Breaking News

BigTv News

ಜೈಲಿನಿಂದ ಹೊರಬಂದ 24 ಗಂಟೆಯಲ್ಲೇ ರೌಡಿಶೀಟರ್‌ನ ಭೀಕರ ಹತ್ಯೆ! ಹಿಡಕಲ್ ಡ್ಯಾಂ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಸಮೀಪ ಗಡಿಪಾರು ಆದೇಶದಡಿ ಧಾರವಾಡ ಜೈಲಿನಲ್ಲಿದ್ದ ರೌಡಿಶೀಟರ್ ಮುತ್ತುಸ್ವಾಮಿ ಹೃದಯರಾಜ ಪಾಸ್ಕಲ್ (30) ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೀಡಾಗಿದ್ದಾನೆ. ಹಳೆ ವೈಷಮ್ಯವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಸ್ನೇಹಿತರೊಂದಿಗೆ ಹಿಡಕಲ್ ಡ್ಯಾಂ ಪ್ರದೇಶಕ್ಕೆ ತೆರಳಿದ್ದ ವೇಳೆ, ಮೊದಲೇ ಹೊಂಚುಹಾಕಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ …

Read More »

ಕಾರಿನಲ್ಲಿ ಸಾಗಿಸುತ್ತಿದ್ದ 31 ಕಿಲೋ ಗಾಂಜಾ ವಶ: ಮತ್ತಿಬ್ಬರ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸಲಾಗುತ್ತಿದ್ದ 31 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಂಞಂಗಾಡ್‌ನ ಟಿ.ಎಂ. ಶಮೀರ್ (40) ಮತ್ತು ನೀಲೇಶ್ವರದ ಟಿ. ಶಂಸೀರ್ (33) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಈ ಹಿಂದೆ ಕಬೀರ್ ಯಾನೆ ಲಾಲಾ ಕಬೀರ್ (40) ಹಾಗೂ ಮೊಹಮ್ಮದ್ ಮಿರ್ಶಾನ್ (34) ಬಂಧಿತರಾಗಿದ್ದರು. ಖಚಿತ ಮಾಹಿತಿಯ ಆಧಾರದಲ್ಲಿ ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾ ಸಮೀಪ ವಾಹನ …

Read More »

ಧಾರವಾಡದಲ್ಲಿ ಬೆಚ್ಚಿಬೀಳಿಸಿದ ಕೌಟುಂಬಿಕ ದುರಂತ: ವೈದ್ಯ ಪತಿ ಹತ್ಯೆ, ಪುತ್ರನ ಮೇಲೂ ಚಾಕು ದಾಳಿ

ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಕೌಟುಂಬಿಕ ದುರಂತವೊಂದು ಬೆಳಕಿಗೆ ಬಂದಿದೆ. ಧಾರವಾಡದ ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯರಾದ ಡಾ. ಕಿರಣ್ ಹೊನ್ನಣ್ಣವರ್ (45) ಅವರನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಪತ್ನಿ ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದು ಕೊಠಡಿಯಲ್ಲಿ ವೈದ್ಯ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಮತ್ತೊಂದು ಕೊಠಡಿಯಲ್ಲಿ ಎಂಟು ವರ್ಷದ ಪುತ್ರ ನೇಹಿತ್ …

Read More »

ಜಿಮ್ಖಾನಾ ಕ್ಲಬ್ ನಲ್ಲಿ ಗುಂಡಿಕ್ಕಿ ವ್ಯಕ್ತಿಯೋರ್ವನ ಕೊಲೆಗೆ ಯತ್ನ

ಬೆಳಗಾವಿ: ನಗರದ ಜಿಮ್ಖಾನಾ ಕ್ಲಬ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸುರೇಶ್ ಜಾಲಗಾರ ಹತ್ಯೆ ಯತ್ನಕ್ಕೊಳಗಾದ ವ್ಯಕ್ತಿಯಾಗಿದ್ದು, ದುಷ್ಕರ್ಮಿಗಳು ಕ್ಲಬ್‌ಗೆ ನುಗ್ಗಿ ಗನ್‌ನಿಂದ ಹಲ್ಲೆ ನಡೆಸಿ ಗುಂಡು ಹಾರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ವೇಳೆ ಐವರು ದುಷ್ಕರ್ಮಿಗಳು ಕ್ಲಬ್‌ಗೆ ಆಗಮಿಸಿದ್ದು, ಮೂವರು ಒಳಗೆ ನುಗ್ಗಿ ಸುರೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗನ್‌ನಿಂದ ತಲೆಗೆ ಹೊಡೆದು ಬಳಿಕ ಗುಂಡು …

Read More »

ಕಂಡಕ್ಟರ್ ಬ್ಯಾಗ್ ನ್ನೇ ಎಗರಿಸಿದ ಮಹಿಳೆ: ದಮ್ಮಯ್ಯ ಎಂದರೂ ಬಿಡದ ಬಿಎಂಟಿಸಿ ಚಾಲಕ

ಬೆಂಗಳೂರು: ರಾಜಧಾನಿಯ ಬಿಎಂಟಿಸಿ ಬಸ್‌ಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಕಂಡಕ್ಟರ್ ಅವರ ಹಣ ಹಾಗೂ ಟಿಕೆಟ್‌ಗಳಿದ್ದ ಬ್ಯಾಗ್‌ ಕದಿಯಲು ಯತ್ನಿಸಿದ ಮಹಿಳೆಯೊಬ್ಬಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ಕಂಡಕ್ಟರ್ ಅವರ ಗಮನ ಬೇರೆಡೆ ಇದ್ದಾಗ ಮಹಿಳೆ ಬ್ಯಾಗ್‌ ಎಗರಿಸಲು ಯತ್ನಿಸಿದ್ದಾಳೆ. ಕಳ್ಳತನ ನಡೆಸಿ ಬಸ್‌ನಿಂದ ಪರಾರಿಯಾಗಲು ಮುಂದಾದ ವೇಳೆ ಕಂಡಕ್ಟರ್ ಹಾಗೂ ಪ್ರಯಾಣಿಕರ ಜಾಗರೂಕತೆಯಿಂದ ಮಹಿಳೆ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾಳೆ. ಬಳಿಕ ಸಾರ್ವಜನಿಕರು ಆಕೆಯನ್ನು ವಶಕ್ಕೆ ಪಡೆದು …

Read More »

ಬೆಳಗಾವಿಯಲ್ಲಿ ಮತ್ತೊಂದು ಮಹಾವಂಚನೆ.. 160 ಕೋಟಿ ರೂ. ದೋಚಿ ದುಬೈಗೆ ಪರಾರಿಯಾದ ‘ಅಪೇಕ್ಷಾ’ ಕಂಪನಿ ವಂಚಕರು!

ಬೆಳಗಾವಿಯಲ್ಲಿ ಭಾರೀ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ‘ಅಪೇಕ್ಷಾ’ ಕಂಪನಿ 3,500ಕ್ಕೂ ಹೆಚ್ಚು ಹೂಡಿಕೆದಾರರಿಗೆ ಬರೋಬ್ಬರಿ 160 ಕೋಟಿ ರೂಪಾಯಿ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ಹಾಗೂ ಅಲ್ಪಾವಧಿಯಲ್ಲಿ ಹಣ ದ್ವಿಗುಣ ಮಾಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಲಾಗಿದೆ. ಆರಂಭದಲ್ಲಿ ನಂಬಿಕೆ ಗಳಿಸಿದ್ದ ಕಂಪನಿ, ಬಳಿಕ ಕಚೇರಿಯನ್ನು ರಾತ್ರೋರಾತ್ರಿ ಮುಚ್ಚಿ ಪರಾರಿಯಾಗಿದೆ. ಕಂಪನಿಯ ಮುಖ್ಯಸ್ಥರು ಕೋಟ್ಯಂತರ ರೂಪಾಯಿ ಹಣದೊಂದಿಗೆ ದುಬೈಗೆ ಪರಾರಿಯಾಗಿದ್ದಾರೆ …

Read More »

ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರಿಂದ ಫೈರಿಂಗ್: ಜೈಲಿಂದ ಪರಾರಿಯಾಗಿದ್ದ ಕೈದಿಗೆ ಗುಂಡೇಟು

ಕಲಬುರಗಿ: ಜೈಲಿನಿಂದ ಪರಾರಿಯಾಗಿದ್ದ ಕೈದಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಘಟನೆ ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಕೈದಿ ಸಂತೋಷ್ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೈಲಿನಿಂದ ಪರಾರಿಯಾಗಿದ್ದ ಮೂವರು ಕೈದಿಗಳಿಗಾಗಿ ಪೊಲೀಸರು ನಾಕಾಬಂಧಿ ನಡೆಸುತ್ತಿದ್ದ ವೇಳೆ, ಇಂಡಸ್ಟ್ರಿಯಲ್ ಎಸ್ಟೇಟ್ ಪ್ರದೇಶದಲ್ಲಿ ಸಂತೋಷ್ ಅಡಗಿರುವ ಮಾಹಿತಿ ಲಭ್ಯವಾಗಿತ್ತು. ಶರಣಾಗುವಂತೆ ಸೂಚಿಸಿದರೂ ಆತ ಪೊಲೀಸರ …

Read More »

ಬೆಂಗಳೂರಲ್ಲಿ ಜಿಮ್ ಟ್ರೇನರ್ ನ ಅಪಹರಿಸಿ 5 ಲಕ್ಷ ಹಣಕ್ಕೆ ಬೇಡಿಕೆ : ರೌಡಿಶೀಟರ್ ಸೇರಿ ಐವರು ಅರೆಸ್ಟ್!

ಬೆಂಗಳೂರು: ಜಿಮ್ ಟ್ರೈನರ್‌ನನ್ನು ಸಿಸಿಬಿ ಪೊಲೀಸ್‌ ಅಧಿಕಾರಿಗಳೆಂದು ನಂಬಿಸಿ ಅಪಹರಿಸಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ರೌಡಿಶೀಟರ್ ತ್ರಿವೇಣಿ ಅಲಿಯಾಸ್ ತಿರುಮಲ ರಂಜಿತ್ ರಾವ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆರೋಪಿಗಳು ಜಿಮ್ ಟ್ರೈನರ್ ಮಿಥುಲ್‌ಗೆ “500 ಕೆಜಿ ಗಾಂಜಾ ತರಿಸಿದ್ದೀಯ” ಎಂದು ಬೆದರಿಸಿ, ಎನ್‌ಡಿಪಿಎಸ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೇಳಿ ಕಾರಿನಲ್ಲಿ ನಾಲ್ಕು ಗಂಟೆಗಳ ಕಾಲ ಬೆಂಗಳೂರಿನ ವಿವಿಧೆಡೆ ಸುತ್ತಾಡಿಸಿದ್ದರು. ಜೆಪಿ ನಗರ ಪೊಲೀಸ್ ಠಾಣೆ …

Read More »

ಸ್ನಾನದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್: ಕಾಲೇಜು ವಿದ್ಯಾರ್ಥಿಯನ್ನು ಹತ್ಯೆಗೈದ ದಂಪತಿ

ಗಾಂಧಿನಗರ: ಸ್ನಾನ ಮಾಡುತ್ತಿದ್ದ ವೇಳೆ ಗುಪ್ತವಾಗಿ ಚಿತ್ರೀಕರಿಸಿದ ವಿಡಿಯೋವನ್ನು ತೋರಿಸಿ ವಿವಾಹಿತ ಮಹಿಳೆಯನ್ನು ಬೆದರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ, 20 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ದಂಪತಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನಲ್ಲಿ ನಡೆದಿದೆ. ಹಾರ್ದಿಕ್ ಎಂಬ ಯುವಕ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹಾರ್ದಿಕ್ ಮಹಿಳೆಯ ಸ್ನಾನದ …

Read More »

ಹುಬ್ಬಳ್ಳಿಯಲ್ಲಿ ಯುವಕ ಅಪಹರಿಸಿ ಅಮಾನವೀಯ ಹಲ್ಲೆ: ಬೆತ್ತಲೆಗೊಳಿಸಿ ಥಳಿಸಿದ ದುಷ್ಕರ್ಮಿಗಳು

ಹುಬ್ಬಳ್ಳಿ: ನಗರದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಕೆಲಸಕ್ಕೆ ತೆರಳುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಅಪಹರಿಸಿ, ಶೆಡ್‌ನಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಯುವಕನನ್ನು ತೌಫಿಕ್ ಎಂದು ಗುರುತಿಸಲಾಗಿದೆ. ಅಶೋಕನಗರ ಬ್ರಿಡ್ಜ್ ಸಮೀಪ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಆತನನ್ನು ಅಪಹರಿಸಿ, ಮಂಟೂರ ರಸ್ತೆಯ ಮೌಲಾಲಿ ದರ್ಗಾ ಬಳಿಯ ಶೆಡ್‌ಗೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಆರೋಪಿಗಳು ತೌಫಿಕ್‌ರನ್ನು ಬೆತ್ತಲೆಗೊಳಿಸಿ …

Read More »