ನವದೆಹಲಿ: ಬಿಹಾರದ ಬೆಗುಸಾರೈ ನಿಂದ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಈಗ ನಾಮಪತ್ರ ಸಲ್ಲಿಸುವ ವೇಳೆ ತಮ್ಮನ್ನು ನಿರುದ್ಯೋಗಿ ಎಂದು ಘೋಷಿಸಿಕೊಂಡಿದ್ದಾರೆ.2016 ರಲ್ಲಿ ಜೇನ್ಯು ಪ್ರಕರಣದಲ್ಲಿ ದೇಶವ್ಯಾಪಿ ಖ್ಯಾತಿ ಗಳಿಸಿದ್ದ ಕನ್ನಯ್ಯ ಕುಮಾರ್ ಈಗ ಅಧಿಕೃತವಾಗಿ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದಾರೆ.ಈಗ ಬೆಗುಸಾರೈನಲ್ಲಿ ಬಿಜೆಪಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಪ್ರಮುಖ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ. ತಮ್ಮ ಆದಾಯವನ್ನು 8.5 ಲಕ್ಷ ಎಂದು ಘೋಷಿಸಿಕೊಂಡಿರುವ ಅವರು …
Read More »ಚೌಕಿದಾರ್ ನಾಟಕ ಬಹಳ ದಿನ ನಡೆಯಲ್ಲ: ಮಾಯಾವತಿ..
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬುಧವಾರ ಭಾಗವಹಿಸಿದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಸ್ವಾತಂತ್ಯಾ ನಂತರ ಹಲವು ವರ್ಷಗಳ ಕಾಲ ದೇಶದ ಅಧಿಕಾರ ಕಾಂಗ್ರೆಸ್ ಹಾಗೂ ಬಿಜೆಪಿ ಕೈಯಲ್ಲೇ ಇತ್ತು. ಆದರೆ ದೇಶದಲ್ಲಿ ಬಡತನ ನಿರ್ಮೂಲನೆ ಅವರಿಂದ ಸಾಧ್ಯವಾಗಲಿಲ್ಲ. ಈಗ ಬಡವರಿಗೆ ಹಣ ನೀಡುತ್ತಿದ್ದಂತೆ ಬಡತನ ನಿರ್ಮೂಲನೆಯಾಗುವುದೇ ಎಂದು ಪ್ರಶ್ನಿಸಿದ ಮಾಯಾವತಿ, ಕಾಂಗ್ರೆಸ್ ನ …
Read More »ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ: ಹೆಚ್.ಡಿ ರೇವಣ್ಣ..
ಮೈಸೂರು: 6, 7,8 ನನಗೆ ಲಕ್ಕಿ ನಂಬರ್. ಬೇಕಾದ್ರೆ ಡೈರಿಯಲ್ಲಿ ಬರೆದು ಇಟ್ಕೊಳಿ, ಮೋದಿ ಮತ್ತೆ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತೀನಿ. 18 ಲಕ್ಕಿ ನಂಬರ್ ಈ ಬಾರಿ ಮೊದಲ ಹಂತದ 14 ಅಭ್ಯರ್ಥಿಗಳು ನಾವೇ ಗೆಲ್ತೀವಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ 6, 8, 22 ಅದೃಷ್ಟ ಸಂಖ್ಯೆಗಳೇ. 18 ಅಂದರೆ 1+8=9. 9 ಬಹಳ …
Read More »ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಸಾವು..
ತೆಲಂಗಾಣ: ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ತೆಲಂಗಾಣದ ನಾರಾಯಣ್ ಪೇಟೆಯ ತಿಲೆರು ಗ್ರಾಮದಲ್ಲಿ ನಡೆದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ. ಕುಸಿದ ದಿಬ್ಬದಿಂದ ಹೊರಬರಲು ಸಾಧ್ಯವಾಗದೇ ಮಣ್ಣಿನಡಿ ಸಿಲುಕಿದ್ದಾರೆ. ಈಗಾಗಲೇ 10 ಮೃತದೇಹಗಳನ್ನು ಹೊರತೆಗೆದಿದ್ದು, ಐವರು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ …
Read More »12ಕ್ಕೆ ನೀರಿದ್ದರೆ ನಾಳೆ ಕೃತಿ ಬಿಡುಗಡೆ ಸಮಾರಂಭ
ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನದ ಸಹಯೋಗದಲ್ಲಿ ನೀರಿದ್ದರೆ ನಾಳೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಇದೇ 12ರಂದು ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಸುಬ್ರಹ್ಮಣ್ಯ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನೀಕರಣದ ವ್ಯವಸ್ಥೆಯಿಂದಾಗಿ ಜೀವನದಿಗಳು ಸಾವಿನ ಅಂಚಿನಲ್ಲಿರುವುದು ವಿಷಾದಕರ ಸಂಗತಿಯಾಗಿದ್ದು, ಇದೇ ವ್ಯವಸ್ಥೆ ಮುಂದುವರೆದರೇ ಮುಂದೊಂದು ದಿನ ನೀರು ಇಲ್ಲದೇ ಕುಡಿಯುವ ನೀರಿಗೆ ಗಂಡಾಂತರ ಎದುರಾಗುತ್ತದೇ ಎಂದರು. ಇಂತಹ ಹಲವಾರು …
Read More »ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಪೂರಕ ಬೆಂಬಲ ಸೂಚಿಸಲು ನಾವೆಲ್ಲರೂ ಸಿದ್ಧ: ಸನದಿ
ಹುಬ್ಬಳ್ಳಿ:ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕಿತ್ತು ಆದರೇ ನೀಡಿಲ್ಲ. ಆದರೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ ಹಾಗೂ ಶಾಕೀರ್ ಸನದಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಧಾರವಾಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಸರ್ವಾನುಮತದಿಂದ ಬೆಂಬಲ ಸೂಚಿಸುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದರು. …
Read More »ತಪ್ಪು ಮಾಹಿತಿ ನೀಡಿದ್ರೆ ಕ್ರಿಮಿನಲ್ ಕೇಸ್; ಅಧಿಕಾರಿಗಳಿಗೆ ‘ಹೈ’ ಎಚ್ಚರಿಕೆ
ಬೆಂಗಳೂರು: ನಾಕೋಡ ಡೆವಲಪರ್ಸ್ ಸೇರಿದಂತೆ ನಗರದಲ್ಲಿ ನಿರ್ಮಾಣ ಆಗಿರುವ ಅಪಾರ್ಟ್ಮೆಂಟ್ಗಳಿಗೆ ಬಿಬಿಎಂಪಿ ಸ್ವಾಧೀನ ಪ್ರಮಾಣಪತ್ರ ನೀಡಿದ ಸಂಬಂಧ ಹೈಕೋರ್ಟ್ ಗರಂ ಆಗಿದೆ. ಪ್ರಕರಣ ಸಂಬಂಧ ಖುದ್ದು ಹಾಜರಾಗುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ಗೆ ಹೈಕೋರ್ಟ್ ನ್ಯಾಯಮೂರ್ತಿ ಸತ್ಯನಾರಾಯಣ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದ್ರು. ಮಂಜುನಾಥ್ ಪ್ರಸಾದ್ ಜಿಲ್ಲಾ ಚುನಾವಣಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ ಮಧ್ಯಾಹ್ನ 2.30ಕ್ಕೆ ಕೋರ್ಟ್ಗೆ ಆಗಮಿಸಿದ್ರು.ವಿಚಾರಣೆ ವೇಳೆ, ನ್ಯಾ. ಸತ್ಯನಾರಾಯಣ ಕಂದಾಯ ಇಲಾಖೆ, ಬಿಬಿಎಂಪಿ ಮತ್ತು ಬಿಡಿಎಯಲ್ಲಿ …
Read More »ಕುಲಕರ್ಣಿಗೆ ಮತ್ತೆ ಸಂಕಷ್ಟ, ಕೊಲೆ ಪ್ರಕರಣ ತನಿಖೆ ಮಾಡುವಂತೆ ಕೋರ್ಟ್ ಆದೇಶ
ಧಾರವಾಡ: ಮೈತ್ರಿ ಕೂಟದ ಲೋಕಸಭಾ ಚುನಾವಣಾ ಅಭ್ಯರ್ಥಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದೆ. ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಭಂದಪಟ್ಟಂತೆ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ಮೂವರ ವಿರುದ್ಧ …
Read More »ಟಿಕ್ ಟಾಕ್ ಬ್ಯಾನ್ಗಾಗಿ ಕೋರ್ಟ್ ಮೊರೆ ಹೋದ ಮಹಿಳಾ ಆಯೋಗ..
ಬೆಂಗಳೂರು: ಟಿಕ್ ಟಾಕ್ ವಿರುದ್ಧ ಕಾನೂನು ಸಮರ ಸಾರಲು ಮಹಿಳಾ ಆಯೋಗ ಮುಂದಾಗಿದೆ. ಟಿಕ್ ಟಾಕ್ನ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದ್ರಿಂದ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಮಹಿಳಾ ಆಯೋಗ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಟಿಕ್ ಟಾಕ್ ಸಂಪೂರ್ಣ ನಿಷೇಧಕ್ಕಾಗಿ ಕೋರ್ಟ್ಗೆ ಮೊರೆ ಹೋಗಿದ್ದೇವೆ. ಟಿಕ್ ಟಾಕ್ ವಿರುದ್ಧ ಮಹಿಳಾ ಆಯೋಗಕ್ಕೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು
Read More »ವಿವಿಪ್ಯಾಟ್ ಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಜಾರಿಗೆ ಕ್ರಮ: ಆಯೋಗ..
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಒಂದು ಕ್ಷೇತ್ರದಿಂದ ಒಂದು ಇವಿಎಂನಲ್ಲಿ ಒಂದು ವಿವಿಪ್ಯಾಟ್ ಬದಲಾಗಿ 5 ಇವಿಯಂಗಳಿಂದ ವಿವಿಪ್ಯಾಟ್ ರಶೀದಿಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.ಭಾರತದ ಚುನಾವಣಾ ಆಯೋಗವು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯರೂಪಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಲಿದೆ” ಎಂದು ಚುನಾವಣಾ ಸಮಿತಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಖರತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





