ದಾವಣಗೆರೆ; ಈ ಕಳ್ಳರಿಗೆ ಶಾಲೆ, ಕಾಲೇಜುಗಳು, ಕೋರ್ಟ್ ಗಳೇ ಟಾರ್ಗೆಟ್ ಆಗಿದ್ದವು, ಇವರು ಕಾಲು ಇಟ್ಟರೆ ಇಲ್ಲಿನ ಕಂಪ್ಯೂಟರ್, ಲ್ಯಾಪ್ ಟಾಪ್, ಟಿವಿಗಳು ರಾತ್ರಿ, ಹಾಡುಹಗಲೇ ಎನ್ನದೇ ಮಂಗಮಾಯ ಆಗುತ್ತಿದ್ದವು. ಆದರೆ ಈ ಕಚೇರಿ ಕಳ್ಳರು ಈಗ ದಾವಣಗೆರೆ ಜಗಳೂರು ಪೊಲೀಸರ ಕಾರ್ಯಚರಣೆಯಲ್ಲಿ ಅಂದರ್ ಆಗಿದ್ದಾರೆ..ಹೌದು.. ಶಾಲೆ, ಕಾಲೇಜು, ಕೋರ್ಟ್ ಇನ್ನಿತರೇ ಸರ್ಕಾರಿ ಕಚೇರಿಗಳೇ ಹೆಚ್ಚಾಗಿ ಟಾರ್ಗೆಟ್ ಮಾಡಿಕೊಂಡ ಕಳ್ಳರು ತಮ್ಮ ಕೈ ಚಳಕ ತೋರುತ್ತಿದ್ದರು, ಸರ್ಕಾರಿ ಕಚೇರಿಗಳಲ್ಲಿ ಬಿಗಿ ಭದ್ರತೆ ಕಮ್ಮಿ ಎಂದು ಕಳ್ಳತನಕ್ಕೆ ಇಳಿದಿದ್ದ ಕಳ್ಳರು, ಇತ್ತೀಚೆಗೆ ದಾವಣಗೆರೆಗೆರೆ ಜಿಲ್ಲೆ ಜಗಳೂರಿನ ಹೋ.ಚಿ. ಬೋರಯ್ಯ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆಸಿದ್ದರು. ಕಾಲೇಜಿನಲ್ಲಿ ಎರಡು ಕಂಪ್ಯೂಟರ್ ಸೇರಿದಂತೆ, ಕಳೆದ ವಾರ ಜಗಳೂರು ನ್ಯಾಯಾಲಯದ ಬಾಗಿಲು ಮುರಿದು ಕಳ್ಳತನ ನಡೆಸಿ ವಸ್ತುಗಳನ್ನು ಕದ್ದೊಯ್ದಿದ್ದರು ಎನ್ನಲಾಗಿದೆ. ಈ ಬಗ್ಗೆ ಜಗಳೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಕಳೆದ ತಿಂಗಳಲ್ಲಿ ಕೊಟ್ಟೂರು ತಾಲೂಕು ಹೊಸಳ್ಳಿ ಹೈಸ್ಕೂಲ್ ನಲ್ಲಿ ಎಲ್.ಇ.ಡಿ ಟಿವಿ ಕಳ್ಳತನ ಮಾಡಿದ್ದು ಕೂಡ ಇವರೇ ಎಂಬ ಮಾಹಿತಿ ಪೊಲೀಸರ ಕೈ ಸೇರಿತ್ತು.ಬುಧವಾರ ತಡರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಗಮನಿಸಿದ ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿ, ಬಳಿಕ ಪೊಲೀಸ್ ಭಾಷೆಯಲ್ಲೆ ಸತ್ಯ ಬಾಯಿ ಬಿಡಿಸಿದ್ದಾರೆ ಎನ್ನಲಾಗಿದೆ.ಮೂವರು ಕಳ್ಳರನ್ನು ಈಗ ಜಗಳೂರು ಪೊಲಿಸರು ಬಂಧಿಸಿದ್ದು, ಚೌಡಪ್ಪ, ಗುರಪ್ಪ, ಓಬಯ್ಯ ಬಂಧಿತ ಆರೋಪಿಗಳಾಗಿದ್ದು,ಬಂಧಿತರು ಜಗಳೂರು ತಾಲೂಕು ತಮಲೇಹಳ್ಳಿಯವರಾಗಿದ್ದು,ಬಂಧಿತರಿಂದ 1.12 ಲಕ್ಷ ರೂ. ಮೌಲ್ಯದ ಕಂಪ್ಯೂಟರ್ ಗಳು ಸೇರಿದಂತೆ ಒಂದು ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ.ಒಟ್ಟಾರೆ ಜಗಳೂರು ಸೇರಿದಂತೆ ಸುತ್ತಾಮುತ್ತಾ ಕಚೇರಿಗಳ ವಸ್ತುಗಳು ಕಳವು ಆಗುತ್ತಿದ್ದು ಸುದ್ದಿಯಾಗಿತ್ತು, ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಈ ಕಚೇರಿ ಕಳ್ಳರನ್ನು ಬಂಧಿಸಿ ತನಿಖೆಗೆ ಒಪ್ಪಿಸಿದ್ದು, ಕಚೇರಿಗಳ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





