ಬೆಂಗಳೂರು: ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ, ವಿಧಾನಸೌಧ ಮುಂದೆಯೇ ಬೈಕ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ. ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂಬಾತನಿಂದ ಕತ್ಯ ನಡೆದಿದೆ.ಹೀಗಾಗಿ ದೂರು ನೀಡಲು ಚಳ್ಳಕೆರೆ ಪೊಲೀಸ್ ಠಾಣೆಗೆ ಯುವಕನ ತಾಯಿ ಹೋಗಿದ್ದರು. ಆ ವೇಳೆ ಪೊಲೀಸರು ಪೃಥ್ವಿ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗಿದೆ. ಆ ಕೋಪಕ್ಕೆ ವಿಧಾನಸೌಧ ಮುಂಭಾಗ ಬೈಕ್ ನಿಲ್ಲಿಸಿ ಯುವಕ ಬೆಂಕಿ ಇಟ್ಟಿದ್ದಾನೆ. ಸದ್ಯ ಯುವಕನನ್ನು ವಿಧಾನಸೌಧ ಪೊಲೀಸರು …
Read More »ವೈದ್ಯೆಯ ಅತ್ಯಾಚಾರ ಖಂಡಿಸಿ ದೇಶಾದ್ಯಂತ ಪ್ರತಿಭಟನೆ
ಕೊಲ್ಕತ್ತ: ಇಲ್ಲಿಯ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ದೇಶದ್ಯಾಂತ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಕಾರರು ಆರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲೇಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಕಾಲೇಜಿನ ಪ್ರಾಂಶುಪಾಲರನ್ನು ವಜಾ ಮಾಡಬೇಕು. ಸಂಸ್ಥೆಯಲ್ಲಿ ಕಟ್ಟಡ ಅಥವಾ ಗ್ರಂಥಾಲಯಕ್ಕೆ ಸಂತ್ರಸ್ತೆಯ ಹೆಸರಿಡಬೇಕು ಎಂದು ಒತ್ತಾಯಿಸಿದರು.
Read More »ಕೋಸ್ಟ್ ಗಾರ್ಡ್ ಲಕ್ಷದ್ವೀಪದಲ್ಲಿ ವಿಶೇಷ ರೀತಿಯಲ್ಲಿ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನ ಆಚರಣೆ
ಭಾರತವು ತನ್ನ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸಲು, ಭಾರತೀಯ ಕೋಸ್ಟ್ ಗಾರ್ಡ್ ಲಕ್ಷದ್ವೀಪದಲ್ಲಿ ವಿಶೇಷ ರೀತಿಯಲ್ಲಿ ಸಮುದ್ರದ ಕೆಳಗೆ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಈ ಕುತೂಹಲಕಾರಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಇಂಡಿಯನ್ ಕೋಸ್ಟಲ್ ಗಾರ್ಡ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
Read More »ದೆಹಲಿಯಲ್ಲಿ ಕೆಂಪುಕೋಟೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ
ದೆಹಲಿ: ಇಲ್ಲಿಯ ಕೆಂಪುಕೋಟೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿವಾಗಿ ನಡೆಯುತ್ತಿದೆ. ರಾಷ್ಟ್ರ ಧ್ವಜಾರೋಹಣ ಮಾಡುವ ವೇಳೆ. ವಾಯುಪಡೆಯ ಹೆಲಿಕಾಪ್ಟರ್ಗಳು ಕೋಟೆಯ ಸುತ್ತಲೂ ಸುಳಿದಾಡಿ ಪುಷ್ಪ ವೃಷ್ಟಿ ಮಾಡಿದವು. ಇದು ಈ ದಿನದ ವಿಶೇಷ ಆಕರ್ಷಣೆಯಾಗಿತ್ತು. ಮತ್ತೊಂದೆಡೆ ಬೆಳಗ್ಗೆಯಿಂದಲೇ ವರುಣನ ಆರ್ಭಟ ಜೋರಿದ್ದರೂ ಅತಿಥಿಗಳೆಲ್ಲ ಶ್ರದ್ಧೆಯಿಂದ ಸಂಭ್ರಮದಲ್ಲಿ ಪಾಲ್ಗೊಂಡರು.
Read More »ಮಹಿಳೆಗೆ ಚಾಕು ಇರಿದು ಹತ್ಯೆ
ಬೆಂಗಳೂರು: ಖಾಲಿ ಜಾಗದಲ್ಲಿ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಗೌರಿ (30) ಕೊಲೆಯಾದ ಮಹಿಳೆ.ಪಿರಿಯಾಪಟ್ಟಣದಲ್ಲಿದ್ದ ಗೌರಿ ಒಂದು ವಾರದ ಹಿಂದೆಯಷ್ಟೇ ಇಲ್ಲಿಗೆ ಬಂದಿದ್ದರು. ಈ ನಡುವೆ ರಾತ್ರಿ ಜಟಗರಹಳ್ಳಿಯ ಖಾಲಿ ಜಾಗದಲ್ಲಿ ಈ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸುದ್ದಿ ತಿಳಿದು ಕೆಂಗೇರಿ …
Read More »ಯುವಕನ ಮೇಲೆ ಮಾಲೀನ ಹಲ್ಲೆ ; ನಗ್ನಗೊಳಿಸಿ ವಿಡಿಯೋ ಮಾಡಿದ ವ್ಯಾಪಾರಸ್ಥ
ಬೆಂಗಳೂರು: ಹಾಸಿಗೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನ ಮೇಲೆ ಮಾಲಿಕ ಮನಬಂದಂತೆ ಹಲ್ಲೆ ಬಳಿಕ ನಗ್ನಗೊಳಿಸಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ಸುಬ್ರಮಣ್ಯಪುರದ ಉತ್ತರಹಳ್ಳಿಯ ಬಳಿ ನಡೆದಿದೆ. ಉತ್ತರಹಳ್ಳಿಯ ಹಾಸಿಗೆ ವ್ಯಾಪಾರಿ ಶೇಕ್ಷವಾಲ ಈ ದುಷ್ಕೃತ್ಯ ನಡೆಸಿದ್ದು, ಆಂಧ್ರಪ್ರದೇಶ ಮೂಲದ ಶರೀಫ್ ಮೇಲೆ ಹಲ್ಲೆ ನಡೆಸಲಾಗಿದೆ. ಶೆಕ್ಷಾವಲನಿಗೆ ಶರೀಫ್ ಸಂಬಂಧಿಯಾಗಿದ್ದ. ಹಾಸಿಗೆ ಕೆಲಸಕ್ಕೆಂದು ಆಂಧ್ರದಿಂದ ಶರೀಫ್ ನನ್ನು ಕರೆತಂದಿದ್ದ. ಆದರೆ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡುತ್ತಿದ್ದ. ಹಗಲು ರಾತ್ರಿ …
Read More »ಹಳದಿ ರೋಗದಿಂದ ಹೆಸರುಕಾಳು ಬೆಲೆ ಕುಸಿತ
ಬಾಗಲಕೋಟೆ: ಸತತ ಮಳೆ ಸುರಿಯುತ್ತಿರುವುದರಿಂದ ಹೆಸರುಕಾಳಿಗೆ ಹಳದಿ ರೋಗ ಕಾಡುತ್ತಿದ್ದು, ಬೆಲೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಬಾಗಲಕೋಟೆ, ಗದಗ, ಯಾದಗಿರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಹೆಸರುಕಾಳು ಪ್ರಮುಖ ಬೆಳೆಯಾಗಿದೆ. 2.50 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗಿದೆ. ಬಾಗಲಕೋಟೆ, ಗದಗ, ಯಾದಗಿರಿ, ಹುಬ್ಬಳ್ಳಿ ಸೇರಿ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಸರುಕಾಳು ಆವಕ ಆಗುತ್ತಿದೆ. ಕ್ವಿಂಟಲ್ಗೆ ₹2,004ರಿಂದ ₹8,400ರ ವರೆಗೆ ಬೆಲೆ ಇದೆ. …
Read More »ಪ್ರೀತಿಸಿ ಮದುವೆಯಾದ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಸಾವು
ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಮೃತಪಟ್ಟಿದ್ದಾಳೆ. ಪ್ರೀತಿಸಿ ಮದುವೆಯಾದ ಪತಿಯಿಂದಲೆ ಪತ್ನಿಯ ಕೊಲೆಯಾಗಿದೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಉತ್ತನಹಳ್ಳಿ ಬಳಿ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮೂಲದ ದುರ್ಗಮ್ಮ ಮೃತ ದುರ್ದೈವಿ. ಕಳೆದ ಎರಡು ವರ್ಷಗಳಿಂದ ದುರ್ಗಮ್ಮ ಮಾರುತಿ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಪೋಷಕರ ವಿರೋಧದ ನಡುವೆ ಮದುವೆಯಾಗಿ ನಂತರ ಎರಡು ಕುಟುಂಬಗಳು ಒಂದಾಗಿದ್ದರು. ಮದುವೆ ನಂತರ ಕೂಡ್ಲಗಿಯಿಂದ ಬೆಂಗಳೂರಿಗೆ ಬಂದಿದ್ದ ದಂಪತಿ …
Read More »ಕಾರು ಡಿಕ್ಕಿಯಾಗಿ ಓರ್ವ ಸಾವು
ಚಾಮರಾಜನಗರ: ಇಬ್ಬರು ಸ್ನೇಹಿತರು ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆಯ ಹಂಗಳ ರಸ್ತೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಗಣೇಶ್ (23) ಎಂಬಾತ ಮೃತಪಟ್ಟ ಬೈಕ್ ಸವಾರನಾಗಿದ್ದು, ಈತನ ಸ್ನೇಹಿತ ಈ ವೇಳೆ ಅಪಘಾತದಲ್ಲಿ ಪಾರಾದ ಘಟನೆ ನಡೆದಿದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಹಿಂಬದಿ ಸವಾರ ಮೂತ್ರ ವಿಸರ್ಜನೆ ಮಾಡಬೇಕೆಂದು ರಸ್ತೆ ಪಕ್ಕಕ್ಕೆ ತೆರಳಿದ್ದಾಗ ಕೇರಳ ಮೂಲದ ಕಾರು …
Read More »ಕಾಲಿವುಡ್ ನಲ್ಲೂ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಫುಲ್ ಮಿಚಿಂಗ್
ನಿರ್ದೇಶಕ ಮತ್ತು ಕನ್ನಡ, ತುಳು, ಕೊಂಕಣಿ ಚಿತ್ರನಟ ರೂಪೇಶ್ ಶೆಟ್ಟಿ ತಮಿಳು ಚಿತ್ರರಂಗದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಯೋಗಿಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾವು ಶಬರಿಮಲೆಯ ಕಥೆ ಹೊಂದಿದ್ದು ನಾಪತ್ತೆಯಾದ ಮಗನನ್ನು ಹುಡುಕುವ ತಾಯಿಯ ಕಥೆ ಇದರಲ್ಲಿರಲಿದೆ. ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





