ಅಹಮದಾಬಾದ್: ಪಟೇದಾರ್ ಕೋಟಾ (ಪಟೇಲ್ ಮೀಸಲಾತಿ) ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಬುಧವಾರ ತಮ್ಮ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಪಟೇಲ್ ಸಮುದಾಯದ ಎರಡು ಮುಖ್ಯ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳಾದ ಖೋಡಾಲ್ ಧಾಮ್ ಹಾಗೂ ಉಮ್ಯಾಧಾಮ್ ಗಳ ಮುಖಂಡರಾದ ಹಾರ್ಡಿಕ್ ಅವರ ನಿಕಟ ಸಹಾಯಕ ಮತ್ತು ಪಟಿದರ್ ಅನಾಮತ್ ಆಂದೋಲನ ಸಮಿತಿಯ ಸಂಚಾಲಕ ಮನೋಜ್ ಪನಾರಾ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಘೋಷಿಸಿದ್ದಾರೆ. ಪಟೇಲ್ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ …
Read More »ಥೇನ್ ಅನಿಲ ಟ್ಯಾಂಕ್ ಬ್ಲಾಸ್ಟ್, 6 ಸಾವು
ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿಯ ಅವಘಡ ಸಂಭವಿಸಿದೆ. ಬಿಜ್ನೋರ್-ಮೊಹಿತ್ ಪೆಟ್ರೊ ಕೆಮಿಕಲ್ ಫ್ಯಾಕ್ಟರಿನಲ್ಲಿ ಮೀಥೇನ್ ಅನಿಲದ ಟ್ಯಾಂಕ್ ಬ್ಲಾಸ್ಟ್ ಆಗಿದ್ದು, ಅದರಿಂದ ಇಡೀ ಕಾರ್ಖಾನೆ ಹೊತ್ತಿ ಉರಿದಿದೆ ಎಂದು ಹೇಳಲಾಗಿದೆ. ಕಾರ್ಖಾನೆಯಲ್ಲಿ ಬೆಂಕಿ ತಗುಲಿರುವ ಸುದ್ದಿ ತಿಳಿದ ನಂತರ ಅಲ್ಲಿ ಕೆಲಸ ಮಾಡುವವರಲ್ಲಿ ಆತಂಕ ಉಂಟಾಯಿತು. 6 ಕಾರ್ಮಿಕರ ಸಾವು: ಬೆಂಕಿ ಅವಘಡದ ಸುದ್ದಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ …
Read More »ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ:
ಮೈಸೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ತೆರೆಮರೆಯಲ್ಲಿ ಅಪರೇಷನ್ ಕಮಲಕ್ಕೆ ಯತ್ನಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಬಿಜೆಪಿಯ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಕಮಲ ಪಾಳಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ ‘ಹಲವು ವರ್ಷಗಳು ನಾನೂ ಬಿಜೆಪಿಯಲ್ಲಿ ಇದ್ದವನು. ಬಿಜೆಪಿಯ ಕೆಲ ನಾಯಕರಿಗೆ ಈಗ ಅಧಿಕಾರದ ಆಸೆ ಹಿಡಿದಿದೆ. …
Read More »ಈ ರಾಜ್ಯದ ಶಿಕ್ಷಕರಿಗೆ ಸಿಗಲಿದೆ ಡಬಲ್ ಉಡುಗೊರೆ
ರಾಯ್ಪುರ್: ಛತ್ತೀಸ್ಗಡ ಸರ್ಕಾರವು ರಾಜ್ಯ ಶಿಕ್ಷಕರರಿಗೆ ಏಳನೇ ವೇತನವನ್ನು ಉಡುಗೊರೆಯಾಗಿ ನೀಡಿದೆ. ಮುಖ್ಯಮಂತ್ರಿ ಡಾ.ರಾಮನ್ ಸಿಂಗ್ 2016 ರಿಂದ ಏಳನೇ ವೇತನ ಪ್ರಮಾಣ ಮತ್ತು ಅರಿಯರ್ಸ್ ಅನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಉದ್ಯೋಗಿಗಳಿಗೆ ಘೋಷಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 6 ರಿಂದ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ ಕೊನೆಯಲ್ಲಿ ಛತ್ತೀಸ್ಗಡದಲ್ಲಿ ಚುನಾವಣಾ ನಡೆಯಲಿದೆ. ಈ ಹಿನ್ನೆಲೆಯಲಿ ಛತ್ತೀಸ್ಗಡ ಸರ್ಕಾರ ನೂತನ …
Read More »ಕಾಂಗ್ರೆಸ್ ಪಕ್ಷದಲ್ಲಿ ಗೊತ್ತಿಲ್ಲದೇ..?
ಬೆಂಗಳೂರು: ಈಗ ಕಾಂಗ್ರೆಸ್ ಪಕ್ಷ ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಿದೆ. ಈಗ ಈ ತಂತ್ರಕ್ಕೆ ವಿಚಿತ್ರವಾದ ಹೆಸರನ್ನು ನಾಮಕಾರಣ ಮಾಡಿದೆ,ಅದೇನಪ್ಪಾ ಅಂದರೆ ಸೂಸೈಡ್ ಸ್ಕ್ವಾಡ್. ಹೌದು, ಈ ಹೆಸರು ನಿಮಗೆ ಅಚ್ಚರಿ ಮೂಡಿಸಬಹುದು.ಹಾಗಂತ ಈ ಸ್ಕ್ವಾಡ್ ಯಾವುದೋ ಸೈನ್ಯವಿರಬಹುದೋ ಎಂದು ತಿಳಿದುಕೊಳ್ಳಬೇಡಿ.ಈಗ ಈ ಹೆಸರನ್ನು ಬಿಜೆಪಿ ಹೆಣೆದಿರುವ ಆಪರೇಷನ್ ಕಾರ್ಯಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಈ ಹೆಸರನ್ನಿಟ್ಟಿದೆ. ಏನಿದು ಸುಸೈಡ್ ಸ್ಕ್ವಾಡ್ ? ಈಗ ಪುನಃ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು …
Read More »ಗಣೇಶ ಹಬ್ಬದಲ್ಲಿ ಅಹಿತಕರ ಘಟನೆ ನಡೆದರೇ ಎಸಿಪಿಗಳೇ ಹೊಣೆ: ಡಿಸಿಎಂ.
ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಆಯಾ ವಲಯದ ಡಿಸಿಪಿ ಹಾಗೂ ಎಸಿಪಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಮೇಲ್ಮಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಗಣೇಶ ಹಬ್ಬಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ …
Read More »ಗೃಹ ಬಂಧನ ವಿಸ್ತರಿಸಿದ ಸುಪ್ರೀಂ
ನವದೆಹಲಿ: ಸುಪ್ರಿಂಕೋರ್ಟ್ ಐವರು ಮಾನವ ಹಕ್ಕು ಹೋರಾಟಗಾರ ಗೃಹ ಬಂಧನವನ್ನು ಸೆಪ್ಟೆಂಬರ್ 17 ರವರೆಗೆ ವಿಸ್ತರಿಸಿದೆ. ಮಾವೋವಾದಿಗಳ ಸಂಪರ್ಕದಲ್ಲಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಕಳೆದ ತಿಂಗಳು ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಗೃಹ ಬಂಧನದಲ್ಲೇ ಇದ್ದಾರೆ. ಈ ಹೋರಾಟಗಾರರ ಬಂಧನವನ್ನು ವಿರೋಧಿಸಿ ರೋಮಿಲಾ ಥಾಪರ್ ಮತ್ತು ಇತರ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತ್ತು. ಈ ವೇಳೆಯಲ್ಲಿ ಮಹಾರಾಷ್ಟ್ರದ ಪೊಲೀಸರು ಕಳೆದ ವಾರ ಸುಪ್ರೀಂಗೆ ಹೋರಾಟಗಾರರನ್ನು ಬಂಧಿಸಿರುವುದು ಅವರ …
Read More »ಬಿಜೆಪಿಗೆ ಡಿಕೆಶಿ ಸವಾಲು
ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ. ಶಿವಕುಮಾರ್, ‘ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ’ ಎಂದು ಬಿಜೆಪಿಗೆ ಸವಾಲೆಸೆದಿದ್ದಾರೆ. ರಾಜಕೀಯ ಚೆಸ್ ಆಟವಿದ್ದಂತೆ. ಬಿಜೆಪಿಯವರು ಒಂದೇ ಒಂದು ಪಾನ್ ಜರುಗಿಸಲಿ ನೋಡೋಣ. ಆಮೇಲೆ ಎಂಥ ನಡೆ ನಡೆಸಬೇಕು ಅನ್ನೋದನ್ನು ನಾವು ನಿರ್ಧರಿಸುತ್ತೇವೆ ಎಂದಿರುವ ಡಿಕೆಶಿ, ‘ರಾಜಕೀಯ ಅಂದ್ರೆ ಹಾಗೇನೆ. ಒಂದು ಸ್ಥಾನ ಖಾಲಿಯಾದರೂ ಆ ಸ್ಥಾನಕ್ಕೆ …
Read More »ಸಿಎಂ ‘ಜನತಾ ದರ್ಶನ’
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶನಿವಾರ ಸುವರ್ಣ ವಿಧಾನ ಸೌಧದಲ್ಲಿ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಜನತಾದರ್ಶನ ನಡೆಸಲಿದ್ದಾರೆ. ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೆಪ್ಟೆಂಬರ್15 ರಂದು ಬೆಳಗಾವಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಸುವರ್ಣ ವಿಧಾನ ಸೌಧದಲ್ಲಿ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಜನತಾದರ್ಶನ ನಡೆಸಲಿದ್ದಾರೆ. ಸೆಪ್ಟೆಂಬರ್15 ರಂದು ಬೆಳಿಗ್ಗೆ ಬೆಳಗಾವಿಯಲ್ಲಿ ರಾಷ್ಟ್ರಪತಿಗಳೊಂದಿಗೆ ಕೆಎಲ್ಎಸ್ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 3.00 …
Read More »ಹಸಿದ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟೀನ್ ಗಳು ಆರಂಭವಾದವು..
ಹಸಿದು ಹೊಟ್ಟೆ ತುಂಬಿಸ್ಬೇಕೆಂದು ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದ್ರೂ ಹುಬ್ಬಳ್ಳಿ-ಧಾರವಾಡದಲ್ಲಿ ಅವುಗಳಿಗೆ ಚಾಲನೆ ಸಿಕ್ಕಿರಲಿಲ್ಲ. ಎಲ್ಲಿ ಈ ಯೋಜನೆ ಕ್ಲಿಕ್ಕಾಗಿ ಜನರಿಗೆ ಮನಸ್ಸು ಗೆಲ್ಲುತ್ತೇನೋ ಅಂತ ಅದಕ್ಕೆ ಕಾಣದ ಕೈಗಳು ಅಡ್ಡಿಪಡಿಸಿದ್ದೇ ಜಾಸ್ತಿ. ಈಗ ಅಂತೂ ಎಲ್ಲ ತೊಡಕು ನಿವಾರಿಸಿ ಈಗ ಅವಳಿನಗರದಲ್ಲಿ ಕ್ಯಾಂಟೀನ್ ಗಳಿಗೆ ಚಾಲನೆ ಸಿಕ್ಕಿದೆ. ಹಸಿವು ನೀಗಿಸಿಕೊಳ್ಳೋದಷ್ಟೇ, ಆ ಕ್ಷಣಕ್ಕೆ ಮುಖ್ಯ. ಬಡವನ ಹಸಿವು ಅಂಥದ್ದು. ಬೆವರು ಸುರಿಸಿ ದುಡಿಯೋ ಅವರಿಗೇ ಗೊತ್ತು ಈ ಹಸಿವು ಮಹತ್ವ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





