ಬೆಂಗಳೂರು: ಹಾಸಿಗೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನ ಮೇಲೆ ಮಾಲಿಕ ಮನಬಂದಂತೆ ಹಲ್ಲೆ ಬಳಿಕ ನಗ್ನಗೊಳಿಸಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ಸುಬ್ರಮಣ್ಯಪುರದ ಉತ್ತರಹಳ್ಳಿಯ ಬಳಿ ನಡೆದಿದೆ.
ಉತ್ತರಹಳ್ಳಿಯ ಹಾಸಿಗೆ ವ್ಯಾಪಾರಿ ಶೇಕ್ಷವಾಲ ಈ ದುಷ್ಕೃತ್ಯ ನಡೆಸಿದ್ದು, ಆಂಧ್ರಪ್ರದೇಶ ಮೂಲದ ಶರೀಫ್ ಮೇಲೆ ಹಲ್ಲೆ ನಡೆಸಲಾಗಿದೆ.
ಶೆಕ್ಷಾವಲನಿಗೆ ಶರೀಫ್ ಸಂಬಂಧಿಯಾಗಿದ್ದ. ಹಾಸಿಗೆ ಕೆಲಸಕ್ಕೆಂದು ಆಂಧ್ರದಿಂದ ಶರೀಫ್ ನನ್ನು ಕರೆತಂದಿದ್ದ. ಆದರೆ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡುತ್ತಿದ್ದ. ಹಗಲು ರಾತ್ರಿ ಎನ್ನದೇ ಹೆಚ್ಚು ಕೆಲಸ ನೀಡುತಿದ್ದ. ಇದರಿಂದ ಬೇಸತ್ತು ಶರೀಫ್ ಕೆಲಸ ಬಿಟ್ಟು ಮತ್ತೊಂದು ಅಂಗಡಿ ಸೇರಿದ್ದ. ಈ ವಿಚಾರ ತಿಳಿದು ಬಾಕಿ ಸಂಬಳ ಕೊಡುವುದಾಗಿ ಶರೀಫ್ ಗೆ ಕರೆ ಮಾಡಿ ಕರೆಸಿದ್ದ
ಶರೀಫ್ ಬಂದ ಬಳಿಕ ಶೇಕ್ಷವಾಲ ಅಂಗಡಿಯ ಶೆಟರ್ ಹಾಕಿ ಆತನನ್ನು ಬಂಧಿಸಿ ಬೆತ್ತದಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಬಳಿಕ ಶರೀಫ್‌ನ್ನು ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಸಾಮಾಜಿಕ ಕಾರ್ಯಕರ್ತ ಲಕ್ಷ್ಮಿ ನಾರಾಯಣ್ ಶೆಟ್ಟಿ ಶರೀಫ್ ನನ್ನು ರಕ್ಷಿಸಿ ದೂರು ನೀಡುವಂತೆ ಹೇಳಿದ್ದರು. ಆದರೆ ಶೇಕ್ಷವಾಲನ ಕೃತ್ಯಕ್ಕೆ ಹೆದರಿದ ಶರೀಫ್ ಊರು ಬಿಟ್ಟಿದ್ದ.
ಇಷ್ಟಕ್ಕೇ ಸುಮ್ಮನಾಗದ ಶೇಕ್ಷವಾಲನಿಂದಲೇ ಪೊಲೀಸರಿಗೆ ತಾನೇ ಮೊದಲು ದೂರು ದಾಖಲಿಸಿ, ಶರೀಫ್ ತನ್ನ ತಾಯಿ ಬಗ್ಗೆ ಅವಾಚ್ಯ ಪದಗಳ ಬಳಸಿ ನಿಂದಿಸಿದ್ದಾನೆಂದು ಆರೋಪಿಸಿದ್ದ. ಎನ್‌ಸಿಆರ್ ದಾಖಲಸಿಕೊಂಡಿದ್ದ ಪೊಲೀಸರು ಶರೀಫ್ ನನ್ನು ಕರೆಸಿ ಬುದ್ದಿ ಹೇಳಿದ್ದರು. ಈ ವೇಳೆ ಪೊಲೀಸರ ಮುಂದೆ ನಿಂತರೂ ಹಲ್ಲೆ ಮಾಡಿದ್ದ ವಿಚಾರವನ್ನು ಶರೀಫ್ ಬಾಯ್ಬಿಟ್ಟರಲಿಲ್ಲ. ಈ ಮಧ್ಯೆ ಪೊಲೀಸರಿಗೆ ಲಕ್ಷಿ ನಾರಾಯಣ್ ಶೆಟ್ಟಿ ಅವರು ಹಲ್ಲೆಯ ವಿಡಿಯೋವನ್ನು ತಲುಪಿಸಿದ್ದರು.ದೂರು ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಆರೋಪಿಯ ವಿರುದ್ದ ಕ್ರಮ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

