Breaking News

BigTv News

ಅರವಿಂದ ಬೆಲ್ಲದ ವಿರುದ್ಧ ಮನೆ ಹಂಚಿಕೆ ಕುರಿತು ಪಾಲಿಕೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ಆಶ್ರಯ ಯೋಜನೆಯಲ್ಲಿ ಹಂಚಿಕೆಯಾದಂತಹ ಮೂಲ ಫಲಾನುಭವಿಗಳನ್ನು ಮನೆಗಳನ್ನು ರದ್ದು ಮಾಡಿ, ಶಾಸಕ ಅರವಿಂದ ಬೆಲ್ಲದ ಅವರು ತಮಗೆ ಬೇಕಾದವರಿಗೆ ಮತ್ತು ತಮ್ಮ ಹಿತೈಷಿಗಳಿಗೆ, ತಮ್ಮ ಹಿಂಬಾಲಕರಿಗೆ ಮನೆಗಳನ್ನು ಮರು ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಮಾಡುತ್ತಿರುವುದನ್ನು ವಿರೋಧಿಸಿ ಧಾರವಾಡ ಜಿಲ್ಲಾ ಆಶ್ರಯ ಮನರ ಬಡಾವಣೆಗಳ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದಿಂದ ಇಂದು ಪಾಲಿಕೆ ಎದುರಿಗೆ ಶಾಸಕ ಅರವಿಂದ ಬೆಲ್ಲದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ಮಾಡಿದರು. ಇನ್ನು 300 ಕ್ಕೂ …

Read More »

14ರಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗಮನ, ಪಂಚರತ್ನ ಯಾತ್ರೆ ಮೂಲಕ ಸಂಘಟನಾ ಸಭೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇದೇ 14ರಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಅಂದು ವಿವಿಧ ಕಡೆಗಳಲ್ಲಿ ಪಂಚರತ್ನ ಯಾತ್ರೆ ಮೂಲಕ ಸಂಘಟನಾ ಸಭೆ ನಡೆಯಲಿದ್ದಾರೆ ಎಂದು ಜೆಡಿಎಸ್ ಧಾರವಾಡ ಜಿಲ್ಲೆಯ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದಜೆಡಿಎಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ಬಿ.ಗಂಗಾಧರ ಮಠ ಹಾಗೂ ಗುರುರಾಜ ಹುಣಸಿಮರದ, …

Read More »

ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಧಾರವಾಡ ತಾಲೂಕಿನ ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗಳಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪೂಜ್ಯರ ಅಂತ್ಯಕ್ರಿಯೆ ನಾಳೆ ಸೋಮವಾರ ಬೆಳಿಗ್ಗೆ 12 ಗಂಟೆಗೆ ಗರಗ ಗ್ರಾಮದ ಶ್ರೀಮಠದ ಆವರಣದಲ್ಲಿ ನಡೆಯಲಿದೆ. ಈ ಅಂತ್ಯಕ್ರಿಯೆಗೆ ನಾಡಿನ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಕಲ್ಮಠದ ಜವಾಬ್ದಾರಿ ಹೊತ್ತುಕೊಂಡಿದ್ದ ಚನ್ನಬಸವ ಸ್ವಾಮೀಜಿ ಮಠದ ಏಳೆಗಾಗಿ ಹಗಲಿರುಳು …

Read More »

57 ಕೇಸ್‌ಗೆ 14,250 ರೂ.ದಂಡ ಪಾವತಿ ಮಾಡಿದ ದ್ವಿಚಕ್ರ ವಾಹನ ಸವಾರ….

ಹುಬ್ಬಳ್ಳಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಾಹನ ಚಾಲಕರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದಂತ ಇ- ಚಲನ್ ಮೇಲೆ ನೀಡಿದ 50% ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡೆಸುಕೊಳ್ಳುತ್ತಿದ್ದು, ವಾಹನ ಸವಾರನೊಬ್ಬ ಸ್ವ ಇಚ್ಛೆಯಿಂದ ಬಂದು 57 ಕೇಸ್ ಗೆ ದಂಡವನ್ನು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ಪಾವತಿ ಮಾಡಿದ್ದಾನೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಸಾರ್ವಜನಿಕರ ದಂಡ ಪಾವತಿಗೆ 50% ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಿವಾಸಿ ಸೂರಜ್ …

Read More »

ಫೆಬ್ರವರಿ ೧೧ ರಂದು ಹುಬ್ಬಳ್ಳಿಯಲ್ಲಿ ಶ್ರೀ ಕೃಷ್ಣ-ಬಲರಾಮರ ರಥಯಾತ್ರೆ..

ಹು-ಧಾ ಅವಳಿನಗರದಲ್ಲಿ ಇಸ್ಕಾನ್ ವತಿಯಿಂದ ಶ್ರೀ ಕೃಷ್ಣ ಬಲರಾಮ ರಥಯಾತ್ರೆಯನ್ನು ಫೆಬ್ರವರಿ ೧೧ ರಂದು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚಸ ದಾಸ್ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಾಯಂಕಾಲ ೪.೩೦ ರಿಂದ ೮.೩೦ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದ ಅವರು,ಅಂದಿನ ರಥಯಾತ್ರೆಯು ನಗರದ ನೆಹರೂ ಮೈದಾನದಿಂದ ಆರಂಭವಾಗಿ ಲ್ಯಾಮಿಂಗ್ಟನ್ ರಸ್ತೆ, ಅಂಬೇಡ್ಕರ್ ಸರ್ಕಲ್, ಸ್ಟೇಷನ್ ರಸ್ತೆ, ಗಣೇಶ್ ಪೇಟ ಚೌಕ್, ಮರಾಠಾ …

Read More »

ಮಾರ್ಚ್4 ಹಾಗೂ 5 ರಂದು ಟೈಕಾನ್ ಸಮಾವೇಶ…

ಹುಬ್ಬಳ್ಳಿ: ಟೈ ವತಿಯಿಂದ ವಾರ್ಷಿಕ ವ್ಯವಹಾರ ಸಮ್ಮೇಳನವಾದ ಟೈಕಾನ್ ಹುಬ್ಬಳ್ಳಿ ಕಾರ್ಯಕ್ರಮವನ್ನು ಮಾರ್ಚ್ ೪ ಹಾಗೂ ೫ ರಂದು ಬೆ. ೧೦ ಗಂಟೆಯಿಂದ ಸಂಜೆ ೫.೩೦ ರವರೆಗೆ ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಶ್ರಾವಣಿ ಪವಾರ್ ಹೇಳಿದರು.ನಗರದಲ್ಲಿ ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. ೪ ರಂದು ಮಹಿಳಾ ನವೋದ್ಯಮಿಗಳ ಸಮಾವೇಶ ಕಾರ್ಯಕ್ರಮ ಹಾಗೂ ಮಾ. ೫ ರಂದು ಟೈಕಾನ್ ಸಮಾವೇಶ …

Read More »

ಫೆಬ್ರವರಿ ೨೪ ರಂದು ಪ್ಯಾನ್ ಇಂಡಿಯಾ ಸಿನಿಮಾ ರಾಜ್ಯಾದ್ಯಂತ ತೆರೆಗೆ..

ಹುಬ್ಬಳ್ಳಿ: ರಿಯಾನ್ಸಿ ಫಿಲ್ಮ್ ಬ್ಯಾನರ್ ನಡಿ ನಿರ್ಮಾಣದ ಸೌಂತ್ ಇಂಡಿಯನ್ ಸಿನಿಮಾ ರಾಜ್ಯಾದ್ಯಂತ ಫೆಬ್ರವರಿ ೨೪ ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ನರೇಶ ಹೇಳಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಸ್ಟ್ ರ್ಯಾಂಕ್ ರಾಜು ಅಂತಹ ಹಿಟ್ ಸಿನಿಮಾಗಳ ನಂತರ ಇದೀಗ ಸೌಂತ್ ಇಂಡಿಯನ್ ಸಿನಿಮಾ ನಿರ್ದೇಶನ ಮಾಡಿದ್ದು, ಚಿತ್ರದ ಕಥೆ ಅದ್ಭುತವಾಗಿ ಮೂಡಿ ಬಂದಿದೆ ಎಂದ ಅವರು ಚಿತ್ರದಲ್ಲಿ ನಾಯಕ ನಟನಾಗಿ ಸಾರ್ಥಕ ಹಾಗೂ …

Read More »

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. 64 ವರ್ಷದ ಶಿವಾನಂದ ಅಂಬಡಗಟ್ಟಿ ಅವರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಸೇರಿದಂತೆ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. 1989 ರಿಂದ ರಾಜಕಾರಣದಲ್ಲಿ ಇದ್ದ ಇವರು, ಲೊಹೀತ್ ನಾಯ್ಕರ್ ವಿರುದ್ಧ ಪಕ್ಷೇತರರಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಶಾಸಕರಾಗಿದ್ದರು. ನಂತರ ಕಾಂಗ್ರೆಸ್ …

Read More »

ಐಇಎಂಎಸ್ ಹುಬ್ಬಳ್ಳಿಯಲ್ಲಿ ಐದು ದಿನಗಳ ಎಮ್ ಬಿ ಎ ಮತ್ತು ಪಿ ಜಿ ಡಿ ಬಿ ಎಮ್ ಕೋರ್ಸ್ ಗಳ ಓರಿಯಂಟೇಶನ್ ಕಾರ್ಯಕ್ರಮ “ನಿರ್ಮಾಣ-2023”ರ ಉದ್ಘಾಟನಾ ಸಮಾರಂಭ

ನಗರದ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್, ಹುಬ್ಬಳ್ಳಿಯಲ್ಲಿ ಐದು ದಿನಗಳ ಓರಿಯಂಟೇಶನ್ ಕಾರ್ಯಕ್ರಮದ ಉದ್ಘಾಟನೆಯನ್ನು 08ನೇ ಫೆಬ್ರವರಿ 2023 ರಂದು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿ ಎ.ಆರ್.ವಿನಯ್ ಜವಳಿ, ಅಧ್ಯಕ್ಷರು , ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಹುಬ್ಬಳ್ಳಿ ಮಾತನಾಡುತ್ತ ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು , ಮ್ಯಾನೇಜ್ಮೆಂಟ್ ಪದವೀಧರರಿಗೆ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ, ಮೊಲ ಜ್ಞಾನದೊಂದಿಗೆ ಸೂಕ್ತ ಕೌಶಲ್ಯವನ್ನು ಹೊಂದಿರುವುದು ತೀರಾ ಅಗತ್ಯವಾಗಿದೆ. ವಿಶೇಷ ಕ್ಷೇತ್ರದಲ್ಲಿನ ನೈಪುಣ್ಯತೆ …

Read More »

ಬೈಕ್ ಮೇಲಿಂದ ಸ್ಕಿಡ್ ಆಗಿ ಬಿದ್ದ ಯುವಕ ಸಾವು

ಹುಬ್ಬಳ್ಳಿ: ಯುವಕನೊಬ್ಬ ಬೈಕ್ ಮೇಲಿಂದ ಸ್ಕಿಡ್ ಆಗಿ ಬಿದ್ದ ಪರಿಣಾಮ ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ 2-30 ರ ಸುಮಾರಿಗೆ ನಡೆದಿದೆ. ಆನಂದ ನಗರದ ನಿವಾಸಿಯಾದ ಸಲಿಂ ಎಂಬ ಯುವಕ ನಿನ್ನೆ ತಡರಾತ್ರಿ ಮನೆಗೆ ಹೋಗುತ್ತಿದ್ದಾಗ ಇಂದಿರಾ ನಗರದ ಬಳಿ ಇರುವ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸಲೀಮ್ ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. …

Read More »