ಶಿವಮೊಗ್ಗ: ಶಿಕಾರಿಪುರದ ಪಿಜಿಯಿಂದ ಕಳೆದ ವರ್ಷ ನಾಪತ್ತೆಯಾಗಿದ್ದ 16 ವರ್ಷದ ಸಂಗೀತಾ ಮೃತಪಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪಿಜಿಯಲ್ಲೇ ಮೃತಪಟ್ಟಿದ್ದ ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಅರಣ್ಯದಲ್ಲಿ ಎಸೆದು ಪ್ರಕರಣ ಮುಚ್ಚಿಹಾಕಿದ ಆರೋಪದಲ್ಲಿ ಪಿಜಿ ಮಾಲಕಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಗೀತಾ 2025ರ ಜೂನ್ 18ರಂದು ನಾಪತ್ತೆಯಾಗಿದ್ದಳು. ಆರಂಭದಲ್ಲಿ ನಾಪತ್ತೆ ಪ್ರಕರಣವಾಗಿ ದಾಖಲಾಗಿದ್ದ ಕೇಸ್ ತಾಂತ್ರಿಕ ತನಿಖೆಯಲ್ಲಿ ಕೊನೆಯದಾಗಿ ಆಕೆ ರಂಜಿತಾ ಜೊತೆ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದ್ದು, ವಿಚಾರಣೆ ವೇಳೆ ಪ್ರಕರಣದ ಸತ್ಯಾಂಶ ಬಯಲಾಗಿದೆ. ಪ್ರಕರಣ ಸಂಬಂಧ ಅಸ್ಥಿಪಂಜರ ಹಾಗೂ ಇತರೆ ಅವಶೇಷಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವೈಜ್ಞಾನಿಕ ಸಾಕ್ಷ್ಯಗಳ ಪರಿಶೀಲನೆ ಮುಂದುವರಿದಿದ್ದು, ಹೊಸ ಮಾಹಿತಿ ದೊರೆತರೆ ಹೆಚ್ಚುವರಿ ಆರೋಪಗಳನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

