Breaking News

ಮೈಸೂರು ದಸರಾ: ಎರಡನೇ ತಂಡದ ಗಜಪಡೆಗೆ ತೂಕ ಪರೀಕ್ಷೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿರುವ 2ನೇ ತಂಡದ ಗಜಪಡೆಗೆ ತೂಕ ಪರೀಕ್ಷೆ ನಡೆಸಲಾಯಿತು. ಮೊದಲ ತಂಡದ 9 ಆನೆಗಳಿಗೆ ನಡೆಸಲಾದ ತೂಕದಲ್ಲಿ ಕ್ಯಾಪ್ಟನ್‌ ಅಭಿಮನ್ಯು ನಂ. 1 ಆಗಿದ್ದರೆ, 2ನೇ ತಂಡದಲ್ಲಿ ಸುಗ್ರೀವ ಬಲಶಾಲಿ ಎನಿಸಿಕೊಂಡಿದ್ದಾನೆ.
2ನೇ ತಂಡದ ಐದು ಆನೆಗಳು ಗಜಪಡೆಯ ಸಾರಥಿ ಅಭಿಮನ್ಯು ತಂಡಕ್ಕೆ ಸಾಥ್‌ ನೀಡಿವೆ. ತೂಕ ಪರೀಕ್ಷೆಯಲ್ಲಿ ಸುಗ್ರೀವ 5,190 ಕೆ.ಜಿ., ಮಹೇಂದ್ರ 4,910 ಕೆ.ಜಿ., ಪ್ರಶಾಂತ 4,875, ಕೆ.ಜಿ., ಹೆಣ್ಣಾನೆಗಳಾದ ದೊಡ್ಡ ಹರವೆ ಲಕ್ಷ್ಮೀ 3,485, ಹಿರಣ್ಯ 2,930 ಕೆ.ಜಿ. ತೂಕ ಹೊಂದಿವೆ. ಮೊದಲ ಹಂತದ ಆನೆಗಳಿಗೆ ಈಗಾಗಲೇ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *