ರಾಯಚೂರು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಇತ್ತ ರಾಯಚೂರು ಜಿಲ್ಲೆಯ ತಲೇಖಾನ್ ಗ್ರಾಮದಲ್ಲಿ ಪಾಕಿ ಮನಸ್ಥಿತಿಯ ಕೆಲ ದೇಶದ್ರೋಹಿಗಳು ಉಗ್ರರ ದಾಳಿ ಬೆಂಬಲಿಸಿ ಕೆಕೆ ಹಾಕಿ ಸಂಭ್ರಮಿಸಿದ್ದರು. ಪರಸ್ಪರ ಹಸಿರು ಬಣ್ಣ ಎರಚಾಡಿಕೊಂಡು ಪಟಾಕಿ ಸಿಡಿಸಿ ಸಂಭ್ರಮಿಸದ್ದರು. ಘಟನೆ ಕುರಿತಂತೆ 5 ಜನ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಅವರನ್ನ ಜೈಲಿಗಟ್ಟಿದ್ದಾರೆ. ಈಗ ಆರೋಪಿಗಳ ಪರವಾಗಿ ವಕಾಲತ್ತು ಮಾಡದಿರಲು ವಕಿಲರ ಸಂಘ ನಿರ್ಧರಿಸಿದ್ದು, ಆರೋಪಿಗಳನ್ನು ಜೈಲಿನಲ್ಲೆ ಕೊಳೆಯುವಂತೆ ಮಾಡಿದ್ದಾರೆ.ಆರೋಪಿಗಳ ಪರ ವಕಾಲತ್ತು ವಹಿಸಲು ಸೋಮವಾರ ಸಿಂಧನೂರಿನಿಂದ ಬಂದಿದ್ದ ವಕೀಲ ಎಸ್ಎಂಪಿ ಖಾದ್ರಿ ಹಾಗು ಸ್ಥಳೀಯ ವಕೀಲರ ಮಧ್ಯೆ ಕೆಲಕಾಲ ವಾಗ್ವಾದ ಉಂಟಾಯಿತು. ನಂತರ ವಕೀಲರ ಸಂಘ ತೆಗೆದುಕೊಂಡಿರುವ ತಿರ್ಮಾಣಕ್ಕೆ ವಕೀಲ ಖಾದ್ರಿ ಕೂಡ ಬೆಂಬಲ ಸೂಚಿಸಿ ವಕಾಲತ್ತು ನಡೆಸುವುದನ್ನ ಕೈಬಿಟ್ಟಿದ್ದಾರೆ. ಜಿಲ್ಲೆಯ ವಕೀಲರ ಸಂಘಗಳು ಕೂಡ ಬೆಂಬಲ ಸೂಚಿಸಿವೆ. ಇನ್ನು ರಾಯಚೂರು ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದಲ್ಲಿ, ದೇಶದಲ್ಲಿ ಪಾಕಿ ಮನಸ್ಥಿತಿಯ ಕೆಲ ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರ ಕೃತ್ಯಕ್ಕೆ ಬೆಂಬಲ ಸೂಚಿಸಿರುವ ಘಟನೆಗಳು ಕೂಡ ಜರುಗಿವೆ. ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನುತ್ತಿರುವ ದೇಶ ದ್ರೋಹಿಗಳನ್ನು ಕೂಡಲೇ ಸರ್ಕಾರ ಮಟ್ಟಹಾಕಿ, ಭಾರತದಿಂದ ಗಡಿಪಾರು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





