ಬೆಳಗಾವಿ: ಗೋಕಾಕ್ನಲ್ಲಿ ಗಾಂಜಾ, ಹೆರಾಯಿನ್ ಮಾರುತ್ತಿದ್ದ ನಾಲ್ವರನ್ನು ಸೆರೆಹಿಡಿಯಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮೂವರು ಗಾಂಜಾ, ಹೆರಾಯಿನ್ ಮಾರಲು ಬಂದಿದ್ದರು. ಗಾಂಜಾ, ಹೆರಾಯಿನ್ ಖರೀದಿಗೆ ಬಂದಿದ್ದ ಓರ್ವನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 1 ಕಾರು, ಒಂದು ದ್ವಿಚಕ್ರ ವಾಹನ, 5 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
Read More »ವಿಗ್ರಹ ಕದ್ದ ಕಳ್ಳರು: ಸ್ಥಳಕ್ಕೆ ಪೋಲಿಸರು ಭೇಟಿ
ಬೆಳಗಾವಿ: ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹವನ್ನು ಕಳ್ಳರು ಕದ್ದಿರುವ ಘಟನೆ. ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ. ಕೊಕಟನೂರ ಗ್ರಾಮದ ಬೀರೇಶ್ವರ ದೇವಸ್ಥಾನದ ದೇವರ ವಿಗ್ರಹ ಕದ್ದು ಪರಾರಿಯಾಗಿದ್ದು, ತಡರಾತ್ರಿ ನಡೆದ ಈ ಘಟನೆ ಬೆಳಿಗ್ಗೆ ಪೂಜಾರಿ ಪೂಜೆಗೆ ಬಂದಾಗ ಬೆಳಕಿಗೆ ಬಂದಿದೆ. ವಾಮಾಚಾರಿಗಳು, ನಿಧಿಗಳ್ಳರು ದೇವರ ಮೂರ್ತಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Read More »ಹೊರಟ್ಟಿಗೆ ಟಿಕೆಟ್ ಫೈನಲ್ ಶಾಸಕ ಅರವಿಂದ ಬೆಲ್ಲದ
ಧಾರವಾಡ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ವಿಚಾರವಾಗಿ ನಮ್ಮ ಪಾರ್ಟಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆಟಿಕೆಟ್ ಹೊರಟ್ಟಿ ಅವರಿಗೆ ಫೈನಲ್ ಆಗುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ . ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ಫೈನಲ್ ಆಗುತ್ತದೆ . ಮೋಹನ್ ಲಿಂಬಿಕಾಯಿ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ .ಬಿಜೆಪಿ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ . ಆದರೆ …
Read More »ಕಲಘಟಗಿಯಲ್ಲಿ ಮನೆಗಳಿಗೆ ಹಾನಿ : ಅಧಿಕಾರಿಗಳು ಭೇಟಿ
ಕಲಘಟಗಿ: ಪಟ್ಟಣದ ಸುರಿದ ಭಾರಿ ಮಳೆಯಿಂದಾಗಿ ಈಗ ಹಲವಾರು ಮನೆಗಳು ಕುಸಿದು ಬಿದ್ದಿರುವ ಘಟನೆ ಪಟ್ಟಣದಲ್ಲಿಂದಿ ನಡೆದಿದೆ . ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ಜನಜೀವನ ಅಸ್ವಸ್ಥತಗೊಂಡಿದೆ . ಮೂವತ್ತಕ್ಕೂ ಹೆಚ್ಚು ಮನೆಗಳು ಕುಸಿತ ಕಂಡಿದ್ದು ಈಗ ಕುಟುಂಬಸ್ಥರು ಅಂಗನವಾಡಿ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ . ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದ ಕಾರಣ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ .
Read More »ಮನೆ ಕುಸಿತ : ಶಾಸಕರು ಭೇಟಿ
ನವಲಗುಂದ: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿದ ಭಾರೀ ಮಳೆಗೆ ಹಾನಿಗೊಳಗಾದ ನೂರಾನಿ ಪ್ಲಾಟ್ ಬಳಿಯ ಗುರುನಾಥ ತಡಸಿ ಅವರ ಮನೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರೊಂದಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಬೇಗ ಇವರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದರು .
Read More »ವೈದ್ಯಾಧಿಕಾರಿಗಳು ಸಮಯ ಅಭಾವದಿಂದ ಹಸು ಸಾವು
ಕಲಘಟಗಿ: ಪಟ್ಟಣದ ಪಶು ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಆಕಳೊಂದು ಮೃತಪಟ್ಟಿರುವ ಘಟನೆ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ . ದೇವರ ಹೆಸರಿನಲ್ಲಿ ಬಿಟ್ಟ ಆಕಳೊಂದು ಹಸು ಹಾಕುವ ಸಂದರ್ಭದಲ್ಲಿ ತೀವ್ರ ನೋವಿನಂದ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪಶುವೈದ್ಯರಿಗೆ ಕರೆ ಮಾಡಿದ್ದಾರೆ . ಆದರೆ ವೈದ್ಯರು ಸೂಕ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಆಕಳು ಮೃತಪಟ್ಟಿದೆ . ಇನ್ನು ವೈದ್ಯರ ನಿರ್ಲಕ್ಷದಿಂದಲೇ ಆಕಳು ಮೃತಪಟ್ಟಿದೆ ಎಂದು …
Read More »ಭವಿಷ್ಯದಲ್ಲಿ ತನ್ನ ನೆಲೆ ಕಳೆದುಕೊಂಡು ಕಾಂಗ್ರೆಸ್ ಪಶ್ಚಾತ್ತಾಪ ಪಡಬೇಕಿದೆ
ಉಡುಪಿ: ಪೂರ್ವ ನಿರ್ಧಾರ ಮಾಡದೆ ಬಿಜೆಪಿಯನ್ನು ಸೇರಿಲ್ಲ. ಯೋಚನೆ ಮಾಡಿ ತೆಗೆದುಕೊಂಡ ನಿರ್ಧಾರವಾಗಿದ್ದು, ಪಶ್ಚಾತ್ತಾಪ ಪಡುವ ದಿನ ಬರುವುದಿಲ್ಲ. ಭವಿಷ್ಯದಲ್ಲಿ ತನ್ನ ನೆಲೆ ಕಳೆದುಕೊಂಡು ಕಾಂಗ್ರೆಸ್ ಪಶ್ಚಾತ್ತಾಪ ಪಡಬೇಕಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದು ಅರಿವಾಗಲಿದೆ. 2020-23ರ ಚುನಾವಣೆಯಲ್ಲಿ ಅಧಿಕಾರ ಸಿಗುತ್ತದೆ ಎಂಬ …
Read More »ದಿನ ಬೆಳಗಾದರೆ ಸಿದ್ದರಾಮಯ್ಯನ ಮನೆ ಬಾಗಿಲಲ್ಲಿ ಕುಳಿತುಕೊಳ್ಳಬೇಕಾ? ನಮಗೂ ಜವಾಬ್ದಾರಿಯಿದೆ.
ಚಿತ್ರದುರ್ಗ: ದಿನ ಬೆಳಗಾದರೆ ಸಿದ್ದರಾಮಯ್ಯನ ಮನೆ ಬಾಗಿಲಲ್ಲಿ ಕುಳಿತುಕೊಳ್ಳಬೇಕಾ? ನಮಗೂ ಜವಾಬ್ದಾರಿಯಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬರೇ ಭಾರೀ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರಾ, ಅವರು ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ದಾವಣಗೆರೆಯಲ್ಲಿ ಒಂದೂವರೆ ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅಲ್ಲಿಗೆ ಪರಿಶೀಲನೆಗಾಗಿ ಹೋಗುತ್ತಿದ್ದೇವೆ. ಎಲ್ಲ ಸಚಿವರು ಕೆಲಸ ಮಾಡುತ್ತಿದ್ದಾರೆ. ಕೋಮು ಸಂಘಟನೆಗಳನ್ನು ನಿಷೇಧಿಸಬೇಕು …
Read More »ಕರ್ನಾಟಕದವರು ಗುಜರಾತ್ ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ : ಇಬ್ರಾಹಿಂ
ರಾಯಚೂರು: ನಮ್ಮ ಊರಿನಲ್ಲಿ ಪಾನಿಪುರಿ ಮಾರುವರೇ ಗುಜರಾತ್ ನವರು. ಪಾನ್ ಮಸಾಲಾ ಮಾರುವವವರು ಗುಜರಾತ್ ನವರೇ. ಕರ್ನಾಟಕದವರು ಗುಜರಾತ್ ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಳೆದ 36 ವರ್ಷದಿಂದಿದೆ. ಜನರಿಗೆ ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು. ಹತ್ತಾರು ನೀರಾವರಿ ಯೋಜನೆಗಳನ್ನು ನಮ್ಮ ದೇವೇಗೌಡರು …
Read More »ಶಾಸಕ ಮುನಿರಾಜು ಹೇಳಿಕೆಗೆ ತಿರಿಗೇಟು ನೀಡಿದ ಮಾಜಿ ಸಿಎಂ
ಬೆಂಗಳೂರು: ‘ಉಪಚುನಾವಣೆಯೊಂದರಲ್ಲಿ ಸಾವಿರ ಜನ ಕಾರ್ಯಕರ್ತರು ಬಂದು ಐದೈದು, ಹತ್ತತ್ತು ಓಟ್ ಹಾಕಿದ್ದರು’ ಎಂದು ಬಿಜೆಪಿ ಮಾಜಿ ಎಸ್. ಶಾಸಕ ಮುನಿರಾಜು ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಏನಿದು ರಹಸ್ಯ? ಅಸಹ್ಯ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





