Breaking News

BigTv News

ಬಸ್ಸಿನಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿ : ವಾಹನವನ್ನು ಆಸ್ಪತ್ರೆಗೆ ತೆಗೆದುಕೊಂಡ ಹೋದ ಚಾಲಕ

ಉಡುಪಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಮತ್ತೊಂದು ಘಟನೆ ಉಡುಪಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ ಎಕೆಎಂ ಎಸ್ ಬಸ್ಸಿಗೆ ಮೂಲ್ಕಿಯಲ್ಲಿ ವಿದ್ಯಾರ್ಥಿನಿ ಯೊಬ್ಬಳು ಉಡುಪಿಗೆ ತೆರಳಲು ಹತ್ತಿದ್ದಾಳೆ. ಆದರೆ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ಬಸ್ಸಿನ ಚಾಲಕ ನಸೀಫ್ ಹಾಗೂ ನಿರ್ವಾಹಕ ಮೋಹಿತ್ ಕೂಡಲೇ ಬಸ್ಸನ್ನು …

Read More »

ಲಕ್ಷಾಂತರ ರೂಪಾಯಿ ವಂಚನೆ : ನಾಲ್ವರು ಆರೋಪಿ ಬಂಧನ

ಉಡುಪಿ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಉಡುಪಿ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕುರಿಯ ಗ್ರಾಮದ ನಿವಾಸಿ ಮಹಮ್ಮದ್ ಮುಸ್ತಫಾ ಪಿ (36) ಕಾಸರಗೋಡು ಮಂಜೇಶ್ವರ ತಾಲೂಕಿನ ಕುಂಬ್ಳೆಯ ನಿವಾಸಿ ಖಾಲಿದ್ದೆ. ಬಿ (39), ಕಾಸರಗೋಡು ನೀರ್ಚಾಲ್ ಗ್ರಾಮದ ನಿವಾಸಿ ಮೊಹಮ್ಮದ್ ಸಫಾನ್ ಕೆ.ಎ (22) ಹಾಗೂ ಮಂಗಳೂರು …

Read More »

ಟೇಬಲ್ ಟೆನಿಸ್ ಗೆ ವಿದಾಯ ಹೇಳಿದ ಅರ್ಚನಾ ಕಾಮತ್

ಮುಂಬೈ: ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಟೇಬಲ್ ಟೆನ್ನಿಸ್ ತಂಡವು ಕ್ವಾರ್ಟರ್ ಫೈನಲ್ ತಲುಪಿ ಇತಿಹಾಸ ಬರೆದಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಭಾರತ ಟೇಬಲ್ ಟೆನ್ನಿಸ್ ತಂಡವು ಜರ್ಮನಿ ವಿರುದ್ಧ ಸೋಲು ಕಂಡಿತ್ತು. ಈ ತಂಡದಲ್ಲಿದ್ದ ಕನ್ನಡತಿ ಅರ್ಚನಾ ಕಾಮತ್ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ. 2028 ರ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ ಪದಕದ ಯಾವುದೇ ಗ್ಯಾರಂಟಿ ಇಲ್ಲದಿರುವುದರಿಂದ, ಯುವ ಆಟಗಾರ್ತಿ ವೃತ್ತಿಪರವಾಗಿ ಟೇಬಲ್ ಟೆನಿಸ್ …

Read More »

ಮೈಸೂರುನಲ್ಲಿ ಸ್ಫೋಟಕಗಳು ಪತ್ತೆ

ಮೈಸೂರು: ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ ವೊಂದರಲ್ಲಿ ನಡೆದಿದೆ. ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಸ್ಫೋಟಕ ವಸ್ತುಗಳನ್ನು ನೋಡಿದ ಹೋಟೆಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿ, ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕ ವಸ್ತುಗಳು ಮತ್ತು ಒಂದು ನಾಡ …

Read More »

ಬಿಜೆಪಿ ಕಚೇರಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಮುತ್ತಿಗೆ

ಮಂಗಳೂರು: ಇಂದು ಮಂಗಳೂರು ಬಿಜೆಪಿ ಕಚೇರಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿದ್ದು, ಐವಾನ್ ಡಿ ಸೋಜ ಮನೆ ಮೇಲೆ ಕಲ್ಲೆಸೆತ ಹಿನ್ನಲೆ ಇಂದು ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲಿದ್ದಾರೆ. ಐವಾನ್ ಡಿ ಸೋಜ ಮನೆಯಿಂದ ಆರಂಭವಾಗಿ ದ. ಕ ಬಿಜೆಪಿ ಕಚೇರಿಗೆ ಪಾದಯಾತ್ರೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎರಡು ಕೆ ಎಸ್ ಆರ್ ಪಿ ತುಕಡಿ, 50 ಅಧಿಕ ಸಿಬ್ಬಂದಿಗಳ …

Read More »

ಎಲೆಕ್ನಿಕ್ ವಾಹನ ಬ್ಯಾಟರಿ ಚಾರ್ಜರಗಳ ಪರೀಕ್ಷಾ ಸೌಲಭ್ಯ ಕೇಂದ್ರಕ್ಕೆ ಜೋಶಿ ಶಂಕುಸ್ಥಾಪನೆ

ಬೆಂಗಳೂರು: ಎಲೆಕ್ನಿಕ್ ವಾಹನ ಬ್ಯಾಟರಿ ಹಾಗೂ ಚಾರ್ಜ‌್ರಗಳ ಪರೀಕ್ಷಾ ಸೌಲಭ್ಯ ಕೇಂದ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರಿನ ಜಕ್ಕೂರಿನಲ್ಲಿ ಈ ಸೌಲಭ್ಯ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಶಂಕುಸ್ಥಾಪನೆ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಎಲೆಕ್ನಿಕ್ವಾ ಹನಗಳ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಈ ಪರೀಕ್ಷಾ ಸೌಲಭ್ಯ ಕೇಂದ್ರ ಆರಂಭಿಸಿರುವುದರಿಂದ ಇ.ವಿ ಉದ್ಯಮಕ್ಕೆ ಹೊಸ ಹುರುಪು ಸಿಕ್ಕಂತಾಗುತ್ತದೆ. ಬೆಂಗಳೂರು …

Read More »

H D K ನಾ ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಾಕು..

Featured Video Play Icon

Read More »

ಬೀಡಿಗೆ ಗಿರಿದ ಕಡ್ಡಿಯಿಂದ ಹೊತ್ತಿ ಉರಿದ ಅಂಗಡಿಗಳು

ಹೈದರಾಬಾದ್​​: ಬೀಡಿ, ಸಿಗರೇಟ್​​​ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರು ಬಹಳಷ್ಟು ಜನರು ಅದರ ದಾಸರಾಗಿರುತ್ತಾರೆ. ಈ ಅಭ್ಯಾಸ ಇರುವವರು ಅಜಾಗರೂಕರಾಗಿದ್ದರೆ ಕ್ಷಣಾರ್ಧದಲ್ಲಿ ತೊಂದರೆ ಪ್ರಾಣ ತೆಗೆಯುವವರೆಗೂ ಬರುತ್ತದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ಸಾಕ್ಷಿಯಾಗಿದೆ. ಪೆಟ್ರೋಲ್​​ ಬಂಕ್​​ನಿಂದ ವ್ಯಕ್ತಿಯೊಬ್ಬ ಕ್ಯಾನ್​ನಲ್ಲಿ ಪೆಟ್ರೋಲ್​ ಖರೀದಿಸಿ ತಂದಿದ್ದಾನೆ. ದಾರಿ ಮಧ್ಯೆ ಅಂಗಡಿಯೊಂದರ ಬಳಿ ಬೈಕ್​ ನಿಲ್ಲಿಸಿ ಪೆಟ್ರೋಲ್​ ಇದ್ದ ಡಬ್ಬವನ್ನು ಪಕ್ಕದಲ್ಲಿ ಇಟ್ಟಿದ್ದಾನೆ ಕ್ಯಾನ್​ ಒಡೆದು ಪೆಟ್ರೋಲ್​ …

Read More »

ಮಂಗಳಮುಖಿಯರಿಂದ ಯುವಕನ ಕಿಡ್ನ್ಯಾಪ್

ಬೆಂಗಳೂರು : 18 ವರ್ಷದ ಯುವಕನೋರ್ವನನ್ನು ಕಿಡ್ನ್ಯಾಪ್ ಮಾಡಿದ ಮಂಗಳಮುಖಿಗಳು ಆತನ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿದ ಶಾಕಿಂಗ್ ಘಟನೆ ನಡೆದಿದೆ. ಅಲ್ಲಿಗೆ ಬಂದ ಮಂಗಳಮುಖಿಗಳು ಆತನನ್ನು ಮನವೊಲಿಸುವ ಕೆಲಸ ಮಾಡಿದರು. ನೀನು ನನ್ನ ಜೊತೆ ಬಂದರೆ ಒಳ್ಳೆಯ ಮನೆಯಲ್ಲಿ ಇರಿಸಿ ಉತ್ತಮ ಸಂಪಾದನೆ ಮಾಡಲು ದಾರಿ ಮಾಡಿಕೊಡುವುದಾಗಿ ಹೇಳಿದ್ದಾರೆ. ಆತ ಬರಲು ಒಪ್ಪದಿದ್ದರೂ ಕೂಡ ಬಲವಂತವಾಗಿ ಮನೆಯೊಂದಕ್ಕೆ ಎಳೆದುಕೊಂಡು ಹೋಗಿದ್ದಾರೆ. ನೀನು ಹೆಣ್ಣಾದರೆ ಹೆಚ್ಚು ದುಡಿಯಬಹುದು , ಇದಕ್ಕೆ …

Read More »

ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು : ಮುಂದಿನ ಮೂರು ಗಂಟೆಯಲ್ಲಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಿಂಚಿನ ಜೊತೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ವರದಿಯ ಬುಲೆಟಿನ್‌ನಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ,ರಾಮನಗರ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ. 5 ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯೇ ಹಲವೆಡೆ ಮಳೆ ಸುರಿದಿದೆ.ಮನೆಯೊಳಗೆ ಇರಿ, ಕಿಟಕಿಗಳು …

Read More »