ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣ ಇತ್ತೀಚೆಗೆ ತುರ್ತು ಭೂಸ್ಪರ್ಶ ಮಾಡಿದ, ಆತಂಕದಲ್ಲಿ ಲ್ಯಾಂಡಿಂಗ್ ಮಾಡಿದ ಉದಾಹರಣೆ ಹೆಚ್ಚಿದೆ. ಇದೀಗ ಬೆಂಗಳೂರಿ ಜೆಪಿ ನಗರದ ಸುತ್ತ ಮುತ್ತಲಿನ ಆಗಸದಲ್ಲಿ ಏರ್ ಇಂಡಿಯಾ ವಿಮಾನ ಬರೋಬ್ಬರಿ ಒಂದೂವರೆ ಗಂಟೆಯಿಂದ ಸುತ್ತಿದೆ.ವಿಮಾನ ಬೆಂಗಳೂರು ವಿಮಾನದಲ್ಲಿ ರೌಂಡ್ಸ್ ಮಾಡಿದ ಕಾರಣವನ್ನು ಏರ್ ಇಂಡಿಯಾ ಬಹಿರಂಗಪಡಿಸಿದೆ.ಬೆಂಗಳೂರಿನ ಜೆಪಿ ನಗರದ ಸುತ್ತಮುತ್ತಲಿನ ಆಗಸದಲ್ಲಿ ಏರ್ ಇಂಡಿಯಾ ಸಂಸ್ಥೆಯ AXB558 B738 ವಿಮಾನ ಪದೇ ಪದೇ ರೌಂಡ್ಸ್ ಹೊಡೆಯುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮಧ್ಯಾಹ್ನ 3:40 ರಿಂದ 5 ಘಂಟೆ ವರೆಗೆ ಆಕಾಶದಲ್ಲಿಯೇ ವಿಮಾನ ಹಾರಾಟ ನಡೆಸಿತ್ತು. ಜೆಪಿ ನಗರ 3rd ಫೇಸ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಫೋಟೋ, ವಿಡಿಯೋ ಸೆರೆ ಹಿಡಿದಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

