ನವದೆಹಲಿ: ತೀವ್ರ ಬರಪೀಡಿತ ಮಲಾವಿಗೆ ಮಾನವೀಯ ನೆರವಿನ ಭಾಗವಾಗಿ ಭಾರತವು 1,000 ಮೆಟ್ರಿಕ್ ಟನ್ ಅಕ್ಕಿಯನ್ನು ರವಾನಿಸಿದೆ ಎಂದು ವರದಿಯಾಗಿದೆ. ಪೂರ್ವ ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ಮಳೆ ಕೊರತೆ ಎದುರಾಗಿದ್ದು, ವಿಶೇಷವಾಗಿ ಮಲಾವಿ ತೀವ್ರ ಬರಗಾಲದಿಂದ ತತ್ತರಿಸಿದೆ ಇದರಿಂದಾಗಿ ಆಹಾರ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಭಾರತವು ಮಾನವೀಯ ನೆರವು ಒದಗಿಸುವ ಮೂಲಕ ಮಲಾವಿಯ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಸಂದೇಶವನ್ನು ರವಾನಿಸಿದೆ. ಎಲ್ ನಿನೊ ವಿದ್ಯಮಾನದಿಂದ …
Read More »ಲಖನೌದಲ್ಲಿ ಬಹುಮಹಡಿ ಕಟ್ಟಡ ಕುಸಿತ: ಮೃತರ ಸಂಖ್ಯೆ 8 ಕ್ಕೆ ಏರಿಕೆ
ಲಖನೌ: ಉತ್ತರ ಪ್ರದೇಶದ ಲಖನೌದಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ 8ಕ್ಕೆ ಎರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈ ಮೊದಲು ಅವಶೇಷಗಳಡಿ ಸಿಲುಕಿದ್ದ 28 ಜನರನ್ನು ರಕ್ಷಣೆ ಮಾಡಲಾಗಿತ್ತು ಇದೀಗ ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಡುವೆ ಘಟನೆ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಂದ …
Read More »ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ: ರಾಜ್ಯ ಸರ್ಕಾರ ಅಧಿಕೃತ ಆದೇಶ
ಬೆಂಗಳೂರು : ರಾಜ್ಯಾದ್ಯಂತ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಯಾಗಿದ್ದು, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಿ.2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದರ ಅಡಿ ಸಾರ್ವಜನಿಕರು ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪನೋಂದಣಿ ಕಛೇರಿಯಲ್ಲಿ ನೋಂದಣಿ ಮಾಡಬಹುದಾಗಿದೆ. ಎನಿವೇರ್ ರಿಜಿಸ್ಟ್ರೇಷನ್ ಸೇವೆ ಈಗ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿದ್ದು, ನಿಮ್ಮ ಜಿಲ್ಲೆಯ ಸಮೀಪವಿರುವ ಯಾವುದೇ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ನಿಮ್ಮ ದಾಖಲೆಯನ್ನು …
Read More »ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಹೊಕಾಟೊ ಹೊಟೊಝೆ ಸೆಮಾಗೆ ಒಲಿದ ಕಂಚಿನ ಪದಕ
ಪ್ಯಾರಿಸ್: ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತೀಯರು 19 ಪದಕಗಳನ್ನು ಗೆದ್ದಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 26 ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಪದಕಗಳ ಸಂಖ್ಯೆ 30ರ ಗಡಿದಾಟುವ ನಿರೀಕ್ಷೆಯಿದೆ. ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ 2024 ರ ಪುರುಷರ ಶಾಟ್ ಪುಟ್ ಎಫ್57 ಸ್ಪರ್ಧೆಯಲ್ಲಿ ಭಾರತದ ಹೊಕಾಟೊ ಹೊಟೊಝೆ ಸೆಮಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸ್ಟೇಡ್ ಡಿ ಫ್ರಾನ್ಸ್ ಮೈದಾನದಲ್ಲಿ ನಡೆದ ಫೈನಲ್ ಸುತ್ತಿನಲ್ಲಿ …
Read More »ಅನಧಿಕೃತವಾಗಿ ಶ್ರೀಗಂಧದ ಮರ ಸಾಗಾಟ: ಇಬ್ಬರನ್ನು ಬಂಧಿಸಿದ ಪೋಲಿಸರು
ಬಾಗಲಕೋಟೆ: ಸರ್ಕಾರದಿಂದ ಯಾವುದೇ ಪರವಾನಗೆ ಪಡೆಯದೇ ಅನಧಿಕೃತವಾಗಿ ಶ್ರೀಗಂಧದ ಹಸಿ ಮರದ ತುಂಡನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಾಗಲಕೋಟ ಜಿಲ್ಲೆಯ ಇಳಕಲ್ ನಗರ ಪೋಲಿಸರು ಬಂಧಂದಿಸಿದ್ದಾರೆ ಪಿಎಸ್ಐ ಎಸ್.ಆರ್. ನಾಯಕ್ ರವರು ಖಚಿತ ಮಾಹಿತಿ ಮೇರೆಗೆ ಇಳಕಲ್ ದಿಂದ ಕಂದಗಲ್ಲ ಮಾರ್ಗದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಹತ್ತಿರ ಟಮ್ ಟಂ ವಾಹನದಲ್ಲಿ ಸಾಗಿಸುತ್ತಿದ್ದ 70 ಕೆಜಿ ತೂಕದ ಶ್ರೀಗಂಧದ ಮರದ ದಿಣ್ಣೆ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಕಂದಗಲ್ಲದ …
Read More »ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಐವರು ಸಾವು
ನವದಹೆಲಿ : ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರದಲ್ಲಿ ಗಣೇಶ ಹಬ್ಬದ ದಿನವೇ ಹಿಂಸಾಚಾರ ನಡೆದಿದೆ. ಜಿರಿಬಾಮ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಹಿಂಸಾಚಾರದಲ್ಲಿ ಒಟ್ಟು ಐವರು ಮೃತಪಟ್ಟಿದ್ದು, ಓರ್ವನಿಗೆ ಶಂಕಿತ ಉಗ್ರರು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೇ ಇಂಫಾಲ್ ಜಿಲ್ಲೆಯಲ್ಲಿ ಸಿಎಂ ಬಿರೇನ್ ಸಿಂಗ್ ಮನೆ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದ …
Read More »ಐತಿಹಾಸಿಕ ಕೋಟೆ ನಾಡಿನಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ
ಚಿತ್ರದುರ್ಗ: ಇಂದು ದೇಶಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತ ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗದಲ್ಲೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದ ಬಿ ಡಿ ರಸ್ತೆಯಲ್ಲಿನ ಜೈನಧಾಮದಲ್ಲಿ ಬೃಹತ್ ಪೆಂಡಾಲ್ ಹಾಕಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು ಇಂದಿನಿಂದ 21 ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ಸೇರಿದಂತೆ …
Read More »ಉಚಿತ ಆಧಾರ್ ಅಪ್ ಡೇಟ್: ಸೆ.14 ಕೊನೆಯ ದಿನಾಂಕ
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಉಚಿತ ಆಧಾರ್ ವಿವರ ಅಪಡೇಟ್ ಮಾಡಲು ಸೆಪ್ಟೆಂಬರ್ 14 ಅನ್ನು ಅಂತಿಮ ದಿನಾಂಕವನ್ನಾಗಿ ನಿಗದಿಪಡಿಸಿದೆ. ಗಡುವು ಮುಗಿದ ನಂತರ, ಯುಐಡಿಎಐ ಯಾವುದೇ ನವೀಕರಣಗಳಿಗೆ ₹50 ಶುಲ್ಕವನ್ನು ವಿಧಿಸುತ್ತದೆ 10 ವರ್ಷಗಳ ಹಿಂದೆ ನೀಡಲಾದ ಮತ್ತು ಎಂದಿಗೂ ನವೀಕರಿಸದ ಆಧಾರ್ ಕಾರ್ಡ್ಗಳು ಮರುಮೌಲ್ಯಮಾಪನಕ್ಕಾಗಿ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ದೃಢೀಕರಣವು ಜನಸಂಖ್ಯಾ ಮಾಹಿತಿ ಅಥವಾ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆಯನ್ನು …
Read More »ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಗೆ ಮುಹೂರ್ತ ನಿಗದಿ
ಕಲಬುರಗಿ: 10 ವರ್ಷಗಳ ನಂತರ ತೊಗರಿ ನಾಡು ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಗೆ ಮುಹೂರ್ತ ನಿಗದಿಯಾಗಿದೆ. ಸೆ.17ರ ಸಂಜೆ 4 ಗಂಟೆಗೆ ಕಲಬುರಗಿ ನಗರದ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಂಪುಟ ಸಭೆ ನಿಗದಿಗೊಳಿಸಲಾಗಿದೆ. ಕಲಬುರಗಿಯಲ್ಲಿ ಪ್ರಸಕ್ತ ಸಾಲಿನ 19ನೇ ಸಚಿವ ಸಂಪುಟ ಸಭೆ ಎಂಬುದಾಗಿ ಸಚಿವ ಸಂಪುಟದ ಜಂಟಿ ಕಾರ್ಯದರ್ಶಿ ಆರ್.ಚಂದ್ರಶೇಖರ ಅಧಿಸೂಚನೆ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳು ಸೆ.17ರಂದು ಬೆಳಗ್ಗೆ 9 ಗಂಟೆಗೆ ಕಲ್ಯಾಣ ಕರ್ನಾಟಕ ಉತ್ಸವದ …
Read More »ಮೈಸೂರು ದಸರಾ: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ
ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿರುವ 2ನೇ ತಂಡದ ಗಜಪಡೆಗೆ ತೂಕ ಪರೀಕ್ಷೆ ನಡೆಸಲಾಯಿತು. ಮೊದಲ ತಂಡದ 9 ಆನೆಗಳಿಗೆ ನಡೆಸಲಾದ ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ನಂ. 1 ಆಗಿದ್ದರೆ, 2ನೇ ತಂಡದಲ್ಲಿ ಸುಗ್ರೀವ ಬಲಶಾಲಿ ಎನಿಸಿಕೊಂಡಿದ್ದಾನೆ. 2ನೇ ತಂಡದ ಐದು ಆನೆಗಳು ಗಜಪಡೆಯ ಸಾರಥಿ ಅಭಿಮನ್ಯು ತಂಡಕ್ಕೆ ಸಾಥ್ ನೀಡಿವೆ. ತೂಕ ಪರೀಕ್ಷೆಯಲ್ಲಿ ಸುಗ್ರೀವ 5,190 ಕೆ.ಜಿ., ಮಹೇಂದ್ರ 4,910 ಕೆ.ಜಿ., ಪ್ರಶಾಂತ 4,875, ಕೆ.ಜಿ., ಹೆಣ್ಣಾನೆಗಳಾದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





