರು. ಐಪಿಎಲ್ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಬೆಳಿಗ್ಗೆ ಮನೆಯಿಂದ ಹೊರ ಬಂದಿದ್ದು, ನಾಗೂರ ಸೇತುವೆ ಬಳಿ ಬೈಕ್ ನಿಲ್ಲಿಸಿ, ಮೊಬೈಲ್ ಇಟ್ಟು ನೀರಿಗೆ ಜಿಗಿದಿದ್ದಾರೆ. ಚಂದ್ರಕಾಂತ ನೀರಿಗೆ ಹಾರುವುದನ್ನ ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಮೃತದೇಹ ಪತ್ತೆಯಾಗಿದೆ. ಮಹಾಗಾಂವ ಪೊಲೀಸ ಠಾಣೆ ಪಿಎಸ್‌ಐ ಬಸವರಾಜ ಚಿತ್ತಕೋಟೆ, ಸಿಬ್ಬಂದಿ ಹಣಮಂತ ರೆಡ್ಡಿ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Share News

About BigTv News

Check Also

ವಿಜಯಪುರದಲ್ಲಿ ಹಾಡಹಗಲೇ ಫೈರಿಂಗ್ : ನಡು ರಸ್ತೆಯಲ್ಲೇ ಗುಂಡಿನ ದಾಳಿ ನಡೆಸಿ, ವ್ಯಕ್ತಿಯ ಹತ್ಯೆ!

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಟಕ್ಕೆ ಗ್ರಾಮದ ಯಾಸೀನ್ ಜುಬೇರ್ (ಮೃತ) ಸ್ಕೂಟಿಯಲ್ಲಿ …

Leave a Reply

Your email address will not be published. Required fields are marked *