ನಾಗಪುರದಲ್ಲಿ ಆನ್ಲೈನ್ ವೈವಾಹಿಕ ತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ₹14.8 ಲಕ್ಷ ಹಣ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 36 ವರ್ಷದ ರಾಘವೇಂದ್ರ ಕಿಶೋರ್ ಅವಸ್ಥಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ಮಹಿಳೆಯನ್ನು ನಂಬಿಸಿದ್ದ ಆರೋಪಿ, ಹೊಸ ಉದ್ಯಮ ಆರಂಭಿಸಲು ಹಣದ ಅವಶ್ಯಕತೆ ಇದೆ ಎಂದು ಹೇಳಿ ಹಲವು ಬಾರಿ ಹಣ ಪಡೆದಿದ್ದಾನೆ. ಬಳಿಕ ಆತನ …
Read More »ಬೆಳಗಾವಿ | ಸತೀಶ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೂರು ದಾಖಲು
‘ಕರುನಾಡ ಕುರುಬಗೌಡ್ರು’ ಹಾಗೂ ‘ಬಂಡಾಯ ಧ್ವನಿ’ ಎಂಬ ನಕಲಿ ಫೇಸ್ಬುಕ್ ಖಾತೆಗಳಲ್ಲಿ ಶಾಸಕ, ಮಾಜಿ ಸಚಿವ ಜಾರಕಿಹೊಳಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿರುವುದಕ್ಕೆ ಸಂಬಂಧಿಸಿ, ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಅವರು ಬೆಳಗಾವಿ ಸಿಇಎನ್ ಅಪರಾಧ ಠಾಣೆಯಲ್ಲಿ ಶನಿವಾರ ರಾತ್ರಿ ದೂರು ದಾಖಲಿಸಿದ್ದಾರೆ. ‘ಇವೆರಡೂ ಖಾತೆಗಳಲ್ಲಿ ‘ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ವಿರುದ್ದ 37 ಶಾಸಕರಿಂದ ಸತೀಶ ಜಾರಕಿಹೊಳಿ ಸಹಿ ಸಂಗ್ರಹಿಸಿದ್ದಾರೆ’ ಎಂದು ಆರೋಪಿಸಲಾಗಿದೆ. ಆದರೆ, ಸ್ವತಃ …
Read More »ಮೂಡುಬಿದಿರೆ| ಜಾನುವಾರು ಅಕ್ರಮ ಸಾಗಾಟ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಜಾನುವಾರುಗಳನ್ನು ಅಕ್ರಮವಾಗಿ ತುಂಬಿಸಿಕೊಂಡು ಬರುತ್ತಿದ್ದ ಪಿಕಪ್ ಟೆಂಪೋ ಸಹಿತ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ರವಿವಾರ ಬಂಧಿಸಿದ್ದಾರೆ. ಕಾರ್ಕಳದ ಜಾಕ್ವೆಲಿನ್ ಮತ್ತು ಜಾಕ್ಸನ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿದ್ದಾರೆ. ಅವರು ಪಿಕಪ್ ವಾಹನದಲ್ಲಿ ಅನಧಿಕೃತವಾಗಿ ಎರಡು ಕೋಣಗಳು ಮತ್ತು ಒಂದು ಕರುವನ್ನು ತುಂಬಿಸಿಕೊಂಡು ಬರುತ್ತಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಆಲಂಗಾರು ಅಂಡರ್ ವಾಸ್ ಬಳಿ ವಾಹನವನ್ನು ನಿಲ್ಲಿಸಿ ತನಿಖೆ ನಡೆಸಿದಾಗ …
Read More »2ನೇ ಮದುವೆಗೆ ವಿರೋಧಿಸಿದ್ದೇ ಮುಳುವಾಯ್ತಾ? ಮಹಿಳೆಯ ರಹಸ್ಯ ಕೊಲೆ: ದರೋಡೆ ನಾಟಕವೋ, ಸುಪಾರಿ ಕೃತ್ಯವೋ?
ಚಿಕ್ಕಬಳ್ಳಾಪುರ ಜಿಲ್ಲೆಯ ಕಂದವಾರ ಬಾಗಿಲು ಬಡಾವಣೆಯಲ್ಲಿ ವಿವಾಹಿತೆ ಪುಷ್ಪಲತಾ ಅವರ ನಿಗೂಢ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಹತ್ಯೆ ಮಾಡಿ, ಕೊರಳಿನಲ್ಲಿದ್ದ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾರೆ. ಘಟನೆಯ ವೇಳೆ ಮನೆಯಲ್ಲಿದ್ದ ನಾದಿನಿಗೆ ರಾಸಾಯನಿಕ ಸ್ಪ್ರೇ ಮಾಡಿ ಅಚೇತನಗೊಳಿಸಲು ಯತ್ನಿಸಿರುವ ಆರೋಪವೂ ಕೇಳಿಬಂದಿದೆ. ಮೃತೆಯ ಪೋಷಕರು ಇದೊಂದು ಸಾಮಾನ್ಯ ದರೋಡೆ ಪ್ರಕರಣವಲ್ಲ, ಗಂಡನ ಮನೆಯವರೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ಗಂಭೀರ …
Read More »ಬಳ್ಳಾರಿಯಲ್ಲಿ ರಸ್ತೆ ಬದಿಯೇ ಗೋವಿನ ರುಂಡಗಳು ಪತ್ತೆ
ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್ನ ತೆರೆದ ಚರಂಡಿಯಲ್ಲಿ ಗೋವುಗಳ ರುಂಡಗಳನ್ನು ಎಸೆದಿರುವ ಘಟನೆ ಶನಿವಾರ ನಡೆದಿದ್ದು, ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಕಪ್ಪಗಲ್ಲು ರಸ್ತೆಯ 9ನೇ ಕ್ರಾಸ್ (ಅಡ್ಡರಸ್ತೆ)ನ ತೆರೆದ ಕಾಲುವೆಯಲ್ಲಿ ಎಸೆಯಲಾಗಿದ್ದ ಎರಡು ಗೋವುಗಳ ರುಂಡಗಳನ್ನು ಕಂಡಿರುವ ಬಿಜೆಪಿ ಕಾರ್ಯಕರ್ತರೊಬ್ಬರು ಕೂಡಲೇ ಸ್ಥಳದಲ್ಲಿ ಜಮಾಯಿಸಿ, ಕಾಲುವೆಯಲ್ಲಿದ್ದ ಎರಡು ರುಂಡಗಳುಳ್ಳ ಚೀಲವನ್ನು …
Read More »ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಮಗುವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿ ಬರ್ಬರ ಹತ್ಯೆ; ಸಿಸಿಟಿವಿ ದೃಶ್ಯ ವೈರಲ್!
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದ ಭೀಕರ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಏಕಪಕ್ಷೀಯ ಪ್ರೇಮದ ವ್ಯಾಮೋಹದಿಂದ ವ್ಯಕ್ತಿಯೊಬ್ಬ ಸಣ್ಣ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಘಟನೆ ಮಕ್ಕಳ ಸುರಕ್ಷತೆ ಮತ್ತು ಅವರ ಮೇಲಿನ ದೌರ್ಜನ್ಯಗಳ ಬಗ್ಗೆ ಮತ್ತೆ ಗಂಭೀರ ಚರ್ಚೆಗೆ …
Read More »ಗಾಂಜಾ ಪ್ರಕರಣ: ಸಜೆ, ದಂಡ
ಕಾಸರಗೋಡು: ಗಾಂಜಾ ಪ್ರಕರಣದ ಆರೋಪಿ ಮಂಗಲ್ಪಾಡಿಯ ಮೊಹಮ್ಮದ್ ಬಾದಿಷಾ ಕೆ.ಎಸ್(42) ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಒಂದು ವರ್ಷ ಕಠಿನ ಸಜೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳು ಹೆಚ್ಚುವರಿಯಾಗಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2020 ಜುಲೈ 5 ರಂದು ಸಂಜೆ ನಿರ್ಮಾಣ ಹಂತದಲ್ಲಿರುವ ಮನೆಯಿಂದ 4.2 ಕಿಲೋ ಗಾಂಜಾವನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡು …
Read More »ಅನೈತಿಕ ಸಂಬಂಧ : ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಂದ ಪತಿ
ರಾಮನಗರ: ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡಿದ್ದ ಪತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ದಾಸರಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ನಾಗಮ (42) ಕೊಲೆಯಾದ ಗೃಹಿಣಿಯಾಗಿದ್ದು, ಪತಿ ಕಣಿಮಾದಯ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗೆ ನಾಗಮನ ನಡತೆ ಬಗ್ಗೆ ಅನುಮಾನಗೊಂಡಿದ್ದ ಕಣಿಮಾದಯ್ಯ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, …
Read More »ಮಟನ್ ಬದಲು ದನದ ಮಾಂಸ ಬಡಿಸಿದ ರೆಸ್ಟೋರೆಂಟ್ ಮಾಲೀಕರಿಬ್ಬರ ಬಂಧನ!
ಬೆಂಗಳೂರು: ಮಟನ್ ಊಟ ಆರ್ಡರ್ ಮಾಡಿದ ಗ್ರಾಹಕರಿಗೆ ದನದ ಮಾಂಸ ನೀಡಿದ ಆರೋಪದಡಿ ಆವಲಹಳ್ಳಿ ಠಾಣೆ ಪೊಲೀಸರು ಬೊಮ್ಮೇನಹಳ್ಳಿಯ ಕಾಯಲೋರಂ ರೆಸ್ಟೋರೆಂಟ್ನ ಮಾಲೀಕರಾದ ಜೀಜು ಹಾಗೂ ಶಿಬು ಅವರನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ರೆಸ್ಟೋರೆಂಟ್ಗೆ ಊಟಕ್ಕೆ ತೆರಳಿದ್ದ ಯುವಕರ ಗುಂಪಿಗೆ ನೀಡಿದ ಮಾಂಸದ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಮಟನ್ ಎಂದು ನೀಡಿದ್ದದ್ದು ದನದ …
Read More »ಬೆಂಗಳೂರಿಗೆ ಬಂದ್ರೆ ರೇಪ್ ಗ್ಯಾರೆಂಟಿ – ಯುವತಿಗೆ ಬೆದರಿಕೆ ಹಾಕಿದ ಆರ್ಸಿಬಿ ಫ್ಯಾನ್ ಅರೆಸ್ಟ್!
ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಬಲಿಸಿದ್ದ ಯುವತಿಯೊಬ್ಬಳ ಹಳೆಯ ವಿಡಿಯೊವನ್ನು ಹಂಚಿಕೊಂಡ ಆರ್ಸಿಬಿ ಅಭಿಮಾನಿಯೊಬ್ಬ ಅಸಭ್ಯವಾಗಿ ಮಾತನಾಡಿ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಹೈದರಾಬಾದ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಬಳಿಕ, ಯುವತಿಯ ಹಳೆಯ ವಿಡಿಯೊವನ್ನು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದರು. ಈ ವೇಳೆ ಸಂಜು ಎಂಬಾತ ವಿಡಿಯೊ ಹಂಚಿಕೊಂಡು ಅವಹೇಳನಕಾರಿ ಹಾಗೂ ಬೆದರಿಕೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





