ಹಸಿದು ಹೊಟ್ಟೆ ತುಂಬಿಸ್ಬೇಕೆಂದು ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿದ್ರೂ ಹುಬ್ಬಳ್ಳಿ-ಧಾರವಾಡದಲ್ಲಿ ಅವುಗಳಿಗೆ ಚಾಲನೆ ಸಿಕ್ಕಿರಲಿಲ್ಲ. ಎಲ್ಲಿ ಈ ಯೋಜನೆ ಕ್ಲಿಕ್ಕಾಗಿ ಜನರಿಗೆ ಮನಸ್ಸು ಗೆಲ್ಲುತ್ತೇನೋ ಅಂತ ಅದಕ್ಕೆ ಕಾಣದ ಕೈಗಳು ಅಡ್ಡಿಪಡಿಸಿದ್ದೇ ಜಾಸ್ತಿ. ಈಗ ಅಂತೂ ಎಲ್ಲ ತೊಡಕು ನಿವಾರಿಸಿ ಈಗ ಅವಳಿನಗರದಲ್ಲಿ ಕ್ಯಾಂಟೀನ್ ಗಳಿಗೆ ಚಾಲನೆ ಸಿಕ್ಕಿದೆ.
ಹಸಿವು ನೀಗಿಸಿಕೊಳ್ಳೋದಷ್ಟೇ, ಆ ಕ್ಷಣಕ್ಕೆ ಮುಖ್ಯ. ಬಡವನ ಹಸಿವು ಅಂಥದ್ದು. ಬೆವರು ಸುರಿಸಿ ದುಡಿಯೋ ಅವರಿಗೇ ಗೊತ್ತು ಈ ಹಸಿವು ಮಹತ್ವ. ಇಂಥ ಹಸಿದ ಹೊಟ್ಟೆ ತುಂಬಿಸೋಕೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದೇ ಇಂದಿರಾ ಕ್ಯಾಂಟೀನ್ ಯೋಜನೆ. ಧಾರವಾಡ ಜಿಲ್ಲೆಯಲ್ಲಿ 15 ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ವು. ಅದರಲ್ಲಿ ಅವಳಿನಗರಕ್ಕೆ 12 ಮಂಜೂರಾಗಿವೆ. ಇದರಲ್ಲೀಗ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ 3 ಕ್ಯಾಂಟೀನ್ ಗಳಿಗೆ ಉದ್ಘಾಟನಾ ಭಾಗ್ಯ ಸಿಕ್ಕಿದೆ. ಹಸಿದ ಬಡವರಿಗೆ ಶುಚಿ-ರುಚಿ ಊಟ- ಉಪಹಾರ ಇನ್ಮೇಲೆ ಸಿಗಲಿದೆ. ಅನ್ನ ಭಾಗ್ಯದ ಒಂದು ಭಾಗ ಇಂದಿರಾ ಕ್ಯಾಂಟೀನ್. ರಾಜ್ಯದ ಅನೇಕ ಕಡೆಗೆ ಈ ಕ್ಯಾಂಟೀನ್ ಗಳಿವೆ. ಆದ್ರೇ, ಅವಳಿನಗರದ 12ರಲ್ಲಿ 9 ಕ್ಯಾಂಟೀನ್ ನಿರ್ಮಾಣವಾಗಿವೆ. ಆದ್ರೇ, ಇನ್ನೂ 3 ಕ್ಯಾಂಟೀನ್ ನಿರ್ಮಾಣವಾಾಗದಿರೋದಕ್ಕೆ ಜಾಗ ಸೇರಿ ಇನ್ನಿತರ ತೊಡಕುಗಳಿವೆ. ಅದರಲ್ಲೂ ಕೆಲ ರಾಜಕಾರಣಿಗಳೇ ಈ ಜನಪ್ರಿಯ ಯೋಜನೆಗೆ ಅಡ್ಡಗಾಲು ಹಾಕಿದ್ರು. ಬೆಂಗಳೂರಿನಲ್ಲಿ ಈಗಾಗಲೇ ಈ ಯೋಜನೆ ಕ್ಲಿಕ್ಕಾಗಿದೆ. ನಿತ್ಯ ನಗರಕ್ಕೆ ದುಡಿಯಲು ಬರುವ ಬಡವರು, ಕಾರ್ಮಿಕರಿಗಾಗಿ ಮಾಡಿದ ಅತ್ಯುತ್ತಮ ಯೋಜನೆ, ಇದಕ್ಕೆ ಒಳ್ಳೇ ಶ್ಲಾಘನೆ ಕೂಡ ವ್ಯಕ್ತವಾಗಿದೆ.
ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಶಾಸಕ, ಹು-ಧಾ ಪೂರ್ವ
ಬೆಳಗ್ಗೆ 8.30ರಿಂದ.10.30ರವರೆಗೂ 5 ರೂ.ದರದಲ್ಲಿ ಉಪಹಾರ. ಮಧ್ಯಾಹ್ನ 12 ರಿಂದ 2 ಗಂಟೆ
ಸಂಜೆ 6 ರಿಂದ 8 ಗಂಟೆವರೆಗೂ 10 ರೂ.ಗೆ ಊಟ ಸಿಗಲಿದೆ. ಪ್ರತಿದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ- ರಾತ್ರಿ ಊಟಕ್ಕೆ ಮೆನು ಬದಲಾಗುತ್ತೆ. ಮಯೂರ್ ರೆಸಾರ್ಟ್ಸ್ ಇದರ ಸಂಪೂರ್ಣ ನಿರ್ವಹಣೆಯನ್ನ ಮಾಡ್ತಿದೆ. ಅಡುಗೆ ಪ್ರಿಪೇರ್, ಅದನ್ನ ಸಾಗಿಸೋದು, ಅದನ್ನ ಸರ್ವ್ ಮಾಡೋದು ಗುತ್ತಿಗೆ ಆಧಾರದಲ್ಲಿಯೇ ಇದು ನಡೀತದೆ. ಇದೆಲ್ಲ ಅಚ್ಚುಕಟ್ಟಾಗಿ ನಡೆದ್ರೇ, ಇದೊಂದೇ ವಿಧಾನಸಭಾ ಕ್ಷೇತ್ರದಲ್ಲಿ ೧೦ ಕ್ಯಾಂಟೀನ್ ಗಳಿಗೆ ಬರಲಿದೆ ಅಂತಾರೆ ಈ ಕ್ಷೇತ್ರದ ಶಾಸಕರು. ಎಲೆಕ್ಷನ್ ಕೋಡ್ ಆಫ್ ಕಂಡಕ್ಟ್ ಬಂದಿರೋದಕ್ಕೆ ಸ್ವಲ್ಪ ಲೇಟಾಗಿದೆ ಅಂತಾರೆ ಅಧಿಕಾರಿಗಳು. ಹುಬ್ಬಳ್ಳಿಯ ಬೆಂಗೇರಿ ಹಾಗೂ ಧಾರವಾಡದ ವಿಧೌನಸೌಧದಲ್ಲಿ ತಲಾ ಒಂದೊಂದು ಕಿಚನ್ ಸೆಂಟರ್ ಇದೆ. ಇಲ್ಲಿಂದಲೇ ಕ್ಯಾಂಟೀನ್ ಗಳಿಗೆ ಸಪ್ಲೈಯಾಗುತ್ತೆ. ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಲಾ 500 ಪ್ಲೇಟ್ ಮಾತ್ರ ಇರುತ್ತೆ. ಪ್ರತಿ ಕ್ಯಾಂಟೀನ್ ನಾಲ್ಕು ವರ್ಕರ್ ಓರ್ವ ಮ್ಯಾನೇಜರ್ ಹೊಂದಿರುತ್ತೆ. ಇಂದಿರಾ ಕ್ಯಾಂಟೀನ್
ಏನೇ ಆಗಲಿ ಸರ್ಕಾರದ ಮಹತ್ವಾಂಕ್ಷಿ ಉದ್ದೇಶ ಈಡೇರಲಿ. ಅಚ್ಚುಕಟ್ಟಾಗಿ ನಡೆದು ಬಡವರ ಹೊಟ್ಟೆ ತುಂಬಿಸುವ ಕೆಲಸವಾಗಲಿ.
bigtvnews | Hubli Dharwad News | Kannada News | Karnataka News Hubli News | News In Hubli | Local news




