Breaking News

ಒಡಿಶಾ ಮೂಲದ ಯುವಕ ನಾಪತ್ತೆ

ಮಂಗಳೂರು: ಕೇರಳದ ಕುಂಬಳೆಯಿಂದ ಮಂಗಳೂರಿನ ಲಾಲ್ ಬಾಗ್ ಗೆ ಮೊಬೈಲ್ ಖರೀದಿಗಾಗಿ ಬಂದಿದ್ದ ಒಡಿಶಾ ಮೂಲದ ಚಂದನ್ ಮಾಝಿ (19) ನಾಪತ್ತೆಯಾಗಿದ್ದಾರೆ. ಅವರು ಕುಂಬಳೆ ಆನಂದಪುರಂ ಎಂಬಲ್ಲಿ ಫ್ಲೈವುಡ್ ಕೆಲಸ ಮಾಡಿಕೊಂಡಿದ್ದರು. 2025ರ ಆ.24ರಂದು ಮೊಬೈಲ್ ಖರೀದಿಗಾಗಿ ಮಂಗಳೂರಿಗೆ ಬಂದಿದ್ದರು. ಊರಿನಿಂದ ಆತನನ್ನು ಕರೆದುಕೊಂಡು ಬಂದಿದ್ದ ಭರತ್ ಚಂದ್ರ ಬೆಹರ್ ಅವರು ಮಂಗಳೂರಿಗೆ ಬಂದು ಎಲ್ಲ ಕಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ಆತನ ತಂದೆ ಬಿದ್ಯಾಧರ್ ಮಾಝಿಗೆ ಮಾಹಿತಿ ನೀಡಿದ್ದು, ಅವರು ಮನೆಗೆ ಬರಬಹುದು ಎಂದು ಕಾದಿದ್ದಾರೆ. ಆದರೆ ಇಲ್ಲಿವರೆಗೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5.2 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ಸದೃಢ ಶರೀರ ಹೊಂದಿ, ಹಿಂದಿ ಹಾಗೂ ಒರಿಯಾ ಭಾಷೆ ತಿಳಿದಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *