Breaking News

ಕಾಂಗ್ರೆಸ್ ಪಕ್ಷದಲ್ಲಿ ಗೊತ್ತಿಲ್ಲದೇ..?

ಬೆಂಗಳೂರು: ಈಗ ಕಾಂಗ್ರೆಸ್ ಪಕ್ಷ  ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಿದೆ. ಈಗ ಈ ತಂತ್ರಕ್ಕೆ ವಿಚಿತ್ರವಾದ ಹೆಸರನ್ನು ನಾಮಕಾರಣ ಮಾಡಿದೆ,ಅದೇನಪ್ಪಾ ಅಂದರೆ ಸೂಸೈಡ್ ಸ್ಕ್ವಾಡ್.
ಹೌದು, ಈ ಹೆಸರು ನಿಮಗೆ ಅಚ್ಚರಿ ಮೂಡಿಸಬಹುದು.ಹಾಗಂತ ಈ ಸ್ಕ್ವಾಡ್ ಯಾವುದೋ ಸೈನ್ಯವಿರಬಹುದೋ ಎಂದು ತಿಳಿದುಕೊಳ್ಳಬೇಡಿ.ಈಗ ಈ ಹೆಸರನ್ನು ಬಿಜೆಪಿ ಹೆಣೆದಿರುವ ಆಪರೇಷನ್ ಕಾರ್ಯಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಈ ಹೆಸರನ್ನಿಟ್ಟಿದೆ.
ಏನಿದು ಸುಸೈಡ್ ಸ್ಕ್ವಾಡ್ ?
ಈಗ ಪುನಃ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಮುಂದಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವೇನು ಇದನ್ನು ಸುಮ್ಮನೆ ನೋಡಿಕೊಂಡು ಕುಳಿತಿಲ್ಲ, ಬದಲಾಗಿ ಅದು ಕೂಡ ಪ್ರತಿ ಕಾರ್ಯಾಚರಣೆಗೆ ಮುಂದಾಗಿದೆ. ಹಾಗಾದರೆ ಆ ಕಾರ್ಯಾಚರಣೆ ಯಾವುದೆಂದರೆ ಸುಸೈಡ್ ಸ್ಕ್ವಾಡ್ (ಆತ್ಮಹತ್ಯಾದಳ). ಈ ಕಾರ್ಯಾಚರಣೆಯ ವಿಧಾನವೆಂದರೆ ಪಕ್ಷದ ಹಿರಿಯ ಸಚಿವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಆಪರೇಷನ್ ಹಸ್ತದ ಮೂಲಕ ಆಹ್ವಾನಿಸಿದ ಶಾಸಕರಿಗೆ ಸಚಿವ ಸ್ಥಾನವನ್ನು ಬಿಟ್ಟು ಕೂಡುವುದು ಈ ಕಾರ್ಯಾಚರಣೆಯ ಒಟ್ಟು ಉದ್ದೇಶವಾಗಿದೆ. ಆದ್ದರಿಂದ ಪಕ್ಷದಲ್ಲಿರುವ ಕೆಲವು ಹಿರಿಯ ಕಾಂಗ್ರೆಸಿಗರಿಗೆ ಸಾಧ್ಯವಾದಲ್ಲಿ ಸಚಿವಸ್ಥಾನದ ಹುದ್ದೆಯನ್ನು ತ್ಯಜಿಸಲು ಮುಂದಾಗಿ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ.
ಆ ಮೂಲಕ ಈಗ ಕಾಂಗ್ರೆಸ್ ಪಕ್ಷವು ಮೈತ್ರಿ ಸರ್ಕಾರವನ್ನು ಉಳಿಸುವ ಹರ ಸಾಹಸಕ್ಕೆ  ಮುಂದಾಗಿದೆ ಎಂದು ತಿಳಿದುಬಂದಿದೆ.ಈ ಸ್ಕ್ವಾಡ್ ರಚನೆಗೆ ಈಗಾಗಲೇ ಹೈಕಮಾಂಡ್  ರಾಜ್ಯದ ನಾಯಕರಿಗೆ ತಿಳಿಸಿದೆ ಎನ್ನಲಾಗಿದೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *