Breaking News

ಅನಧಿಕೃತವಾಗಿ ಶ್ರೀಗಂಧದ ಮರ ಸಾಗಾಟ: ಇಬ್ಬರನ್ನು ಬಂಧಿಸಿದ ಪೋಲಿಸರು

ಬಾಗಲಕೋಟೆ: ಸರ್ಕಾರದಿಂದ ಯಾವುದೇ ಪರವಾನಗೆ ಪಡೆಯದೇ ಅನಧಿಕೃತವಾಗಿ ಶ್ರೀಗಂಧದ ಹಸಿ ಮರದ ತುಂಡನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಾಗಲಕೋಟ ಜಿಲ್ಲೆಯ ಇಳಕಲ್ ನಗರ ಪೋಲಿಸರು ಬಂಧಂದಿಸಿದ್ದಾರೆ ಪಿಎಸ್ಐ ಎಸ್.ಆರ್. ನಾಯಕ್ ರವರು ಖಚಿತ ಮಾಹಿತಿ ಮೇರೆಗೆ ಇಳಕಲ್ ದಿಂದ ಕಂದಗಲ್ಲ ಮಾರ್ಗದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಹತ್ತಿರ ಟಮ್ ಟಂ ವಾಹನದಲ್ಲಿ ಸಾಗಿಸುತ್ತಿದ್ದ 70 ಕೆಜಿ ತೂಕದ ಶ್ರೀಗಂಧದ ಮರದ ದಿಣ್ಣೆ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಕುರಿತು ಕಂದಗಲ್ಲದ ಇಬ್ಬರನ್ನು ಬಂಧಿಸಿದ್ದು ಇಳಕಲ್ಲ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *