Breaking News

ಉತ್ತರ ಪ್ರದೇಶ

ಪ್ರಿಯಕರನ್ನು ಟ್ರಂಕ್​​ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ,ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದ ಗೆಳೆಯ!

ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಪ್ರಿಯಕರ ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆಯಲ್ಲಿ ಟ್ರಂಕ್ ನಲ್ಲಿ ಅಡಗಿ ಕುಳಿತಿದ್ದ ಈತನು ಆಕೆಯ ಕುಟುಂಬದವರ ಕೈಗೆ ಸಿಕ್ಕಿ ಬಿದ್ದಿದ್ದು ಕೋಲಿನಿಂದ ಹೊಡೆದಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕೋಣೆಯಲ್ಲಿ ಯಾರೋ ಮಾತಾಡುವ ಶಬ್ದ ಬರುತ್ತಿದ್ದಂತೆ ಮನೆಯವರಿಗೆ ಅನುಮಾನ ಬಂದಿದೆ. ಕೋಣೆಯಲ್ಲಿ ಯಾರೂ ಕಾಣಿಸದೇ ಇದ್ದರೂ ಟ್ರಂಕ್ ತೆರೆದಾಗ ಮಹಿಳೆಯ ಪ್ರಿಯಕರನು ಅರೆನಗ್ನ …

Read More »

ಗಂಡನಿಗಾಗಿ ಕುಸ್ತಿಗೆ ಬಿದ್ದ ಇಬ್ಬರು ಹೆಂಡತಿಯರು! ಕೂದಲು ಹಿಡಿದು ಕಿತ್ತಾಟ..

ಉತ್ತರ ಪ್ರದೇಶದ ಮೀರತ್‌ನ ಪೊಲೀಸ್ ಠಾಣೆಯ ಗೇಟ್‌ನಲ್ಲಿ ಒಬ್ಬ ಗಂಡನಿಗಾಗಿ ಇಬ್ಬರು ಹೆಂಡತಿಯರ ನಡುವೆ ದೊಡ್ಡ ಜಗಳ ನಡೆದಿದೆ. ಇಬ್ಬರೂ ಹೆಂಡತಿಯರು ಒಬ್ಬ ಯುವಕನಿಗಾಗಿ ಪರಸ್ಪರ ಕೂದಲು ಹಿಡಿದುಕೊಂಡು ಜಗಳವಾಡಲು ಪ್ರಾರಂಭಿಸಿದ್ದಾರೆ.ಇಂದು ನಿಶಾ ಮನೆಗೆ ಬಂದು ಮಕ್ಕಳ ಮೇಲಿನ ತನ್ನ ಹಕ್ಕುಗಳನ್ನು ಪ್ರತಿಪಾದಿಸಿದಳು ಮತ್ತು ಅವರನ್ನು ಕರೆದುಕೊಂಡು ಹೋಗಲು ಪ್ರಾರಂಭಿಸಿದಳು. ನಾನು ನಿರಾಕರಿಸಿದಾಗ, ಅವಳು ತನ್ನ ಸಹೋದರರಿಗೆ ಕರೆ ಮಾಡಿದಳು ಮತ್ತು ಅವರು ನನ್ನನ್ನು ಹೊಡೆಯಲು ಪ್ರಾರಂಭಿಸಿದರು. ನಿಶಾ ಮಕ್ಕಳನ್ನು …

Read More »

ರಸ್ತೆ ಅಪಘಾತ: ಆರು ಮಂದಿ ದುರ್ಮರಣ!ಇಬ್ಬರಿಗೆ ಗಾಯ..

ಮದುವೆಗೆ ಬಂದ ಅತಿಥಿಗಳನ್ನು ಕರೆತರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೃತರಲ್ಲಿ ನಾರಾಯಣಪುರ ಚಾರ್ಗಾಂವ್ ನಿವಾಸಿಗಳಾದ ಹರೇಂದ್ರ, ಯೋಗೇಂದ್ರ, ಓಂಪ್ರಕಾಶ್, ರಾಜಕಿಶೋರ್, ರಂಜೀತ್ ಮತ್ತು ಮುಖೇಶ್ ಸೇರಿದ್ದಾರೆ. ಗಾಯಗೊಂಡ ರಾಜ್‌ಕಿಶೋರ್ ಹಾಗೂ ಬಜರಂಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

Read More »

ಪ್ರಿಯಕರನ ಜೊತೆ ಸೇರಿ ಹಾವು ಕಚ್ಚಿದೆ ಎಂದು ನಾಟಕ ಬಯಲು!!

ಮೀರತ್ನಲ್ಲಿ ನಾಗರ ಹಾವು ಅಮಿತ್ನನ್ನು ಕಚ್ಚಿದ್ದು ನಿಜ ಆದ್ರೆ ಅಮಿತ್ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ. ಅಮಿತ್ ಜೀವ ಬಿಡೋಕು ಮುಂಚೆ, ಹಾವು ಅಮಿತ್ ಬಳಿ ಬರುವ ಮುಂಚೆ, ಅಮಿತ್ ಪಕ್ಕದಲ್ಲೇ ಇದ್ದವಳು ಅಮಿತ್ ಪತ್ನಿ ರಮಿತಾ.ರಮಿತಾ, ಅಮಿತ್ನ ಮಡದಿ.ಮನೆಯವರೂ ಸೇರಿ, ಹಾವು ಕಚ್ಚಿದರಿಂದಲೇ ಅಮಿತ್ ಜೀವ ಹೋಗಿದೆ ಅಂತ ಅಂದುಕೊಂಡಿದ್ದರು. ಆದ್ರೆ ಮಾಸ್ಟರ್ ಪ್ಲಾನ್ ಮಾಡಿ, ಗಂಡನ ಮರ್ಡರ್ ಮಾಡಿದ್ದ, ರಮಿತಾಳ ರಮಿಸುವ ಆಟಕ್ಕೆ ಬ್ರೇಕ್ ಬೀಳಿಸಿದ್ದು …

Read More »

ಗೊರಪುರ :ಪ್ರಿಯಕರನನ್ನು ಮನೆಗೆ ಕರೆಸಿ ಗುಪ್ತಾಂಗ ಕತ್ತರಿಸಿದ ಪ್ರೇಯಸಿ!!

ಮಿಥುನ್ ಕುಮಾರ್ ಎಂಬಾತ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದ, ಆಕೆಯ ಆತನಿಗಿಂತ 8 ವರ್ಷ ದೊಡ್ಡವಳು. ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಹೊಲದಿಂದ ವಾಪಸಾಗುವಾಗ ಆಕೆ ಆತನಿಗೆ ಕರೆ ಮಾಡಿದ್ದಳು. ನಮ್ಮ ಮನೆಯಿಂದ ಮೂರನೇ ಮನೆಯೇ ಅವರದ್ದು. ಆಕೆ ಎರಡು ವರ್ಷಗಳಿಂದ ಮಿಥುನ್ ಜತೆ ಸಂಪರ್ಕದಲ್ಲಿದ್ದಾಳೆ. ತನ್ನ ಭೇಟಿಯಾಗು ಎಂದು ಆತನಿಗೆ ಕರೆ ಮಾಡಿದ್ದಳು.ಮಿಥುನ್‌ಗೆ ತಿಳಿಯದೆ ಅಲ್ಲಿಗೆ ಹೋಗಿದ್ದಾನೆ, ಆ ಯುವತಿಯ ನಾಲ್ವರು ಸಹೋದರರು …

Read More »

ಮದುವೆಗೆ ಎಂಟು ದಿನ ಇರುವಾಗಲೇ ಸಹೋದರಿಯರಿಬ್ಬರೂ ಪರಾರಿ!!

ಮನೆಯಲ್ಲಿ ಗುರು ಹಿರಿಯರು ತಮ್ಮ ಇಬ್ಬರೂ ಪುತ್ರಿಯರಿಗೆ ಮದುವೆ ನಿಶ್ಚಯಿಸಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಬ್ಬರೂ ಸಹೋದರಿಯರು ಗುರು ಹಿರಿಯರು ನೋಡಿದ್ದ ವರರೊಂದಿಗೆ ಮದುವೆ ಆಗಬೇಕಿತ್ತು. ವರರು ಇವರಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದು, ಇವರಿಬ್ಬರಿಗೂ ಬೇರೆ ಯುವಕರ ಜೊತೆಗೆ ಪ್ರೇಮವಿತ್ತು. ಹೀಗಾಗಿ ಈ ಮದುವೆ ಇಬ್ಬರಿಗೂ ಇಷ್ಟವಿರಲಿಲ್ಲ. ಈ ಕಾರಣದಿಂದಾಗಿ ವಿವಾಹಕ್ಕೆ ಎಂಟು ದಿನ ಇರುವಾಗಲೇ ಇಬ್ಬರೂ ಪರಾರಿಯಾಗಿದ್ದಾರೆ. ಕುಟುಂಬಸ್ಥರು ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ …

Read More »

ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ 54 ಸ್ಥಳಗಳನ್ನು ಗುರುತಿಸಿದ್ದೇವೆ: ಯೋಗಿ ಆದಿತ್ಯನಾಥ್!!

ದೇವಾಲಯಗಳನ್ನು ಪುನರುಜ್ಜೀವನಗೊಳಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಜ್ಞೆ ಮಾಡಿದ್ದಾರೆ.ಧ್ವಂಸಗೊಂಡ ಹಿಂದೂ ದೇವಾಲಯಗಳ ಅವಶೇಷಗಳ ಮೇಲೆ ನಿರ್ಮಿಸಲಾದ ಮಸೀದಿಗಳ ವಿಷಯಕ್ಕೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್, ಹಿಂದೂ ದೇವಾಲಯಗಳನ್ನು ನಾಶಪಡಿಸಿದ ನಂತರ ನಿರ್ಮಿಸಲಾದ ಪೂಜಾ ಸ್ಥಳಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಇಸ್ಲಾಂ ಹೇಳುತ್ತದೆ. ಹಾಗಾದರೆ ಅವುಗಳನ್ನು ಏಕೆ ನಿರ್ಮಿಸಲಾಯಿತು, ಸನಾತನ ಹಿಂದೂ ಧರ್ಮದ ಮಹತ್ವದ ತಾಣಗಳೆಲ್ಲವೂ ನಮ್ಮ ಪರಂಪರೆಯ ಸಂಕೇತಗಳಾಗಿವೆ ಎಂದು ಪುನರುಚ್ಛರಿಸಿದರು. ಹೆಚ್ಚಿನ ಪುರಾವೆಗಳು ಸಿಗುವುದರಿಂದ ಸರ್ಕಾರವು …

Read More »

ಸುಲ್ತಾಪುರ :ಹನುಮ ಜಯಂತಿಯಂದೇ ಪುರಾತನ ಹನುಮಾನ ವಿಗ್ರಹ ಪತ್ತೆ!..

ಸುಲ್ತಾನ್‌ಪುರದ ಫೂಲ್‌ಪುರ ಗ್ರಾಮದ ಸುರೇಶ್ ಪಾಂಡೆ ಎಂಬುವವರ ಮನೆಯಲ್ಲಿ ಜೆಸಿಬಿ ಬಳಸಿ ಶೌಚಾಲಯ ಗುಂಡಿ ತೋಡುವ ವೇಳೆ ಸುಮಾರು ಐದು ಅಡಿ ಎತ್ತರದ ಮರಳುಗಲ್ಲಿನಿಂದ ಮಾಡಿರುವ ಹನುಮಂತನ ಪ್ರತಿಮೆ ಪತ್ತೆಯಾಗಿದೆ.ಈ ಬಗ್ಗೆ ಸ್ಥಳೀಯರು ಕುರೇಭಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು, ವಿಚಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಅವಲೋಕಿಸಿದರು. ಅವರೇ ಹನುಮಂತನ ವಿಗ್ರಹವನ್ನು ತೊಳೆದು ಸ್ವಚ್ಛಗೊಳಿಸಿದರು. ಇದಾದ ನಂತರ, ಪ್ರಾರ್ಥನೆ ಸಲ್ಲಿಸಲಾಯಿತು.

Read More »

ಮಹಿಳೆ ಮತ್ತು ಮೂರು ವರ್ಷದ ಮಗ ಶವವಾಗಿ ಪತ್ತೆ!! ಆರೋಪಿ ಪರಾರಿ.

ಗುವಾಹಟಿಯ ಸುಮಾರು 40 ಕುಟುಂಬಗಳು ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದು, ತ್ಯಾಜ್ಯ ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ, ಬಚ್ರಾ ಸುಲ್ತಾನ್‌ಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಶಹಜನ್ ಖಂಡಕರ್ ಎಂದು ಗುರುತಿಸಲಾದ ಆರೋಪಿಯು ರಾತ್ರಿಯ ವೇಳೆ ತನ್ನ ಪತ್ನಿ ಮತ್ತು ಅವರ ಮಗನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೂ ಮುನ್ನ, ತನ್ನ 13 ವರ್ಷದ ಮಗನನ್ನು ಹೊರಗೆ ಮಲಗಲು ಹೇಳಿದ್ದಾನೆ ಎಂದು ವರದಿಯಾಗಿದೆ. ನಂತರ, ತನ್ನ ಹೆಂಡತಿಯ …

Read More »

ಅಯೋಧ್ಯ : ಅತಿಥಿಗೃಹದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಆರೋಪಿ ಅರೆಸ್ಟ್!..

ಹೊಟೆಲ್ ಸಿಬ್ಬಂದಿಯೇ ಮಹಿಳೆ ಸ್ನಾನ ಮಾಡುತ್ತಿದ್ದಾಗ ತನ್ನ ಮೊಬೈಲ್ ನಲ್ಲಿ ಆಕೆಯ ವಿಡಿಯೋ ಸೆರೆ ಹಿಡಿದಿದ್ದಾನೆ ಎಂದು ಹೇಳಲಾಗಿದೆ.ಈ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಯೋಧ್ಯೆ ಪೊಲೀಸರು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಿವಾಸಿ ಸೌರಭ್ ತಿವಾರಿ ಎಂಬಾತನನ್ನು ಬಂಧಿಸಿದ್ದಾರೆ.ಪ್ರಸ್ತುತ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಈತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಇತರೆ ಮಹಿಳೆಯರ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು …

Read More »