ಹರಿಯಾಣದ ಗುರುಗ್ರಾಮ್ನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಹಾಗೂ ಗೋರಕ್ಷಕರು ಸುಮಾರು 35 ಕಿಲೋಮೀಟರ್ಗಳವರೆಗೆ ಬೆನ್ನಟ್ಟಿದ ರೋಚಕ ಘಟನೆ ನಡೆದಿದೆ. ಪೊಲೀಸರನ್ನು ತಪ್ಪಿಸಿಕೊಳ್ಳಲು ಆರೋಪಿಗಳು ಚಲಿಸುತ್ತಿದ್ದ ವಾಹನದಿಂದಲೇ ಜೀವಂತ ಹಸುಗಳನ್ನು ರಸ್ತೆಗೆ ಎಸೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಹೈ-ಸ್ಪೀಡ್ ಚೇಸಿಂಗ್ ವೇಳೆ ಆರೋಪಿಗಳು ಬೆನ್ನಟ್ಟುತ್ತಿದ್ದವರ ಮೇಲೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ. ರಸ್ತೆಗೆ ಎಸೆಯಲ್ಪಟ್ಟ ಹಸುಗಳಿಗೆ ಗಂಭೀರ ಗಾಯಗಳಾಗಿದ್ದು, ವಾಹನವನ್ನು ತಡೆಯಲು ಪೊಲೀಸರು ನಿರಂತರ …
Read More »ಗಾಂಜಾ ಸೇವಿಸಿ ದುರ್ವರ್ತನೆ ತೋರಿದ ಮೂವರ ಸೆರೆ
ಚಿಂತಾಮಣಿಯಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮೂವರು ಯುವಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ವೆಂಕಟಗಿರಿಕೋಟೆ ಬಡಾವಣೆ ನಿವಾಸಿ ಸಲ್ಮಾನ್ ಪಾಷ (26), ಎನ್. ಜಿಶಾನ್ (23) ಹಾಗೂ ಶಾಂತಿನಗರ ನಿವಾಸಿ ಮೊಹಮದ್ ಅಲಿ ಅರ್ಬಾಜ್ (22) ಬಂಧಿತರು. ಬುಧವಾರ ನಗರದ ವಿವಿಧ ಪ್ರದೇಶಗಳಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಹಾಗೂ ದುರ್ವರ್ತನೆ ತೋರಿದ …
Read More »ಮುಳುಗಡೆ ಸಂತ್ರಸ್ತ ರೈತನಿಂದ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು!
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮುಳುಗಡೆ ಸಂತ್ರಸ್ತ ರೈತ ಬಸಪ್ಪ ಹಾಗೂ ಪ್ರಥಮ ದರ್ಜೆ ನೌಕರ (ಎಫ್ಡಿಎ) ಅಂಕದ ನಡುವೆ ಪರಿಹಾರ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ರೈತ ಹಲವು ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದರು ಎನ್ನಲಾಗಿದೆ. ಇಂದು ಕಚೇರಿಯಲ್ಲಿ ನಡೆದ ಮಾತಿನ ಚಕಮಕಿ ಜಗಳಕ್ಕೆ ತಿರುಗಿದ್ದು, ಇಬ್ಬರೂ ಪರಸ್ಪರ ತಳ್ಳಾಟ ನಡೆಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ರೈತ ಬಸಪ್ಪ ತಾನು …
Read More »ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿಯ ಮೃತದೇಹ ಪತ್ತೆ!
ಶಿವಮೊಗ್ಗ ಜಿಲ್ಲೆಯ ರವೀಂದ್ರ ನಗರದಲ್ಲಿ ಮನಕಲಕುವ ಘಟನೆ ನಡೆದಿದ್ದು, ಮನೆಯೊಂದರಲ್ಲಿ 57 ವರ್ಷದ ಪ್ರಭಾವತಿ ಹಾಗೂ ಅವರ ಸಾಕು ನಾಯಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹಲವು ದಿನಗಳ ಹಿಂದೆಯೇ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಆಕೆಯ ಸಾವಿನ ಬಳಿಕ ಮನೆಯೊಳಗೇ ಇದ್ದ ನಾಯಿ ಕೂಡ ಆಹಾರ ಮತ್ತು ಆರೈಕೆ ಸಿಗದೆ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ …
Read More »ಬಾಗಲಕೋಟೆಯಲ್ಲಿ ಬಸ್-ಲಾರಿ ಅಪಘಾತ: ಇಬ್ಬರ ಸಾವು
ಬಾಗಲಕೋಟೆ: ಜಿಲ್ಲೆಯ ಸುನಗ ಕ್ರಾಸ್ ಬಳಿ ಬಸ್, ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬಸ್ನ ಹಿಂಭಾಗದ ಅರ್ಧ ಭಾಗ ಕಿತ್ತುಹೋಗಿದೆ. ಬಸ್ನಲ್ಲಿದ್ದ ವಾಣಿ ದೇಸಾಯಿ (26), ಶಿವಕುಮಾರ್ ಕಡ್ಲಿವಾಡ (25) ಮೃತಪಟ್ಟಿದ್ದಾರೆ. ವಾಣಿ ದೇಸಾಯಿ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಗ್ರಾಮದ ನಿವಾಸಿ. ಶಿವಕುಮಾರ ಕಡ್ಲಿವಾಡ ಗದಗ ಜಿಲ್ಲೆಯ ನರಗುಂದ ಮೂಲದವರು. ಬಸ್ ವಿಜಯಪುರ ಕಡೆ ಹೊರಟಿದ್ದರೆ, ಲಾರಿ ವಿಜಯಪುರ ಕಡೆಯಿಂದ ಬಾಗಲಕೋಟೆ ಕಡೆ ಬರುತ್ತಿತ್ತು. ಬೀಳಗಿ …
Read More »ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಘೋರ ದುರಂತ : ಶಾಲಾ ಬಸ್ ಹರಿದು ಮಗಳ ಕಣ್ಣೆದುರೇ ತಾಯಿ ಸಾವು.!
ಬೆಂಗಳೂರು ವೈಟ್ಫೀಲ್ಡ್ ಪ್ರದೇಶದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಮಹಿಳೆಯೊಬ್ಬರು ಶಾಲಾ ಬಸ್ಗೆ ಡಿಕ್ಕಿಯಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಾಂತ ಎಂಬ ಮಹಿಳೆ ತಮ್ಮ ಮಗಳು ನೇಹಾ ಅವರನ್ನು ಕಾಲೇಜಿಗೆ ಬಿಡಲು ತೆರಳಿದ್ದಾಗ ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಹಿಳೆ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆವನ್ನು ಮಗಳು ಕಣ್ಣಾರೆ ನೋಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಸ್ಥಳದಲ್ಲಿದ್ದವರನ್ನೂ ಕಂಬನಿ ಮಿಡಿಯುವಂತೆ ಮಾಡಿದೆ. ಘಟನೆಗೆ ಶಾಲಾ …
Read More »ಸಸ್ಪೆಂಡ್ ಶಾಕ್.. ಜೈಲರ್ ಆತ್ಮಹತ್ಯೆ..! ಧಾರವಾಡ ಕೇಂದ್ರ ಕಾರಾಗೃಹದಲ್ಲಿ ದಾರುಣ ಅಂತ್ಯ..
ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ್ (33) ಅವರು ಕಾರಾಗೃಹ ವಸತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಘಟನೆ ಸಂಚಲನ ಮೂಡಿಸಿದೆ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿಯಾಗಿದ್ದ ಅವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಕಾರಾಗೃಹದಲ್ಲಿ ನಡೆದಿದ್ದ ಕಾನೂನುಬಾಹಿರ ಚಟುವಟಿಕೆ ಪ್ರಕರಣದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದರೂ, ಅಮಾನತು ಆದೇಶ ಮುಂದುವರಿದಿದ್ದರಿಂದ ಅವರು ಮಾನಸಿಕ …
Read More »ದೇವಸ್ಥಾನಗಳಿಗೆ ಕನ್ನ – ಖತರ್ನಾಕ್ ತಂದೆ-ಮಕ್ಕಳ ಅರೆಸ್ಟ್!
ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಗ್ಯಾಂಗ್ ಅನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ. ಮಹೇಶ್, ರಘು ಜಿ. ಮತ್ತು ಅಂಜನ್ ಕುಮಾರ್ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿ ಗಂಗಾರೆಡ್ಡಿ ತಲೆಮರೆಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಗ್ಯಾಂಗ್ನಲ್ಲಿ ತಂದೆ ಮತ್ತು ಮಕ್ಕಳೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಜಾತ್ರೆ ಹಾಗೂ ವಿಶೇಷ ಉತ್ಸವಗಳು ನಡೆಯುವ ಗ್ರಾಮಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ದೇವಸ್ಥಾನಗಳ ಬಾಗಿಲು ಮುರಿದು ಹುಂಡಿ ಹಣ ಹಾಗೂ ಬೆಳ್ಳಿ-ಬಂಗಾರದ …
Read More »ರಾಜ್ಯದಲ್ಲಿ ಆಘಾತಕಾರಿ ಘಟನೆ ; ಇಬ್ಬರು ಮಕ್ಕಳನ್ನ ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ.!
ಮೈಸೂರಿನಲ್ಲಿ ತಾಯಿಯೊಬ್ಬರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರಿಯಾಂಕಾ (26) ಅವರು ತಮ್ಮ ಮಕ್ಕಳಾದ ಧೃತಿ (3) ಮತ್ತು ದಿಶಾ (1.5) ಅವರನ್ನು ಹತ್ಯೆಗೈದು, ನಂತರ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಕಲಹ ಮತ್ತು ಇತರೆ ವೈಯಕ್ತಿಕ ಕಾರಣಗಳು ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು …
Read More »ಪಿ.ಐ.ಟಿ, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮಾದಕ ದ್ರವ್ಯ ಸಾಗಾಟ ಪ್ರಕರಣದ ಆರೋಪಿ ಬಂಧನ
ಉಡುಪಿ: ಮಾದಕ ದ್ರವ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಟ್ಟು ನಿವಾಸಿ ಜಗದೀಶ ಪೂಜಾರಿ ಎಂಬಾತನನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಲಾಗಿದೆ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದರು. ಬಂಧಿತ ಜಗದೀಶ್ ಪೂಜಾರಿ ವಿರುದ್ಧ ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಸೆನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರಕರಣ ಹಾಗೂ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





