ಬೆಂಗಳೂರು: ರೌಡಿಶೀಟರ್ ರಾಜು ಕೊಲೆ ಪ್ರಕರಣದಲ್ಲಿ ಮಹಿಳೆಯೊಬ್ಬಳ ಪಾತ್ರ ಬೆಳಕಿಗೆ ಬಂದಿದ್ದು, ಜೆ.ಪಿ.ನಗರ ಪೊಲೀಸರು ಅಕ್ಷತಾ ಹಾಗೂ ಆಕೆಯ ಸ್ನೇಹಿತ ಮೋಹನ್ ಅವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪೊಲೀಸರ ಪ್ರಕಾರ, ಅಕ್ಷತಾ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಬ್ಯಾಟ್ ಸಂತು ಸ್ನೇಹಿತೆಯಾಗಿದ್ದು, ಜೂನ್ 27ರಂದು ರಾಜುವಿನ ಚಲನವಲನಗಳ ಮಾಹಿತಿ ನೀಡಿ, ಹಂತಕರಿಗೆ ದಾರಿ ತೋರಿಸಿದ್ದಾಳೆ. ರಾಜು ಹತ್ಯೆ ವೇಳೆ ಸಮೀಪದಲ್ಲೇ ನಿಂತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನಾಧರಿಸಿ ಬಂಧಿಸಲಾಗಿದೆ. ಈ ಹಿಂದೆ ಬ್ಯಾಟ್ ಸಂತು ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಸ್ಥಳ ಮಹಜರಿನ ವೇಳೆ ಪರಾರಿಯಾಗಲು ಯತ್ನಿಸಿದ ಸಂತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನೆಲೆ, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

