ಬೆಂಗಳೂರು: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದ್ದರೂ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ಹಿರಿಯ ಐಎಎಸ್, ಐಪಿಎಸ್, ಅರಣ್ಯ ಇಲಾಖೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭ್ರಷ್ಟಾಚಾರ ತಡೆಯುವ ಬದಲು ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದ ಮುಖ್ಯಮಂತ್ರಿ, ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. ನಾವೆಲ್ಲರೂ ನಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಿದರೆ, ನಾವು ಗುರಿಯನ್ನು ತಲುಪಬಹುದು ಅಥವಾ ಕನಿಷ್ಠ ಆ ದಿಕ್ಕಿನಲ್ಲಿ ನಡೆಯಲು ಪ್ರಾಮಾಣಿಕ …
Read More »ರಾಜ್ಯ ಸರ್ಕಾರದಿಂದ ಶರಣಾಗುವ ನಕ್ಸಲರಿಗೆ 7.50 ಲಕ್ಷ ರೂ. ಘೋಷಣೆ
ಚಿಕ್ಕ ಮಗಳೂರು: ಶರಣಾಗುವ ನಕ್ಸಲರಿಗೆ ಜೀವನ ಕಟ್ಟಿಕೊಳ್ಳಲು 7.50 ಲಕ್ಷ ರೂ. ನೆರವು ನೀಡಲಾಗುವುದು ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ ಘೋಷಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರಾಸ್ತ್ರ ಹಿಡಿದು ನಕ್ಸಲ್ ಹೋರಾಟ ಮಾಡುವವವರು ಸಮಾಜಮುಖಿ ಆಗಲು ರಾಜ್ಯ ಸರಕಾರ ಹಲವು ಯೋಜನೆಗಳನ್ನು ಪ್ರಕಟಿಸಿದೆ ಎಂದರು. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಶರಣಾಗುವ ನಕ್ಸಲರಿಗೆ 7.50 ಲಕ್ಷ ರೂ. ನೀಡಲಾಗುವುದು. ಹೊರರಾಜ್ಯದ ನಕ್ಸಲರಿಗೆ 4 ಲಕ್ಷ ರೂ. …
Read More »ವಿಜಯಪುರ-ಮಂಗಳೂರು ಎಕ್ಸ್ ಪ್ರೆಸ್ ರೈಲು ಯಲವಿಗಿಯಲ್ಲಿ ನಿಲುಗಡೆಗೆ ಅವಕಾಶ: ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ: ವಿಜಯಪುರ – ಮಂಗಳೂರು ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ರೈಲನ್ನು ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬಸವರಾಜ ಬೊಮ್ಮಾಯಿ ರೈಲ್ವೆ ಇಲಾಖೆಗೆ ಧನ್ಯವಾದವನ್ನು ತಿಳಿಸಿದ್ದಾರೆ. ವಿಜಯಪುರ ಮಂಗಳೂರು ರೈಲಿನ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಯಲವಿಗಿ ರೈಲು …
Read More »2025-26ರ ಬಜೆಟ್ ಗಾಗಿ ಇಲಾಖಾವಾರು ಪರಿಶೀಲನಾ ಸಭೆ ಆರಂಭಿಸಲು ಸಿಎಂ ಸಿದ್ಧತೆ
ಬೆಂಗಳೂರು: 2025-26ರ ಬಜೆಟ್ಗಾಗಿ ಇಲಾಖಾವಾರು ಪರಿಶೀಲನಾ ಸಭೆಗಳನ್ನು ಆರಂಭಿಸಲು ಸಿದ್ಧರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ ಆದಾಯ ಕೊರತೆ ಅನುದಾನವನ್ನು ಪಡೆಯಲು 16 ನೇ ಹಣಕಾಸು ಆಯೋಗದ ಗಮನ ಸೆಳೆಯಲು ಯೋಜನೆಯನ್ನು ನಿಖರವಾಗಿ ರೂಪಿಸುವ ಸಾಧ್ಯತೆಯಿದೆ. ಅವರು ಹೆಚ್ಚುವರಿ ಬಜೆಟ್ ಮಂಡಿಸಲು ಅಂಟಿಕೊಳ್ಳದೇ ಇರಬಹುದು, ಆದರೆ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರದಿಂದ ಆದಾಯ ಕೊರತೆ ಅನುದಾನವನ್ನು ಪಡೆಯಲು ಸಹಾಯ ಮಾಡಲು ರಾಜ್ಯದ ಆದಾಯ ಮತ್ತು ವೆಚ್ಚದಲ್ಲಿನ ಅಂತರವನ್ನು ತೋರಿಸುತ್ತಾರೆ …
Read More »ಹಿಮಾಚಲ ಪ್ರದೇಶ: ಆರ್ಥಿಕ ಸಂಕಷ್ಟದಿಂದ ಗ್ಯಾರಂಟಿ ಯೋಜನೆ ವಾಪಸಾತಿ ಅಭಿಯಾನ ಆರಂಭ
ಶಿಮ್ಲಾ: ಆರ್ಥಿಕ ಸಂಕಷ್ಟಕ್ಕೊಳಗಾದ ಹಿನ್ನಲೆಯಲ್ಲಿ ಹಿಮಾಚಲ ಸರ್ಕಾರ ಜನರಿಗೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ವಾಪಸಾತಿ ಮಾಡುವ ಅಭಿಯಾನ ಶುರು ಮಾಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಸರ್ಕಾರ ಈಗ ಹಣ ಉಳಿಸುವ ಕೆಲಸಕ್ಕೆ ಮುಂದಾಗಿದೆ. ಅದರಂತೆ ಅನಿವಾರ್ಯವಾಗಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಹಿಂಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸಖು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ವತಃ ಜನರೇ ಗ್ಯಾರಂಟಿಯನ್ನು ವಾಪಸ್ ಮಾಡುವ ಅಭಿಯಾನದಲ್ಲಿ ಕೈ …
Read More »ನದಿ ಜೋಡಣೆಯ ಕರಡು ಒಪ್ಪಂದಕ್ಕೆ ಕರ್ನಾಟಕ ಸೇರಿ ಐದು ರಾಜ್ಯಗಳು ಸಹಿ ಹಾಕಲು ನಿರಾಕರಣೆ: ಮಾತುಕತೆ ನಡೆಸಲು ಜಲಶಕ್ತಿ ಸಚಿವಾಲಯ ನಿರ್ಧಾರ
ನವದೆಹಲಿ: ಗೋದಾವರಿ-ಕೃಷ್ಣಾ-ಕಾವೇರಿ ನದಿಗಳನ್ನು ಜೋಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗೆ ರಾಜ್ಯ ಸರ್ಕಾರಗಳು ತಣ್ಣೀರು ಎರಚಿವೆ. ನದಿ ಜೋಡಣೆಯ ಕರಡು ಒಪ್ಪಂದಕ್ಕೆ ಕರ್ನಾಟಕ ಸೇರಿ ಐದು ರಾಜ್ಯಗಳು ಸಹಿ ಹಾಕಲು ನಿರಾಕರಿಸಿವೆ. ರಾಜ್ಯಗಳ ಜತೆಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಮನವೊಲಿಸಲು ಜಲಶಕ್ತಿ ಸಚಿವಾಲಯ ನಿರ್ಧರಿಸಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ನವದೆಹಲಿಯಲ್ಲಿ ಡಿಸೆಂಬರ್ನಲ್ಲಿ ನಡೆದ ನದಿ ಜೋಡಣೆ ಸಮಿತಿ ಸಭೆಯು ಒಮ್ಮತಕ್ಕೆ ಬರಲು ವಿಫಲವಾಯಿತು. ನದಿ ಜೋಡಣೆಯ ವಿಸ್ತೃತ …
Read More »ಆಸ್ತಿ ಘೋಷಣೆ ಮಾಡದ 6 ಗ್ರಾ.ಪಂ.ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ ರಾಜ್ಯ ಚುನಾವಣಾ ಆಯೋಗ
ಬೆಂಗಳೂರು: ಆಸ್ತಿ ಘೋಷಣೆ ಮಾಡದ 6 ಗ್ರಾಪಂ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ ಸದಸ್ಯತ್ವ ರದ್ದುಗೊಂಡ ಸದಸ್ಯ ಸ್ಥಾನಗಳನ್ನು ಖಾಲಿ ಎಂದೂ ಘೋಷಿಸಿದೆ. ಚಿಕ್ಕಮಗಳೂರು ಜಿಲ್ಲೆ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿಯ ಚೈತ್ರಾ ರಘು, ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಮ ಪಂಚಾಯಿತಿಯ ಎಸ್.ಎಚ್.ಚಂದ್ರಶೇಖರ್, ಕಲಬುರಗಿ ಜಿಲ್ಲೆ ಅಳಂದ ಆಲೂಕು ಅಳಂಗಾ ಗ್ರಾಮ ಪಂಚಾಯಿತಿಯ ಗಣಪತಿ, ಕಮಲಾಪೂರ ತಾಲೂಕು ವ್ಹಿ.ಕೆ.ಸಲಗರ ಗ್ರಾಮ ಪಂಚಾಯಿತಿಯ ಇಸ್ಮಾಯಿಲ್ ಸಾಬ್, ಹಾವೇರಿ ಜಿಲ್ಲೆ ಹಾನಗಲ್ …
Read More »ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಈ ಬಾರಿ ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಆದರೆ ಬಜೆಟ್ ಮಂಡನೆ ದಿನಾಂಕ ಇನ್ನು ನಿಗದಿಯಾಗಿಲ್ಲ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ ಆದರೆ ಬಜೆಟ್ ಮಂಡನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜಿನಾಮೆ ನೀಡಬೇಕೆಂಬ …
Read More »ಹೊಸ ವರ್ಷದ ಸಂಭ್ರಮಾಚರಣೆ: ಅಬಕಾರಿ ಇಲಾಖೆಗೆ ದಾಖಲೆಯ ಆದಾಯ
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯು ರಾಜ್ಯ ಸರಕಾರಕ್ಕೆ (ಅಬಕಾರಿ ಇಲಾಖೆ) ಭರ್ಜರಿ ಆದಾಯ ಹರಿದು ಬಂದಿದೆ. ಮಂಗಳವಾರ ಒಂದೇ ದಿನದಲ್ಲಿ ಕೆಎಸ್ಬಿಸಿಎಲ್ (ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ)ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ. ಈ ಬಾರಿ ಅಬಕಾರಿ ಇಲಾಖೆ 250 ಕೋಟಿ ರೂ.ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ರಾಜ್ಯದಲ್ಲಿ ಡಿ.31ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದಲ್ಲೇ ಕೆಎಸ್ಬಿಸಿಎಲ್ಯಿಂದ ಬರೋಬ್ಬರಿ 308 …
Read More »ಮಲೆ ಮಹದೇಶ್ವರ ಬೆಟ್ಟದಲ್ಲಿ ಜ.9 ಅಥವಾ 16 ರಂದು ಸಿಎಂ, ಡಿಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಜ.9 ಅಥವಾ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ನೂತನ ವರ್ಷಾರಂಭದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ದಿನಾಂಕ ನಿಗದಿಯಾಗಿರಲಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.9 ಅಥವಾ 16ರಂದು ಸಭೆ ನಡೆಸಲು ತಯಾರಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





