ಹಾವೇರಿ: ವೆಲ್ಡಿಂಗ್ ಮಾಡುವಾಗ ಬೃಹತ್ ಪಟಾಕಿಯ ಗೊಡೋನ್ ಗೆ ಬೆಂಕಿ ತಗುಲಿ ಸುಮಾರು 1 ಕೋಟಿ ಮೌಲ್ಯದ ಸಿಡಿಮದ್ದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿಯ ಇರುವ ಭೂಮಿಕಾ ಟ್ರೇಡರ್ಸ್ ಎಂಬ ಗೊಡೋನ್ ನಲ್ಲಿ ನಡೆದಿದೆ. ಸಿ ಜಿ ವಿರೇಶ್ ಎಂಬುವವರಿಗೆ ಸೇರಿದ್ದ ಗೊಡೋನ್ ಆಗಿದ್ದು, ಕೆಲಸ ಮಾಡುತ್ತಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಶಿವಕಾಶಿ ಎಂಬಲ್ಲಿಯಿಂದ ಬಂದಿದ್ದ ಪಟಾಕಿ ಸಾಮಾಗ್ರಿಗಳನ್ನು ಇಂದು …
Read More »ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ರೈತರು..
ಹುಬ್ಬಳ್ಳಿ: ಅವರೆಲ್ಲರೂ ಹೊಲದಲ್ಲಿ ಬೆವರು ಹರಿಸಿ ದೇಶಕ್ಕ ಅನ್ನ ಹಾಕುವ ಅನ್ನದಾತ. ಆದರೆ ಅನ್ನದಾತ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾನೆ. ಹೆಸ್ಕಾಂ ಕಚೇರಿಯ ಮುಂದೆಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಜ್ಯೋತಿ ಯೋಜನೆಯಿಂದ ಒಂದು ಕಡೆಗೆ ಖುಷಿಯ ಕ್ಷಣಗಳನ್ನು ಮೆಲುಕು ಹಾಕುವಷ್ಟರಲ್ಲಿಯೇ ಅನ್ನದಾತನಿಗೆ ಸಂಕಷ್ಟ ಎದುರಾಗಿದೆ. ಒಂದು ಕಡೆ ಕೈಕೊಟ್ಟ ಮಳೆ, ಇನ್ನೊಂದೆಡೆ ಬರಗಾಲದ ಛಾಯೆ. ಇನ್ನೂ ಅಲ್ಪ ಸ್ವಲ್ಪ ಇರುವ ನೀರಾವರಿಗೆ ಸಮರ್ಪಕ ವಿದ್ಯುತ್ ಸರಬರಾಜು …
Read More »ಕರುಣ್ ನಾಯರ್ ಇನ್ನೂ ಮುಂದೆ ವಿದರ್ಭ ಕ್ರಿಕೆಟ್ ಟೀಮ್ ಗೆ ಆಡುತ್ತಾರೆ..
ಬೆಂಗಳೂರು: ಭಾರತೀಯ ಬ್ಯಾಟರ್ ಕರುಣ್ ನಾಯರ್ ಎರಡು ದಶಕಗಳ ಕಾಲ ರಾಜ್ಯವನ್ನು ಪ್ರತಿನಿಧಿಸಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ದಿಂದ ಬೇರ್ಪಟ್ಟಿದ್ದಾರೆ. ಬಲಗೈ ಬ್ಯಾಟರ್ ಮುಂಬರುವ ದೇಶೀಯ ಋತುವಿನಲ್ಲಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ನೊಂದಿಗೆ ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ, ಅವರು ಭಾರತೀಯ ಡ್ರೆಸ್ಸಿಂಗ್ ಕೋಣೆಗೆ ಹಿಂದಿರುಗುವ ಮಾರ್ಗವನ್ನು ಹುಡುಕುತ್ತಿದ್ದಾರೆ.
Read More »ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಾದ, ವಿವಾದ ನೋಡಿದ್ದೇನೆ. ಅವರು ಅಷ್ಟು ಸುಲಭವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕುಮಾರಸ್ವಾಮಿ ಅವರನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ತುಂಬಾ ವಿಷಯಗಳಿವೆ. ನನಗೆ ಎಲ್ಲವೂ ಗೊತ್ತಿದೆ. ಪೆನ್ ಡ್ರೈವ್ ಬಗ್ಗೆ …
Read More »ನನ್ನೊಂದಿಗೆ ಇರಲು ಬಯಸಿರುವ ಬೆಂಬಲಿಗರು ಬಿಜೆಪಿಯಲ್ಲೇ ಇದ್ದಾರೆ:ಎಸ್.ಟಿ ಸೋಮಶೇಖರ್.
ಬೆಂಗಳೂರು: ಪಕ್ಷ ಬಿಡುವ ಕುರಿತು ನಾನು ಯಾರೊಂದಿಗೂ ಮಾತುಕತೆ ನಡೆಸಿಲ್ಲ, ಮುಂಬರಲಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗೆ ಸ್ಪರ್ಧೆ ಬಯಸಿರುವವರು ಮಾತ್ರ ಕಾಂಗ್ರೆಸ್ ಸೇರಿದ್ದಾರೆ. ನನ್ನೊಂದಿಗೆ ಇರಲು ಬಯಸಿರುವ ಬೆಂಬಲಿಗರು ಬಿಜೆಪಿಯಲ್ಲೇ ಇದ್ದಾರೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟೀಕರಣ ನೀಡಿದ್ದಾರೆ. ಯಶವಂತಪುರ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ …
Read More »ಬೇರೆಯವರು ಬಂದು ಊಟ ಮಾಡುವಷ್ಟು ತಟ್ಟೆಯಲ್ಲಿ ಊಟವಿದೆ: ಮಧು ಬಂಗಾರಪ್ಪ
ಶಿರಸಿ(ಉತ್ತರ ಕನ್ನಡ): ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಹೊಟ್ಟೆ ತುಂಬಿದೆ. ಆದರೆ ಬೇರೆಯವರು ಬಂದು ಊಟ ಮಾಡುವಷ್ಟು ತಟ್ಟೆಯಲ್ಲಿ ಊಟವಿದೆ. ಕಾರಣ ಪಕ್ಷದ ಹಿತದೃಷ್ಟಿಯಿಂದ ಬೇರೆ ಪಕ್ಷದ ನಾಯಕರು ಬಂದಲ್ಲಿ ಸ್ವಾಗತ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿರಸಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಶಾಸಕರಿಗೆ, ಮಾಜಿ ಶಾಸಕರಿಗೆ ಬರಲು ಸ್ವಾಗತ. ಅಸಮಾಧಾನ ಇದ್ದಲ್ಲಿ ಅದನ್ನು ಹಿರಿಯ …
Read More »ಜನ್ ಧನ್ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಿದೆ: ನಿರ್ಮಲಾ ಸೀತಾರಾಮನ್.
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಜನ್ ಧನ್’‘ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡಿದೆ ಎಂದು ಹಣಹಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. 50 ಕೋಟಿಗೂ ಹೆಚ್ಚು ಜನರನ್ನು ಔಪಚಾರಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಕರೆ ತರಲಾಗಿದೆ. ಈ ಖಾತೆಗಳಲ್ಲಿ ಸುಮಾರು 2 ಲಕ್ಷ ಕೋಟಿ ಸಂಚಿತ ಠೇವಣಿ ಇಡಲಾಗಿದೆ ಎಂಬ ವಿಚಾರವನ್ನು ನಿರ್ಮಲಾ ಸೀತಾರಾಮನ್ ಬಹಿರಂಗ ಪಡಿಸಿದ್ದಾರೆ.
Read More »ಕುಮಾರ ಬಂಗಾರಪ್ಪ ಕಾಂಗ್ರೆಸ್ಗೆ ಸೇರಲ್ಲ: ಬಿ.ವೈ ರಾಘವೇಂದ್ರ.
ಶಿವಮೊಗ್ಗ: ಕುಮಾರ ಬಂಗಾರಪ್ಪ ನಮ್ಮ ನಾಯಕರು. ಅವರು ಕಾಂಗ್ರೆಸ್ಗೆ ಸೇರಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ವಿರೋಧ ಪಕ್ಷವನ್ನು ದುರ್ಬಲ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ. ಆದರೆ, ಇದು ಫಲ ನೀಡಲ್ಲ ಎಂದರು. ಕುಮಾರ ಬಂಗಾರಪ್ಪ ನಮ್ಮ ನಾಯಕರು. ನಮ್ಮ ಪಕ್ಷದ ಶಾಸಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಅವರು ಎಲ್ಲೂ ಹೋಗಲ್ಲ. ಯಾವುದೇ …
Read More »ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಬಾಲಕಿಗೆ ಚಾಕುವಿನಿಂದ ಇರಿತ….
ರಾಮನಗರ: ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಬಾಲಕಿಗೆ ಚಾಕುವಿನಿಂದ ಇರಿದು ಅಪಹರಣ ಮಾಡಿದ ಘಟನೆ ರೇಷ್ಮೆನಗರಿ ರಾಮನಗರದ ಕಾಲೇಜುವೊಂದರ ಬಳಿ ಇಂದು ಬೆಳಗ್ಗೆ ನಡೆದಿತ್ತು. ಸ್ವಲ್ಪ ಸಮಯದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಕಿಡ್ನಾಪ್ ಆಗಿದ್ದ ಬಾಲಕಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂದು ತಿಳಿದಬಂದಿದೆ. ಕಾರಿನಲ್ಲಿ ಅಪಹರಣ ಮಾಡುವ ಮೊದಲು ಆಕೆಯ ಕೈ ಹಾಗೂ ಭುಜದ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಗಾಯಗಳಾಗಿವೆ …
Read More »ಚಿಗುರಿ ಬಸ್ ಕಾಲ ಮೇಲೆ ಹರಿದು ಪಾದಚಾರಿ ಗಾಯ…
ಹುಬ್ಬಳ್ಳಿ: ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಿಆರ್ ಟಿಎಸ್ ಬಸ್ಸು ಚಿಗರಿ ಬಸ್ಸೊಂದು ಪಾದಚಾರಿಯ ಕಾಲ ಮೇಲೆ ಹರಿದು ಹೋದ ಪರಿಣಾಮ ಪಾದಾಚಾರಿಯು ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ನಗರದ ರೈಲ್ವೆ ಸ್ಟೇಷನ್ ಬಳಿಯಲ್ಲಿ ನಡೆದಿದೆ. ಪಾದಾಚಾರಿಯು ರಸ್ತೆಯನ್ನು ದಾಟುವಾಗ ಬಸ್ ಡಿಕ್ಕಿ ಹೊಡೆದಿದೆ.ಗಾಯಗೊಂಡ ವ್ಯಕ್ತಿಯ ಹೆಸರು ಇನ್ನೂ ತಿಳಿದು ಬಂದಿಲ್ಲ, ಆದರೇ, ಪಾದಚಾರಿ ಮದ್ಯಪಾನ ಮಾಡಿದ್ದ ಎಂದು ತಿಳಿದುಬಂದಿದೆ.ಇನ್ನೂ ತೀವ್ರವಾಗಿ ಗಾಯಗೊಂಡ ಪಾದಚಾರಿಯನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರ ಸಹಾಯದಿಂದ ದಾಖಲಿಸಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





