ಬೆಂಗಳೂರು: ಹಾಡಹಗಲೇ ಆಟೋದಲ್ಲಿ ಬಂದ ದುಷ್ಕರ್ಮಿಗಳ ಗುಂಪು ಯುವಕನೊಬ್ಬನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ನಟರಾಜ್ ಅಲಿಯಾಸ್ ನಟ ಎಂಬಾತನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ ಗ್ಯಾಂಗ್ ಆತನ ಮೇಲೆ ಹಲ್ಲೆಯನ್ನೂ ನಡೆಸಿದೆ. ನಟರಾಜ್ ಜೊತೆ ಟೀ ಕುಡಿಯುತ್ತ ನಿಂತಿದ್ದ ಶರತ್ ಎಂಬಾತನನ್ನು ನಟರಾಜ್ ಎಂದು ಭಾವಿಸಿ ಆತನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ. ಬಳಿಕ ನಟರಾಜ್ ತಾನಲ್ಲ ಎಂದು ಹೇಳಿದರೂ ಕೇಳದೇ ಆಟೋದಲ್ಲಿ ತುಂಬಿಕೊಂಡು ಹಲ್ಲೆ ನಡೆಸಿದದರೆ. ಬಳಿಕ ಶರತ್ ನ ಅಕ್ಕನಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಶರತ್ ಫೋನ್ ಪರಿಶೀಲಿಸಿದ ದುಷ್ಕರ್ಮಿಗಳಿಗೆ ತಾವು ಕಿಡ್ನ್ಯಾಪ್ ಮಾಡಿದ ವ್ಯಕ್ತಿ ಬೇರೆಯವನು ಎಂಬುದು ಗೊತ್ತಾಗಿದೆ. ತಕ್ಷಣ ಅರ್ಧದಾರಿಯಲ್ಲಿಯೇ ಆತನನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಶರತ್ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡ್ನ್ಯಾಪರ್ಸ್ ಬಂಧನಕ್ಕೆ ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

