ಮುಂಬೈ: ಹಾಡಹಗಲಿನಲ್ಲಿಯೇ ಮಗನನ್ನು ಕೊಚ್ಚಿ ಕೊಲೆ ಮಾಡಲು ಬಂದ ಕೊಲೆಗಾರನನ್ನು ತಾಯಿಯೊಬ್ಬರು ಓಡಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಕೊಲ್ಲಾಪುರದ ಜೈಸಿಂಗ್ಪುರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ತಾಯಿಯ ಧೈರ್ಯವನ್ನು ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ. ವಿಡಿಯೋದಲ್ಲಿ ರಸ್ತೆಬದಿಯಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಕುಳಿತುಕೊಂಡು ಮಗ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದಾನೆ. ಅದೇ ಸಮಯದಲ್ಲಿ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಅದರಲ್ಲೊಬ್ಬ ತಾಯಿಯೊಂದಿಗೆ …
Read More »ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
ಮಡಿಕೇರಿ: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡು ವಾಮಮಾರ್ಗದ ಮೂಲಕ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನರಲ್ ತಿವ¾¾ಯ್ಯ ವೃತ್ತದಲ್ಲಿ ರಾಜ್ಯಪಾಲರು, ಕೇಂದ್ರ ಸರಕಾರ, ಬಿಜೆಪಿ ಮತ್ತು ಜೆಡಿಎಸ್ …
Read More »ಯಶ್ ಅವರ ತಂಗಿ ಜೊತೆ ರಾಕಿ ಸಂಭ್ರಮ
ಕನ್ನಡ ಚಿತ್ರರಂಗದಲ್ಲಿರುವ ಜನಪ್ರಿಯ ಅಣ್ಣ-ತಂಗಿ ಜೋಡಿಗಳು, ನಟಿ ಶ್ರುತಿ ಮತ್ತು ಅಣ್ಣ ಶರಣ್, ಟೈಗರ್ ಪ್ರಭಾಕರ್ ಅವರ ಮಕ್ಕಳಾದ ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಪ್ರಭಾಕರ್, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಕ್ಕಳು ಆದಿತ್ಯಾ ಮತ್ತು ರಿಷಿಕಾ ಸಿಂಗ್, ರಾಮ್ಕುಮಾರ್ ಅವರ ಮಕ್ಕಳು ಧೀರೇನ್ ಮತ್ತು ಧನ್ಯಾ, ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ನಂದಿನಿ. ನಟ ಶಿವರಾಜ್ಕುಮಾರ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾಗಳಲ್ಲಿ ಅಣ್ಣ-ತಂಗಿಯಾಗಿ …
Read More »ರಕ್ಷಾ ಬಂಧನ ಆಚರಿಸಿಕೊಂಡ ಪ್ರಧಾನಿ
ದೆಹಲಿ: ನಮ್ಮ ದೇಶದ ರಕ್ಷಕನಾಗಿರುವ ಪ್ರಧಾನಿ ಮೋದಿಯವರು ದೆಹಲಿ ಶಾಲೆಯೊಂದರಲ್ಲಿ ರಕ್ಷಾ ಬಂಧನ ಆಚರಿಸಿಕೊಂಡಿದ್ದಾರೆ. ಅಲ್ಲದೇ ಮಕ್ಕಳ ನಡುವೆ ಅವರು ಮಗುವಾಗಿದ್ದಾರೆ. ಧಾನಿ ನರೇಂದ್ರ ಮೋದಿ ಅವರು ಕುರ್ಚಿಯ ಮೇಲೆ ಕುಳಿತಿದ್ದು, ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟಲು ಸರದಿಯಂತೆ ನಿಂತಿದ್ದರು. ಕಾರ್ಯಕ್ರಮದ ಕೊನೆಯಲ್ಲಿ, ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು.
Read More »ಖಲಿಸ್ತಾನಿ ಪ್ರತ್ಯೇಕ ವಾದಿಗಳು ತ್ರಿವರ್ಣ ಧ್ವಜ ಹರಿದು ಅಟ್ಟಹಾಸ
ಟೊರೊಂಟೋ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಯಾ ಡೇ ಪರೇಡ್ ಕಾರ್ಯಕ್ರಮದಲ್ಲಿ ಖಲಿಸ್ತಾನಿ ಪ್ರತ್ಯೇಕ ವಾದಿಗಳು ಗೋ ಬ್ಯಾಕ್ ಇಂಡಿಯಾ ಘೋಷಣೆ ಕೂಗುವುದಲ್ಲದೆ ತ್ರಿವರ್ಣ ಧ್ವಜ ಹರಿದು ಅಟ್ಟಹಾಸ ಮೆರೆದಿದ್ದಾರೆ.ಘಟನೆ ಟೊರೊಂಟೋದಲ್ಲಿ ನಡೆದಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಕೆನಡಾದಲ್ಲಿ ಸ್ವಾತಂತ್ರ್ಯದ ಅತಿದೊಡ್ಡ ಆಚರಣೆಯಾದ ಇಂಡಿಯಾ ಡೇ ಪರೇಡ್ ಟೊರೊಂಟೊದಲ್ಲಿ ನಡೆಯಿತು. ಖಲಿಸ್ತಾನ್ ಪರ ಗುಂಪುಗಳ ಯೋಜಿತ ಪ್ರತಿ-ರ್ಯಾಲಿಯಿಂದಾಗಿ ಈ ಕಾರ್ಯಕ್ರಮಕ್ಕೆ ಸಕಲ ಭದ್ರತೆ …
Read More »ರಾಖಿ ಕಟ್ಟಿ ಪ್ರಾಣ ಬಿಟ್ಟ ಸಹೋದರಿ
ರಕ್ಷಾ ಬಂಧನದ ದಿನವೇ ಸೋದರಿಯೊಬ್ಬಳು ತನ್ನ ಇಬ್ಬರು ಸೋದರರಿಗೆ ರಾಖಿ ಕಟ್ಟಿ ಬಳಿಕ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ. ವರದಿಯ ಪ್ರಕಾರ ಈ ಹುಡುಗಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರೀತಿಸುವಂತೆ ಯುವಕನೋರ್ವ ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಈಕೆ ತನ್ನ ಜೀವನವನ್ನು ಕೊನೆಗೊಳಿಸಲು ಯತ್ನಿಸಿದ್ದಳು. ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಈಕೆಯನ್ನು ಪೋಷಕರು ಹಾಗೂ ಸಂಬಂಧಿಗಳು ಮೆಹಬೂಬಾಬಾದ್ನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ …
Read More »ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇನ್ನು ಮಂಗಳೂರಿನಲ್ಲಿ ಕಾರ್ಯಕರ್ತರು ಹೈಡ್ರಾಮಾ ನಡೆಸುತ್ತಿದ್ದಾರೆ. ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಂಗಳೂರಿನ ಲಾಲ್ ಬಾಗ್ ವೃತ್ತದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತದೆ. ಇಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹಿಂಸೆಗಿಳಿದಿದ್ದಾರೆ.ರಾಜ್ಯಪಾಲರನ್ನು ಕಿತ್ತು ಹಾಕಲು ಬಾಂಗ್ಲಾ ರೀತಿ ಮಾಡ್ತೀವಿ ಎಂದು ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಐವಾನ್ ಡಿಸೋಜ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ …
Read More »ವೈದ್ಯರನ್ನು ಭೇಟಿ ಮಾಡಲು ಹೋದ ವ್ಯಕ್ತಿ ಹೃದಯಘಾತದಿಂದ ಸಾವು
ಇಂದೋರ್: ವೈದ್ಯರನ್ನು ಭೇಟಿ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಅಲ್ಲೇ ಸಾವನ್ನಪ್ಪಿದ್ದಾರೆ. ಪರದೇಸಿಪುರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಈ ಘೋರ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೃತ ವ್ಯಕ್ತಿಯನ್ನು ಸೋನು ಎಂದು ಗುರುತಿಸಲಾಗಿದ್ದು, ಈತ ಆಟೋ ಚಾಲಕನಾಗಿದ್ದ ಎನ್ನಲಾಗಿದೆ. ಆಟೋ ಚಾಲಕ ಸೋನು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ರಾತ್ರಿ 8 ಗಂಟೆಗೆ ಚಿಕಿತ್ಸೆಗಾಗಿ ಭಾಗ್ಯಶ್ರೀ ಆಸ್ಪತ್ರೆಗೆ ಹೋಗಿದ್ದರು. …
Read More »ರಜಿನಿಕಾಂತ್ ಮುಂದಿನ ಸಿನಿಮಾ ರಿಲೀಸ್ಗೆ ಡೇಟ್ ಫಿಕ್ಸ್
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮುಂದಿನ ಸಿನಿಮಾ ʼವೆಟ್ಟೈಯನ್ʼ ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ರಜಿನಿಕಾಂತ್ ʼಜೈಲರ್ʼ ಬಳಿಕ ಮತ್ತೆ ಖಾಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಿ.ಜೆ. ಜ್ಞಾನವೇಲ್ ನಿರ್ದೇಶನದ ʼವೆಟ್ಟೈಯನ್ʼ ಈಗಾಗಲೇ ಟೀಸರ್ನಿಂದ ಗಮನ ಸೆಳೆದಿದ್ದು ನಿರೀಕ್ಷೆ ಹೆಚ್ಚಾಗಿಸಿದೆ.ಸೋಮವಾರ(ಆ.19ರಂದು) ಸಿನಿಮಾ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅಕ್ಟೋಬರ್ 10ರಂದು ʼವೆಟ್ಟೈಯನ್ʼ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ …
Read More »ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ನಿಧನ
ಚೆನ್ನೈ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಸುಂದರರಾಜನ್ ಪದ್ಮನಾಭನ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಜನರಲ್ ಪದ್ಮನಾಭನ್ ಅವರು ಸೆಪ್ಟೆಂಬರ್ 30, 2000 ರಿಂದ ಡಿಸೆಂಬರ್ 31, 2002 ರಂದು ನಿವೃತ್ತರಾಗುವವರೆಗೆ ಭಾರತೀಯ ಸೇನೆಯ 19 ನೇ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಸೇನಾ ಮುಖ್ಯಸ್ಥರ ಪಾತ್ರಕ್ಕೆ ಏರುವ ಮೊದಲು, ಜನರಲ್ ಪದ್ಮನಾಭನ್ ದಕ್ಷಿಣ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





