ಹುಬ್ಬಳ್ಳಿ: ಪ್ರಣಾಳಿಕೆ ಸಲಹಾ ಅಭಿಯಾನ ಅಂಗವಾಗಿ ನಗರದ ಹೆಬಸೂರು ಭವನದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಕೈಗಾರಿಕಾ, ವಾಣಿಜ್ಯ ಹಾಗೂ ಆಹಾರ ಮತ್ತು ನಾಗರಿಕ ಸಚಿವ ಪಿಯೋಷ ಗೋಹಲ್ ಭಾಷಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಆಗಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಷ್ಟು ಅಭಿವೃದ್ಧಿ ಆಗಿದೆ ಎಂದರು.
Read More »ಶ್ರೀ ಅಮ್ರತೇಶ್ವರ ಪೇಂಟರ್ಸ ಕಾರ್ಮಿಕರ ಬಳಗ ಸಂಘದ ಉದ್ಘಾಟನೆ
ನವಲಗುಂದ: ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ನೂತನವಾಗಿ ಶ್ರೀ ಅಮ್ರತೇಶ್ವರ ಪೇಂಟರ್ಸ ಕಾರ್ಮಿಕರ ಬಳಗ ಸಂಘದ ಉದ್ಘಾಟನಾ ಸಮಾರಂಭವನ್ನು ಮಾಜಿಶಾಸಕ, ಕಾಂಗ್ರೆಸ್ ಮುಖಂಡ ಎನ್ ಎಚ್ ಕೋನರಡ್ಡಿಯವರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಜನಾಬ ಸೈಯ್ಯದ ಸಜ್ಜಾದಹುಸೇನ ಖಾದ್ರಿ ಕಮಲಾಪೂರ ದರ್ಗಾ ಇವರುಗಳ ದಿವ್ಯ ಸಾನಿಧ್ಯದಲ್ಲಿ ಸಂಘದ ಉದ್ಘಾಟನೆಯನ್ನು ನೆರವೇರಿಸಿಸುವುದರ ಜೊತೆಗೆ ಸಂಘದ ನೂತನ ಸರ್ವಸದಸ್ಯರಯಗಳಿಗೆ ಪದಗ್ರಹ ಭೋದನೆ ಮಾಡಿ ನಂತರ ಮಾತನಾಡಿದ ಕೋನರಡ್ಡಿಯವರು, …
Read More »SSK ಬಾಲ್ಯ ವಿದ್ಯಾ ಮಂದಿರದ ಕಟ್ಟಡದ ಸ್ಲ್ಯಾಬ್ ಗೆ ಚಾಲನೆ
ಗದಗ: 31 ನೇ ವಾರ್ಡಿನಲ್ಲಿ ನಗರಸಭೆ ಸದಸ್ಯ ರಾದ ಶ್ರೀಮತಿ ಶೈಲಾ ಬಾಕಳೆ ಅವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ssk ಬಾಲ್ಯ ವಿದ್ಯಾ ಮಂದಿರದ ಕಟ್ಟಡದ ಸ್ಲ್ಯಾಬ್ ಹಾಕುವ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀಮತಿ ಶೈಲಾ ಬಾಕಳ್ ಹಾಗೂ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಬಾಕಳ್ ಹಾಗೂ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸುದೀರ ಕಾಟಿಗರ, ಸರೋಜಬಾಯಿ ಶೇಜ್ ವಾಡ್ಕರ್ ಇಂಜಿನಿಯರ್ ಬಿಮ …
Read More »ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ- ಲಿಂಬಿಕಾಯಿ
ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ನಾನು ಯಾವುದೇ ಕರಾರು ಇಲ್ಲದೇ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಮೂರು ವರ್ಷದಿಂದ ಜನ ವಿರೋಧಿ ಸರ್ಕಾರ ಇದೆ. ನನಗೆ ಬಹಳ ನೋವಾಗಿದೆ ಈ ನಿಟ್ಟಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ಮೋಹನ್ ಲಿಂಬಿಕಾಯಿ ಹೇಳಿದರು. 2008 ರಲ್ಲಿ ನಾನು ಪದವೀಧರ ಕ್ಷೇತ್ರದಿಂದ ಗೆದ್ದಿದ್ದೆ. ಭಾರತೀಯ ಜನತಾ ಪಾರ್ಟಿ ಮುಖಂಡರು ಎಲ್ಲರೂ ಸೇರಿ ನನ್ನ ಚುನಾವಣೆಗೆ ನಿಲ್ಲಿಸಿದ್ದರು. 2013 ರಲ್ಲಿ ಯಡಿಯೂರಪ್ಪ ಕೆಜೆಪಿ …
Read More »ಹುಬ್ಬಳ್ಳಿಯಲ್ಲಿ ಗ್ರಾಮದೇವತೆಯರ ಪಲ್ಲಕ್ಕಿ ಉತ್ಸವ
ಹುಬ್ಬಳ್ಳಿ: ನಗರದ ಯಲ್ಲಾಪುರ ದೇಸಾಯಿ ಓಣಿಯಲ್ಲಿರುವ ದ್ಯಾಮವ್ವದೇವಿ ಮತ್ತು ಮರಿಯಮ್ಮ ದೇವಿ ಗ್ರಾಮದೇವತೆಯರ ಮರು ಪ್ರಾಣ ಪ್ರತಿಷ್ಠಾಪನೆಯನ್ನು ಅಲ್ಲಿನ ಗುರು ಹಿರಿಯರು ಮತ್ತು ಶ್ರೀ ಗ್ರಾಮದೇವತೆ ಉತ್ಸವ ಸಮಿತಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಶ್ರೀ ದುರ್ಗವ್ವದೇವಿ, ದ್ಯಾಮವ್ವದೇವಿ, ಮರಿಯಮ್ಮದೇವಿಯವರ ಪುರ ಪ್ರವೇಶ ಪಲ್ಲಕ್ಕಿ ಉತ್ಸವದಲ್ಲಿ ದೇವತೆಯರನ್ನು ಅಲಂಕರಿಸಿ ಮೆರವಣಿಗೆ ಮಾಡಿದ್ದು, ಈ ಮೆರವಣಿಗೆಯಲ್ಲಿ ಜೋಡೆತ್ತು, ಚಂಡವಾದ್ಯ ಬಳಗ, ಡೊಳ್ಳು ಕುಣಿತ, ಕರಡಿ ಮಜಲು, ಸಾವಿರಾರು ಮಹಿಳೆಯರು ಯುವತಿಯರಿಂದ ಬೃಹತ್ …
Read More »ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು, ವಿನಯ್ ಕುಲಕರ್ಣಿಗೆ ಎಐಸಿಸಿ ಸಮ್ಮತಿ
ನವದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಎಐಸಿಸಿ ಚುನಾವಣಾ ಸಮಿತಿ ಸಭೆ ಒಪ್ಪಿಗೆ ಸೂಚಿಸಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವಿನಯ್ ಕುಲಕರ್ಣಿ, ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದೇ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ವಿನಯ್ ಕುಲಕರ್ಣಿ ಇಂದು ದೆಹಲಿಗೆ ತೆರಳಿದ್ದರು
Read More »ಬಿಜೆಪಿ ಸರ್ಕಾರದ ಆಯುಷ್ಯ ಮುಗಿತಾ ಬಂದಿದೆ-ಸಲೀಂ ಅಹಮ್ಮದ್
ಹುಬ್ಬಳ್ಳಿ: ಬಿಜೆಪಿ ಸರ್ಕಾರದಿಂದ ರಾಜ್ಯದ ಜನ ನೊಂದಿದ್ದಾರೆ, ಬೆಂದಿದ್ದಾರೆ. ಇದು ಲಂಚಾವತರಾದ ಸರ್ಕಾರ. ಈ ಸರ್ಕಾರದ ಆಯುಷ್ಯ ಮುಗಿತಾ ಬಂದಿದೆ. ಇನ್ನು 40 ದಿನ ಈ ಸರ್ಕಾರದ ಆಯುಷ್ಯ. ಇವತ್ತಿನ ಮಾಹಿತಿ ಪ್ರಕಾರ ಬಿಜೆಪಿ ಗೆಲ್ಲೋದು 40 ರಿಂದ 45 ಸೀಟ್ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದಂತೆ ಸಲಹೆ ನೀಡಿರೊ ವಿಚಾರವಾಗಿ ಮಾತನಾಡಿದ್ದು, ರಾಹುಲ್ ಗಾಂಧಿ ಸಲಹೆ ನೀಡಿರೋದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ …
Read More »ಬೆಳಗಾವಿಯಲ್ಲಿ ಬೃಹತ್ ಯುವ ಕ್ರಾಂತಿ ಸಮಾವೇಶ- ರಾಹುಲ್ ಗಾಂಧಿ ಆಗಮನ
ಹುಬ್ಬಳ್ಳಿ : 20 ರಂದು ರಾಹುಲ್ ಗಾಂಧಿ ಬೆಳಗಾವಿಗೆ ಬೃಹತ್ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಸಮಾವೇಶದಲ್ಲಿ ಸುರ್ಜೇವಾಲಾ,ವೇಣುಗೋಪಾಲ, ಸಿದ್ದರಾಮಯ್ಯ ಡಿಕೆಶಿವಕುಮಾರ್, ಪರಮೇಶ್ವರ,ಮುನಿಯಪ್ಪ,ಎಮ್ ಬಿ ಪಾಟೀಲ್ ಭಾಗಿಯಾಗಲಿದ್ದಾರೆ. ಸುಮಾರು 2 ಲಕ್ಷ ಜನ ಕಾರ್ಯಕ್ರಮದಲ್ಲಿ ಸೇರಲಿದ್ದು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಯುವ ಜನತೆಗೆ ಸಂದೇಶ ಕೊಡಲಿದ್ದಾರೆ. ಮತ್ತು ಭಾರತ ಜೋಡೋ ಯಾತ್ರೆ ವೇಳೆ ಯುಕವರು ಅನ್ಯಾಯದ ಬಗ್ಗೆ ರಾಹುಲ್ ಗಾಂಧಿಗೆ …
Read More »ಬಿಜೆಪಿ ಸರ್ಕಾರ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ -ಸಲೀಂ ಅಹ್ಮದ
ಹುಬ್ಬಳ್ಳಿ: ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರೌಡಿಗಳನ್ನು ಪೋಷಿಸುವ ಹಾಗೂ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ. ಕ್ರಿಮಿನಲ್ ಗಳನ್ನು ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಕೈ ಮುಗಿಯುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಬಿಜೆಪಿ ಸುಮಾರು 23 ಸಾವಿರ ರೌಡಿಗಳಿಗೆ ಕ್ಲೀನ್ ಚೀಟ್ ಕೊಡುವ ಮೂಲಕ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, …
Read More »ಅವಳಿನಗರದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಮಲ ಪಾಳೆಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ-72ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಿಂದ ಆಯೋಜಿಸಲಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿ.ಟಿ.ರವಿ, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





