Breaking News

BigTv News

ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣ ರಕ್ಷಣೆ….

ಶಿವಮೊಗ್ಗ: ತೆರೆದ ಬಾವಿಗೆ ಬಿದ್ದಿದ್ದ ಕಾಡು‌ಕೋಣವನ್ನು ರಕ್ಷಣೆ ಮಾಡಲಾಗಿದೆ. ಸಾಗರ ತಾಲೂಕು ಚಿಪ್ಪಲಿ ಲಿಂಗದಹಳ್ಳಿಯ ಜೇನು ಕೃಷಿ ಕಟ್ಟಡದ ಬಳಿ ಇರುವ ತೆರೆದ ಬಾವಿಗೆ ಕಾಡುಕೋಣ ಬಿದ್ದಿತ್ತು. ಈ ಬಾವಿಯು ಸುಮಾರು 25 ಅಡಿ ಆಳದ್ದಾಗಿದ್ದು, ರಸ್ತೆ ದಾಟುವಾಗ ಎರಡು ಕಾಡೆಮ್ಮೆಗಳು ಕೃಷಿ ಕಟ್ಟಡದ ಕಾಂಪೌಂಡ್ ಮೇಲೆ ಜಿಗಿದಿವೆ. ಈ ವೇಳೆ, ದೊಡ್ಡ ಕಾಡುಕೋಣ ಜೋರಾಗಿ ಜಿಗಿದು ಓಡಿ ಹೋಗಿದೆ. ಆದರೆ, ಸುಮಾರು 9 ವರ್ಷ ಪ್ರಾಯದ ಸಣ್ಣ ಕಾಡುಕೋಣ …

Read More »

ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸವ ಆಚರಣೆ….

ಧಾರವಾಡದ ಎಮ್ಮಿಕೇರಿ ಸರ್ಕಾರಿ ಶಾಲೆಯ ಆವರಣದಲ್ಲಿ ಮಾಳಮಡ್ಡಿಯ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸ ಕಾರ್ಯಕ್ರಮ ಆಚರಿಸಲಾಯಿತು. ವಾರ್ಡ್ನನ ಕಾರ್ಪೊರೇಟರ್ ಶ್ರೀ ವಿಷ್ಣುತೀರ್ಥ ಕೊರ್ಲಹಳ್ಳಿ ಅವರ ನೇತ್ರತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಗರಿಕರು ಹಾಗೂ ಪೌರ ಕಾರ್ಮಿಕರ ಜೊತೆಗೂಡಿ ಸ್ವಚ್ಚತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮ ಜರಗಿತು. ಈ …

Read More »

ಜನರ ಮೇಲಿರುವ ಹಣದುಬ್ಬರದ ಒತ್ತಡ ಕಡಿಮೆ ಮಾಡಲು ಸರ್ಕಾರವು ಹೊಸ ಯೋಜನೆ….

ವಿಶ್ವದಲ್ಲಿ ಹಣದುಬ್ಬರ ಹೆಚ್ಚಾಗುತ್ತಲೇ ಇದೆ. ಇದರಿಂದ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗಿದ್ದು, ಇದರಿಂದ ತೊಂದರೆ ಆಗುತ್ತಿರುವುದು ರಾಜ್ಯದ ಸಾಮಾನ್ಯ ಜನರಿಗೆ. ಹಾಗಾಗಿ ಜನರ ಮೇಲಿರುವ ಹಣದುಬ್ಬರದ ಒತ್ತಡ ಕಡಿಮೆ ಮಾಡಲು ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದು ಸರ್ಕಾರ ಹೊರತಂದಿರುವ ಸೋಲಾರ್ ರೂಫ್ ಟಾಪ್ ಪ್ಯಾನೆಲ್ ಯೋಜನೆ (Solar Rooftop Panel Scheme) ಆಗಿದೆ. ಈ ಯೋಜನೆಯ ಮೂಲಕ ನೀವು 25 ವರ್ಷಗಳ ಕಾಲ ವಿದ್ಯುತ್ ಬಿಲ್ …

Read More »

ರಾಹುಲ್‌ ಫ್ಲೈಯಿಂಗ್‌ ಕಿಸ್‌ ಆರೋಪ; ಎನ್‌ಡಿಎ ಸಂಸದೆಯರಿಂದ ದೂರು

ನವದೆಹಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಫ್ಲೈಯಿಂಗ್‌ ಕಿಸ್‌ ನೀಡುವ ಮೂಲಕ ಅನುಚಿತ ವರ್ತನೆ ತೋರಿದ್ದಾರೆ ಎಂದು ಎನ್‌ಡಿಎ ಸಂಸದೆಯರು ಕಿಡಿಕಾರಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಎನ್‌ಡಿಎ ಮಹಿಳಾ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಲೋಕಸಭೆ ಅಧಿವೇಶನದಲ್ಲಿಂದು ರಾಹುಲ್ ಗಾಂಧಿ ಭಾಗಿಯಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸಂಸದರ ಹುದ್ದೆ …

Read More »

ಸಂಸತ್ ಇತಿಹಾಸದಲ್ಲೇ ಈ ರೀತಿ ಆಗಿಲ್ಲ: ರಾಹುಲ್ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ನವದೆಹಲಿ : ಸದನದಲ್ಲಿಂದು ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡುತ್ತಿದ್ದು, ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫ್ಲೈಯಿಂಗ್ ಕಿಸ್ ನೀಡಿ ರಾಹುಲ್ ಸದನದಿಂದ ಹೊರನಡೆದಿದ್ದಾರೆ. ಇದು ಸಂಸದರ ಅನುಚಿತ ವರ್ತನೆ ಎಂದಿದ್ದಾರೆ. ಭಾರತದ ಸಂಸತ್ ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಇದು ಅನುಚಿತ ಮತ್ತು ಅಸಭ್ಯ ವರ್ತನೆಯಾಗಿದೆ. ಇದೆಂತ ವರ್ತನೆ..? …

Read More »

ಗಾಂಜಾ ಮಾರಾಟಕ್ಕೆ ಯತ್ನ ಧಾರವಾಡ ಮೂವರ ಬಂಧನ

ಧಾರವಾಡ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ತಡಸಿನಕೊಪ್ಪ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ದರ್ಶನ ದುಗ್ಗಾಣಿ, ಗುರುರಾಜ ಯರೇಸೀಮಿ ಹಾಗೂ ಮಂಜುನಾಥ ಮಾನೆ ಎಂಬುವವರೇ ಬಂಧಿತರು. ಬಂಧಿತರಿಂದ 510 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ತಡಸಿನಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ವಿದ್ಯಾಗಿರಿ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಪರಾರಿಯಾಗಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More »

ಕಾಲುವೆ ಒಡೆದು ಅವಾಂತರ ಸೃಷ್ಟಿ : ಬೆಳೆಗಳು ಹಾನಿ

ವಿಜಯಪುರ: ಆಲಮಟ್ಟಿ ಎಡದಂಡೆ ಮುಖ್ಯಕಾಲುವೆ ಒಡೆದು ಅವಾಂತರ ಸೃಷ್ಟಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳ ಗ್ರಾಮದ ಬಳಿ ನಡೆದಿದೆ. ಇನ್ನು ನೀರು ಜಮೀನಿಗೆ ನುಗ್ಗಿದ ಪರಿಣಾಮ 200 ಎಕರೆಗೂ ಹೆಚ್ಚಿನ ಪ್ರಮಾಣದ ಜಮೀನು ಜಲಾವೃತ ಆಗಿದೆ. ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಆಗಿದೆ. ಸ್ಥಳಕ್ಕೆ ಕೆಬಿಜೆಎನ್‌ಎಲ್ ಆಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿ, ಕಾಲುವೆ ಒಡೆದ ಸ್ಥಳದಲ್ಲಿ ಜೆಸಿಬಿ ಮೂಲಕ ಮಣ್ಣು ಹಾಕಿ ಮುಚ್ಚಲು ಯತ್ನಿಸಿದ್ದಾರೆ. ಅಲ್ಲದೇ, …

Read More »

ಲೋಕಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ನವದೆಹಲಿ : ನಾನು ತುಂಬಾ ಜೋರಾಗಿ ಅದಾನಿ ವಿರುದ್ಧ ಮಾತನಾಡಿದ್ದೆ, ನಿಮ್ಮ ಹಿರಿಯ ನಾಯಕರಿಗೆ ಇದರಿಂದ ಕಷ್ಟವಾಗಿದೆ. ಇದರ ಕುರಿತು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ಬಿಜೆಪಿ ಸ್ನೇಹಿತರೆ ನೀವು ಹೆದರುವ ಅಗತ್ಯವಿಲ್ಲ ಯಾಕೆಂದರೆ ನನ್ನ ಭಾಷಣ ಅದಾನಿಯ ವಿರುದ್ಧ ಅಲ್ಲ ಎಂದು ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಅಬ್ಬರಿಸಿದ್ದಾರೆ. ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟ ಮಂಡಿಸಿರುವ ಅವಿಶ್ವಾಸ ನಿಲುವಳಿಯ ಮೇಲೆ ಮಾತನಾಡುತ್ತಿರುವ ಅವರು, ಈ ಬಾರಿಯ …

Read More »

ರಾಜಕೀಯ ಗಣ್ಯರಿಂದ ಸ್ಪಂದನಾ ಅಂತಿಮ ದರ್ಶನ

ಬೆಂಗಳೂರು : ಸೋಮವಾರ ಬ್ಯಾಂಕಾಕ್ ನಲ್ಲಿ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ ತಲುಪಿದೆ. ನಗರದ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಗಣ್ಯರಿಂದ ಅಂತಿಮ ದರ್ಶನ : ಸ್ಪಂದನಾ ಅಂತಿಮ ದರ್ಶನಕ್ಕೆ ಬೆಳ್ಳಂ ಬೆಳಿಗ್ಗೆಯೇ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕರ ದಂಡೇ ಹರಿದು ಬಂದಿದೆ. ರಾಜಕೀಯ …

Read More »

ರಾಹುಲ್‌ ನೇತೃತ್ವದಲ್ಲಿ ಎರಡನೇ ಭಾರತ್‌ ಜೋಡೋ ಯಾತ್ರೆ ಫಿಕ್ಸ್‌

ನವದೆಹಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಗೆ ಸಜ್ಜಾಗಿದ್ದಾರೆ. ಈ ಬಾರಿ ಗುಜರಾತ್‌ನಿಂದ ಶುರುವಾಗಿ ಮೇಘಾಲಯದವರೆಗೆ ಈ ಯಾತ್ರೆ ಸಾಗಲಿದೆ ಈ ವಿಚಾರವನ್ನು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಖಚಿತಪಡಿಸಿದ್ದಾರೆ. ರಾಹುಲ್‌ ಗಾಂಧಿ ಮೊದಲ ಹಂತದಲ್ಲಿ ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ನಡೆಸಿದ್ದರು. ಒಟ್ಟು ಹನ್ನೆರಡು ರಾಜ್ಯಗಳಲ್ಲಿ ಬರೋಬ್ಬರಿ ನಾಲ್ಕು ಸಾವಿರ ಕಿಲೋಮೀಟರ್‌ ಪಾದಯಾತ್ರೆಯನ್ನು ರಾಹುಲ್‌ ಮುನ್ನಡೆಸಿದ್ದರು. ಇದೀಗ ಭಾರತದ …

Read More »