Breaking News

BigTv News

ಬ್ಲ್ಯಾಕ್‌ಮೇಲ್: ಆರೋಪಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಉಡುಪಿ: ಉದ್ಯಮಿಗೆ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಬಂಧಿತಳಾಗಿರುವ ಪಡುಬಿದ್ರೆಯ ಜೀನತ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. 50 ಲಕ್ಷ ರೂ. ತುರ್ತು ಅಗತ್ಯವಿದೆ ಎಂದು ನಂಬಿಸಿ ಮೋಹಿನಿ ಶೆಟ್ಟಿಗಾರ್ ಅವರಿಂದ 148 ಗ್ರಾಂ ಚಿನ್ನ ಪಡೆದು ಅಡವಿಟ್ಟಿರುವ ಆರೋಪ ಕೇಳಿಬಂದಿದೆ. 2020ರಲ್ಲಿ ಪಡೆದ ಚಿನ್ನವನ್ನು ಸುಧೀಂದ್ರ ಫೈನಾನ್ಸ್‌ನಲ್ಲಿ ಅಡವಿಟ್ಟು 4.36 ಲಕ್ಷ ರೂ. ಸಾಲ ಪಡೆದಿದ್ದ ಜೀನತ್, ಆರಂಭದಲ್ಲಿ ಸಾಲದ ಕಂತುಗಳನ್ನು ಪಾವತಿಸಿದ್ದರೂ ಬಳಿಕ …

Read More »

ಸರ್ಕಾರಿ ಕಾಲೇಜು ಆಡಿಟ್‌ಗೆ ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಬೆಂಗಳೂರಿನ ಇಬ್ಬರು ಆಡಿಟರ್‌ಗಳು!

ಬೈಂದೂರು: ಸರ್ಕಾರಿ ಕಾಲೇಜಿನ ಆಡಿಟ್ ವರದಿ ಸುಗಮವಾಗಿ ಮಾಡಿಕೊಡುವುದಾಗಿ ಹೇಳಿ ₹1 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಆಡಿಟರ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಬೆಂಗಳೂರಿನ ಆಡಿಟರ್‌ಗಳಾದ ರಘುನಂದನ್ ಮತ್ತು ಶ್ರೀಧರ್, ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಂದ ₹30 ಸಾವಿರ ಮುಂಗಡ ಪಡೆದು, ಉಳಿದ ₹70 ಸಾವಿರವನ್ನು ಬೈಂದೂರು ಕಾಲೇಜಿಗೆ ತಂದು ನೀಡುವಂತೆ ಸೂಚಿಸಿದ್ದರು. ಇದರಿಂದ ಪ್ರಾಂಶುಪಾಲರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ …

Read More »

ಹಿಂದೂ ಯುವತಿಗೆ ಚಾಕು ತೋರಿಸಿ ಬೆದರಿಕೆ… ಆರು ಮುಸ್ಲಿಂ ಯುವಕರು ಪೊಲೀಸ್ ವಶಕ್ಕೆ

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ಚೂರಿ ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುರುಷರಕಟ್ಟೆಯಲ್ಲಿ ನಡೆದಿದೆ. ಯುವತಿ ತನ್ನ ಸ್ಕೂಟಿಯನ್ನು ಪಾರ್ಕ್ ಮಾಡುತ್ತಿದ್ದ ವೇಳೆ ಕೆಲವರು ಚೂರಿ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಭಯಗೊಂಡ ಯುವತಿ ಆಟೋರಿಕ್ಷಾದಲ್ಲಿ ಪುತ್ತೂರಿಗೆ ತೆರಳಿದರೂ, ಥಾರ್ ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದು ಮತ್ತೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ …

Read More »

ಕಿಡಿಗೇಡಿಗಳಿಂದ ಕಾರು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಮದ್ದೂರು: ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಲಕನ ಮೇಲೆ ಕಿಡಿಗೇಡಿಗಳ ಗುಂಪು ಭೀಕರ ಹಲ್ಲೆ ನಡೆಸಿದ ಘಟನೆ ಮದ್ದೂರಿನಲ್ಲಿ ನಡೆದಿದೆ. ಗಾಯಗೊಂಡ ಬೆಂಗಳೂರಿನ ಅತ್ತಿಗುಪ್ಪೆ ನಿವಾಸಿ ಸಾಗರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗರ್ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನ ಜಾಕ್ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಪತ್ನಿ, ತಾಯಿ ಹಾಗೂ 5 ವರ್ಷದ ಮಗುವಿನ ಎದುರೇ ಹಲ್ಲೆ ನಡೆದಿದ್ದು, ಮಗುವಿನ ಕೈಗೂ ಗಾಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಹೆಣ್ಣುಮಕ್ಕಳನ್ನು ಚುಡಾಯಿಸಿದ ಆರೋಪ: ಬೀದರ್‌ನಲ್ಲಿ ಯುವಕನ ಭೀಕರ ಕೊಲೆ

ಬೀದರ್: ಹಳೆಯ ವೈಷಮ್ಯ ಹಾಗೂ ಯುವತಿಯರನ್ನು ಚುಡಾಯಿಸಿದ ಆರೋಪದ ಹಿನ್ನೆಲೆಯಲ್ಲಿ 26 ವರ್ಷದ ಯುವಕನನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೀದರ್ ತಾಲೂಕಿನ ಜಮಿಸ್ತಾನಪುರ ಗ್ರಾಮದಲ್ಲಿ ನಡೆದಿದೆ. ಕಿರಣ್‌ಕುಮಾರ್ ಮೃತ ಯುವಕ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದ ಕಿರಣ್‌ಕುಮಾರ್‌ನನ್ನು ಹೊಂಚು ಹಾಕಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಿರಣ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಕಳೆದ ಮೂರು ದಿನಗಳ …

Read More »

ಕಸದಬುಟ್ಟಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಅಮ್ಮ: ಕುರಿಗಾಹಿಯಿಂದ ಕಂದನ ರಕ್ಷಣೆ

ಬೆಳಗಾವಿ: ನವಜಾತ ಗಂಡು ಶಿಶುವನ್ನು ಕಸದ ತೊಟ್ಟಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದ ಸಮೀಪದ ಬಸವಣಕಟ್ಟೆ ಸೇತುವೆ ಕೆಳಗೆ ನಡೆದಿದೆ. ಮಗು ಅಳುವ ಶಬ್ದ ಕೇಳಿದ ಕುರಿಗಾಹಿಯೊಬ್ಬರು ಕಂದನನ್ನು ರಕ್ಷಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಗುವನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು ವೈದ್ಯರ ಆರೈಕೆಯಲ್ಲಿದೆ ಎಂದು …

Read More »

ಶಿಕಾರಿಪುರದಲ್ಲಿ 1 ವರ್ಷದ ಹಿಂದೆ ಪಿಜಿಯಲ್ಲಿ ಕಾಣೆಯಾಗಿದ್ದ ಅಪ್ರಾಪ್ತೆಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ: ಮಾಲಕಿ ಸೇರಿ ನಾಲ್ವರ ಬಂಧನ!

ಶಿವಮೊಗ್ಗ: ಶಿಕಾರಿಪುರದ ಪಿಜಿಯಿಂದ ಕಳೆದ ವರ್ಷ ನಾಪತ್ತೆಯಾಗಿದ್ದ 16 ವರ್ಷದ ಸಂಗೀತಾ ಮೃತಪಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪಿಜಿಯಲ್ಲೇ ಮೃತಪಟ್ಟಿದ್ದ ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಅರಣ್ಯದಲ್ಲಿ ಎಸೆದು ಪ್ರಕರಣ ಮುಚ್ಚಿಹಾಕಿದ ಆರೋಪದಲ್ಲಿ ಪಿಜಿ ಮಾಲಕಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಗೀತಾ 2025ರ ಜೂನ್ 18ರಂದು ನಾಪತ್ತೆಯಾಗಿದ್ದಳು. ಆರಂಭದಲ್ಲಿ ನಾಪತ್ತೆ ಪ್ರಕರಣವಾಗಿ ದಾಖಲಾಗಿದ್ದ ಕೇಸ್‌ ತಾಂತ್ರಿಕ ತನಿಖೆಯಲ್ಲಿ ಕೊನೆಯದಾಗಿ ಆಕೆ ರಂಜಿತಾ ಜೊತೆ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದ್ದು, ವಿಚಾರಣೆ ವೇಳೆ …

Read More »

ಮದುವೆಯಾದ ನಾಲ್ಕೇ ತಿಂಗಳಲ್ಲಿ ಕಿರಿಕ್ – ಹೆಲ್ಮೆಟ್ ನಿಂದ ಹೊಡೆದು ಪತ್ನಿಯ ಹತ್ಯೆ!

ಹುಬ್ಬಳ್ಳಿ: ತಾರಿಹಾಳ್‌ನಲ್ಲಿ ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ನಾಗರತ್ನಾ ಹಳೆಮನಿ (19) ಅವರನ್ನು ಪತಿ ಶಿವರಾಜ್ ಕೌಟುಂಬಿಕ ಕಲಹದ ವೇಳೆ ಹೆಲ್ಮೆಟ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ದಂಪತಿ ನಡುವೆ ಇತ್ತೀಚೆಗೆ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ ಜಗಳವಾಗುತ್ತಿತ್ತು. ಘಟನೆ ನಡೆದ ದಿನವೂ ಮಾತಿನ ಚಕಮಕಿ ತೀವ್ರಗೊಂಡಿದ್ದು, ಕೋಪಗೊಂಡ ಶಿವರಾಜ್ ಹೆಲ್ಮೆಟ್‌ನಿಂದ ಪತ್ನಿಯ ತಲೆಗೆ ಬಲವಾಗಿ ಹೊಡೆದ ಪರಿಣಾಮ ನಾಗರತ್ನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …

Read More »

ಮಂಗಳೂರಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ : ಮಸೀದಿಗೆ ನುಗ್ಗಿ ಧರ್ಮ ಗುರುವಿಗೆ ಹಿಗ್ಗಾಮುಗ್ಗ ಥಳಿತ

ಮಂಗಳೂರು : ಮಸೀದಿಗೆ ನುಗ್ಗಿ ಧರ್ಮ ಗುರುವಿಗೆ ಹಿಗ್ಗಾಮುಗ್ಗವಾಗಿ ಥಳಿಸಿರುವ ಘಟನೆ ಮಂಗಳೂರಿನ ಸೂರತ್ಕಲ್ ನಲ್ಲಿ ನಡೆದಿದೆ. ಅಲ್ಲದೆ ಧರ್ಮಗುರು ಮೇಲೆ ಹಲ್ಲೆಗೈದು ಕೊಲೆ ಬೆದರಿಕೆ ಹಾಕಲಾಗಿದೆ. ಮದರಸ ಕಲಿಸುವ ವೇಳೆ ವಿದ್ಯಾರ್ಥಿಗೆ ಧರ್ಮಗುರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೃಷ್ಣಾಪುರ ಭಾಗದ ದ್ವೈಬ ಮಸೀದಿಯ ಧರ್ಮ ಗುರುವಿನ ಮೇಲೆ ಹಲ್ಲೆ ನಡೆದಿದೆ ಮಗುವಿನ ತಂದೆ ತಾಯಿ ಮತ್ತು ಕುಟುಂಬದವರಿಂದ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ನಡೆಸಿದ …

Read More »

ರೌಡಿಶೀಟರ್‌ ರಾಜು ಕೊಲೆ: ಮಹಿಳೆ ಸೇರಿ ಇಬ್ಬರ ಸೆರೆ

ಬೆಂಗಳೂರು: ರೌಡಿಶೀಟರ್ ರಾಜು ಕೊಲೆ ಪ್ರಕರಣದಲ್ಲಿ ಮಹಿಳೆಯೊಬ್ಬಳ ಪಾತ್ರ ಬೆಳಕಿಗೆ ಬಂದಿದ್ದು, ಜೆ.ಪಿ.ನಗರ ಪೊಲೀಸರು ಅಕ್ಷತಾ ಹಾಗೂ ಆಕೆಯ ಸ್ನೇಹಿತ ಮೋಹನ್ ಅವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪೊಲೀಸರ ಪ್ರಕಾರ, ಅಕ್ಷತಾ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಬ್ಯಾಟ್ ಸಂತು ಸ್ನೇಹಿತೆಯಾಗಿದ್ದು, ಜೂನ್ 27ರಂದು ರಾಜುವಿನ ಚಲನವಲನಗಳ ಮಾಹಿತಿ ನೀಡಿ, ಹಂತಕರಿಗೆ ದಾರಿ ತೋರಿಸಿದ್ದಾಳೆ. ರಾಜು ಹತ್ಯೆ ವೇಳೆ ಸಮೀಪದಲ್ಲೇ ನಿಂತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ …

Read More »