Breaking News

ರಾಜಕೀಯ ಗಣ್ಯರಿಂದ ಸ್ಪಂದನಾ ಅಂತಿಮ ದರ್ಶನ

ಬೆಂಗಳೂರು : ಸೋಮವಾರ ಬ್ಯಾಂಕಾಕ್ ನಲ್ಲಿ ನಿಧನರಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ ತಲುಪಿದೆ. ನಗರದ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಜಕೀಯ ಗಣ್ಯರಿಂದ ಅಂತಿಮ ದರ್ಶನ : ಸ್ಪಂದನಾ ಅಂತಿಮ ದರ್ಶನಕ್ಕೆ ಬೆಳ್ಳಂ ಬೆಳಿಗ್ಗೆಯೇ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕರ ದಂಡೇ ಹರಿದು ಬಂದಿದೆ. ರಾಜಕೀಯ ಗಣ್ಯರಾದ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಸ್ಪಂದನಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಅಂತಿಮ ದರ್ಶನದ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸ್ಪಂದನಾ ಅಗಲಿಕೆಯಿಂದ ಅವರ ಕುಟುಂಬಕ್ಕೆ ಮಾತ್ರ ಅಲ್ಲ, ಹಲವು ಕುಟುಂಬಗಳಿಗೆ ನಷ್ಟವಾಗಿದೆ. ಸ್ಪಂದನಾ ಬಹಳ ಸ್ನೇಹ ಜೀವಿಯಾಗಿದ್ದರು. ವಿಜಯ ರಾಘವೇಂದ್ರ ಅವರಿಗೆ ಅವಿಭಾಜ್ಯ ಅಂಗವಾಗಿದ್ದರು. ನಾನು ವಿಜಯ ರಾಘವೇಂದ್ರ ಸ್ನೇಹಿತರು. ಈ ಸಂಧರ್ಭದಲ್ಲಿ ಏನು ಹೇಳಬೇಕು

ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ ನಮಗೆಲ್ಲ ತುಂಬಲಾರದ ನಷ್ಟವಾಗಿದೆ. ನಾನು ಸಚಿವನಾದಾಗ ವಿಜಯ್ ದಂಪತಿ ಕಾಲ್ ಮಾಡಿದ್ದರು. ನನಗೆ ಸನ್ಮಾನ ಮಾಡುವ ಯೋಚನೆಯಲ್ಲಿದ್ದರು. ನನ್ನ ಮನೆಯವರಿಗೂ ಆರೋಗ್ಯ ಸರಿಯಿಲ್ಲ. ಹಾಗಾಗಿ, ವಿಜಯ್-ಸ್ಪಂದನಾ ಆಗಾಗ ಕಾಲ್ ಮಾಡಿ ವಿಚಾರಿಸುತ್ತಿದ್ದರು. ಕಷ್ಟ ಕಾಲದಲ್ಲಿ ವಿಜಯ್ ಗೆ ದೇವರು‌ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದರು.

ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಸೇರಿದಂತೆ ಇತರ ಹಲವು ಗಣ್ಯರು ಕೂಡ ಸ್ಪಂದನಾ ಅವರ ಅಂತಿಮ ದರ್ಶನ ಪಡೆದು

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *