Breaking News

Shaikh BIG TV NEWS, Hubballi

ಈ ಮಿಸ್ ಯುನಿವರ್ಸ್ ಸುಂದರಿಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ!

ಈ ಮುಂಬೈ ಬೆಡಗಿ ಹಾಗೂ ಮಿಸ್ ಯುನಿವರ್ಸ್ 2018 ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೆಹಾಲ್ ಚುಡಾಸಮಾಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ,ಆದ್ದರಿಂದ ಈ ಸ್ಪರ್ಧೆ ಮುಗಿದ ನಂತರ ಪರೀಕ್ಷೆಗೆ ತಯಾರಿ ನಡೆಸುವುದಾಗಿ ತಿಳಿಸಿದ್ದಾಳೆ. ನವದೆಹಲಿ: ಈ ಮುಂಬೈ ಬೆಡಗಿ ಹಾಗೂ ಮಿಸ್ ಯುನಿವರ್ಸ್ 2018 ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೆಹಾಲ್ ಚುಡಾಸಮಾಗೆ ಐಎಎಸ್ ಅಧಿಕಾರಿಯಾಗುವ ಆಸೆಯಂತೆ,ಆದ್ದರಿಂದ ಈ ಸ್ಪರ್ಧೆ ಮುಗಿದ ನಂತರ ಪರೀಕ್ಷೆಗೆ ತಯಾರಿ ನಡೆಸುವುದಾಗಿ ತಿಳಿಸಿದ್ದಾಳೆ. ಈ …

Read More »

2019ರ ಲೋಕಸಭೆಯಲ್ಲಿ ಅಭ್ಯರ್ಥಿಯಾಗಿ ಕನ್ನಯ್ಯಕುಮಾರ್ ಸ್ಪರ್ಧೆ!

ನವದೆಹಲಿ: ವಿಧ್ಯಾರ್ಥಿ ನಾಯಕ ಕನ್ನಯ್ಯಕುಮಾರ್ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾತ್ ಖಬರ್ ವರದಿ ಮಾಡಿರುವ ಪ್ರಕಾರ ಬಿಹಾರದ ಬೇಗುಸರಾಯಿನಲ್ಲಿ  ಕನ್ನಯ್ಯ ಕುಮಾರ್ ಮಹಾಘಟಬಂಧನ್ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.ಬಿಹಾರದಲ್ಲಿ ಮಹಾಘಟಬಂಧನ್ ಆರ್ ಜೆಡಿ ,ಕಾಂಗ್ರೆಸ್ ,ಎಡಪಕ್ಷ ಮತ್ತು ಇತರ ಸಣ್ಣ ಪಕ್ಷಗಳು ಒಳಗೊಂಡ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಅದು ವರದಿ ಮಾಡಿದೆ.ಸದ್ಯ ಕನ್ನಯ್ಯ ಕುಮಾರ್ ಟಿಕೆಟ್ ನ್ನು ಸಿಪಿಎಂ ಅಧಿಕೃತವಾಗಿ ಘೋಷಿಸಬೇಕಷ್ಟೇ ಎಂದು ತಿಳಿದು ಬಂದಿದೆ. …

Read More »

ಪೊಲೀಸರಿಂದ ದೌರ್ಜನ್ಯ ಪ್ರತಿಭಟನೆ

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದ ಪೊಲೀಸರ ವಿರುದ್ಧ ಬೀದಿ ವ್ಯಾಪಾರಿಗಳು ತಿರುಗಿ ಬಿದ್ದು, ಪೊಲೀಸರು ದೌರ್ಜನ್ಯವೆಸಗುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರಿಂದ ಶಿವಾಜಿನಗರದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದರು. ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಪಾದಚಾರಿ ಮಾರ್ಗದಿಂದ ದೂರವಿರುವಂತೆ ವ್ಯಾಪಾರಿಗಳಿಗೆ ತಿಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.  ಶಿವಾಜಿನಗರದ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ನೂರಾರು ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. …

Read More »

ಬೆಂಗಳೂರು: 3 ಗಂಟೆಗಳಲ್ಲಿ ಐದು ಕಡೆ ಸರಗಳ್ಳತನ..

ಬೆಂಗಳೂರು: ಕೆಲ ದಿನಗಳಿಂದ ಬಿಡುವು ಪಡೆದಿದ್ದ ಸರಗಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿಸಲು ಆರಂಭಿಸಿದ್ದರು, ರಾಜಧಾನಿಯಲ್ಲಿ ಶನಿವಾರ ಮತ್ತೆ ಮೂರು ಗಂಟೆಗಳಲ್ಲಿ 5 ಕಡೆ ಸರಗಳ್ಳನತ ಕೃತ್ಯ ಎಸಗಿ ಸದ್ದು ಮಾಡಿದ್ದಾರೆ.  ಸದಾಶಿವನಗರ, ಬಾಣಸವಾಡಿ, ಹೆಣ್ಣೂರು ಹಾಗೂ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಿಟಿಎಂ ಬೈಕ್ ಸದ್ದು ಮಾಡಿದೆ. 2 ತಂಡಗಳು ಈ ಕೃತ್ಯ ಎಸಗಿವೆ ಎಂದು ಪೊಲೀಸರು ಶಂಕಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.  ನಿನ್ನೆ ಬೆಳಿಗ್ಗೆ …

Read More »

ಉತ್ತರಪ್ರದೇಶದಲ್ಲಿ ಭೀಕರ ಪ್ರವಾಹ 16 ಸಾವು, 12 ಮಂದಿಗೆ ಗಾಯ..

ಲಖನೌ: ಉತ್ತರ ಪ್ರದೇಶದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಭೀಕರ ಪ್ರವಾಹ ಸೃಷ್ಟಿಯಾಗಿದ್ದು 16 ಮಂದಿ ಸಾವನ್ನಪ್ಪಿದ್ದಾರೆ.  ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ನಾನಾ ಕಡೆ ಪ್ರವಾಹ ಸೃಷ್ಟಿಯಾಗಿದೆ. ಇನ್ನು ಶನಿವಾರ ಹಾಗೂ ಭಾನುವಾರ ಪ್ರವಾಹದಿಂದಾಗಿ 16 ಮಂದಿ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಎರಡು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.  ಇನ್ನು ಇಂದು ರಕ್ಷಣಾ …

Read More »

ಕಿಚ್ಚ ಸುದೀಪ್ ಅವರ 45ನೇ ಹುಟ್ಟುಹಬ್ಬ; ಪೊಲೀಸರ ಲಾಠಿ ಪ್ರಹಾರದಿಂದ ಅಭಿಮಾನಿ ತಲೆಗೆ ಪೆಟ್ಟು.

ಬೆಂಗಳೂರು: ‘ಅಭಿನಯ ಚಕ್ರವರ್ತಿ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ಕಿಚ್ಚ ಸುದೀಪ್ ಅವರಿಗೆ ಭಾನುವಾರ 45ನೆಯ ಹುಟ್ಟುಹಬ್ಬ ಸಂಭ್ರಮ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಅವರ ನಿವಾಸದ ಎದುರು ಮಧ್ಯರಾತ್ರಿಯಿಂದಲೇ ರಾಜ್ಯದ ಹಲವು ಜಿಲ್ಲೆಗಳಿಂದ ಬಂದ ಅಭಿಮಾನಿಗಳು ಜಮಾಯಿಸಿದ್ದರು. ಸಾವಿರಾರು ಜನ ಅಭಿಮಾನಿಗಳನ್ನು ನಿಯಂತ್ರಿಸಲು ಸುಬ್ರಹ್ಮಣ್ಯಪುರ ಪೊಲೀಸರು ಹರಸಾಹಸಪಡಬೇಕಾಯಿತು. ಅಭಿಮಾನಿಗಳ ಅತಿರೇಕದ ವರ್ತನೆಯನ್ನು ತಡೆಯಲು ಸಾಧ್ಯವಾಗದೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬನ ತಲೆಗೆ ತೀವ್ರ ಏಟು …

Read More »

ಹಂಪಿ ವಿಶ್ವ ಪರಂಪರೆ ಪ್ರದೇಶದ ವ್ಯಾಪ್ತಿಯಲ್ಲಿ 29 ಗ್ರಾಮಗಳ ಸೇರ್ಪಡೆ.

ಹಂಪಿ: ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಹಂಪಿ ವ್ಯಾಪ್ತಿಯಲ್ಲಿ ಸದ್ಯ ಇರುವ ನಾಲ್ಕು ಗ್ರಾಮಗಳಿಂದ 29 ಗ್ರಾಮಗಳವೆರೆಗೆ ಈ ತರುವುದಕ್ಕೆ ಮಾಸ್ಟರ್ ಪ್ಲಾನ್ ವೊಂದನ್ನು ಸಿದ್ದಪಡಿಸಲಾಗುತ್ತಿದೆ. ಈ ಕುರಿತಾಗಿ ಈಗಾಗಲೇ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಇದಕ್ಕೊಂದು ಯೋಜನೆಯೊಂದನ್ನು ರೂಪಿಸಿದೆ.ಈ  ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ  ನಿಯಂತ್ರಣ ತಂದೊಡ್ಡಲು ಈ ಯೋಜನೆಯನ್ನು  2007 ರಲ್ಲಿ  ಹಮ್ಮಿಕೊಂಡಿತ್ತು ಕರ್ನಾಟಕ ಪಟ್ಟಣ  ಪಟ್ಟಣ ಮತ್ತು ದೇಶ ಯೋಜನೆ ಕಾಯ್ದೆ 1961 ರ …

Read More »

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ಸಾಧ್ಯತೆ ?.

ಬೆಂಗಳೂರು: ಗಾಂಧಿ ಕುಟುಂಬ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸುವುದು ಹೊಸದೇನಲ್ಲ,ಏಕೆಂದರೆ ಈ ಹಿಂದೆ ಒಮ್ಮೆ ಇಂದಿರಾಗಾಂಧಿ ಚಿಕ್ಕಮಂಗಳೂರಿನಿಂದ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರೆ,ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿ ರಾಜಕೀಯಕ್ಕೆ  ಪ್ರವೇಶಿಸಿದ್ದರು. ಈಗ ಎಲ್ಲವೂ ಅಂದುಕೊಂಡಂತೆ ಆದಲ್ಲಿ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎನ್ನುಲಾಗುತ್ತಿದೆ. ಈ ಬಾರಿ ರಾಹುಲ್ ಗಾಂಧಿಯವರಿಗೆ ಸ್ವಕ್ಷೇತ್ರ ಅಮೇಥಿಯಲ್ಲಿ  ಕೇಂದ್ರ ಸಚಿವೆ  ಸ್ಮೃತಿ ಇರಾನಿ ತೀವ್ರ ಸ್ಪರ್ಧೆ ನೀಡಲಿದ್ದಾರೆ ಇದಕ್ಕೆ ಪೂರಕವಾಗಿ ಈಗಾಗಲೇ ಅವರು ಹಲವಾರು ಬಾರಿ ಕ್ಷೇತ್ರಕ್ಕೆ …

Read More »

ಮತ್ತೆ ಗಗನದತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ..

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ದರ 16 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಆಗಸ್ಟ್​ 16ರಿಂದಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗುತ್ತಲೇ ಇದ್ದು, 16ನೇ ದಿನವೂ ದರ ಏರಿಕೆಯಾಗಿದೆ. ಇಂದು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 16 ಪೈಸೆಯಷ್ಟು ಏರಿಕೆಯಾಗಿದ್ದು, ಪೆಟ್ರೋಲ್ ದರದಲ್ಲಿ 36 ಪೈಸೆಯಷ್ಟು ಏರಿಕೆಯಾಗಿದೆ.  ಬೆಂಗಳೂರಿನಲ್ಲಿ ಇಂದು ಲೀಟರ್​ ಡಿಸೇಲ್​ ದರ ಪ್ರತೀ ಲೀಟರ್ ಗೆ …

Read More »

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ; ಕಾಂಗ್ರೆಸ್ ನಲ್ಲಿ ಹೆಚ್ಚಿದೆ ಲಾಬಿ ತಂತ್ರ..

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಸೆಪ್ಟೆಂಬರ್ 3 ನೇ ವಾರದಲ್ಲಿ  ನಡೆಯುವುದಾಗಿ ಘೋಷಣೆಯಾದ ನಂತರ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಲಾಬಿ ನಡೆಸಲು ಆರಂಭಿಸಿದ್ದಾರೆ. ಸರ್ಕಾರದಲ್ಲಿ 6 ಸಚಿವ ಸ್ಥಾನ ಖಾಲಿ ಇದ್ದು ಕಾಂಗ್ರೆಸ್ ನಿಂದ ನಾಲ್ಕು ಅಥವಾ ಐದು ಸಚಿವ ಸ್ಥಾನಗಳು ತುಂಬುವ ಸಾಧ್ಯತೆಯಿದೆ. ಸಮ್ಮಿಶ್ರ ಸರ್ಕಾರ ರಚನೆ ಮತ್ತು ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ ನಲ್ಲಿ ಕೆಲವು ಅಸಮಾಧಾನಗೊಂಡಿರುವ ಹಿರಿಯ ಸಚಿವರುಗಳನ್ನು …

Read More »