Breaking News

ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮೂಲದ ಯುವತಿಗೆ ನಶೆ ಬರುವ ಔಷಧಿ ಕೊಟ್ಟು ಬಲಾತ್ಕಾರ…..

ಹುಬ್ಬಳ್ಳಿ: ಪೊಲೀಸರಿಂದ ಬಂಧಿತನಾಗಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿ, ಆತನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮೂಲದ ಯುವತಿಗೆ ನಶೆ ಬರುವ ಔಷಧಿ ಕೊಟ್ಟು ಬಲಾತ್ಕಾರ ಮಾಡಿದ ಆರೋಪ ಹೊರಿಸಲಾಗಿದೆ. ಮದುವೆ ಮಾಡಿಕೊಳ್ಳುವದಾಗಿ ಹೇಳಿ ಎರಡು ವರ್ಷದ ಅವಧಿಯಲ್ಲಿ ಮೇಲಿಂದ ಮೇಲೆ ಬಲಾತ್ಕಾರ ಮಾಡಿದ್ದಾನೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಎರಡು ವರ್ಷದ ಅವಧಿಯಲ್ಲಿ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಯ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ.

ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ತನ್ನ ತವರು ಮನೆ ಹುಬ್ಬಳ್ಳಿಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಇನ್ಮೇಲೆ ಯಾವದೇ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗ ಮಾಡಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬ ಸಮೇತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾನೆಂದು ಯುವತಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹುಬ್ಬಳ್ಳಿಯ 23 ವರ್ಷದ ಆಲಿಮ್ ಕೋರ್ಸ್ ಮುಗಿಸಿರುವ ಯುವತಿ, ಖಂಡವಾದಲ್ಲಿರುವ ಈತನ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಮೊದಲೇ ಹುಬ್ಬಳ್ಳಿಯಲ್ಲಿರುವ ಯುವತಿಯ ತಂದೆಯ ಜೊತೆ ಪರಿಚಯನಾಗಿದ್ದ ಗುಲಾಮ ಜಿಲಾನಿ ಅಜಹರಿ, ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಯುವತಿಯ ಖಂಡವಾ ಪಟ್ಟಣಕ್ಕೆ ಹೋಗಿದ್ದಳು. ಯುವತಿಯನ್ನು ಪುಸಲಾಯಿಸಿದ ಮುಫ್ತಿ ಗುಲಾಮ ಜಿಲಾನಿ ಅಜಹರಿ, ನನಗೆ ಮೊದಲ ಹೆಂಡತಿಯಿಂದ ವಿಚ್ಚೆದನವಾಗಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ನಿರಂತರವಾಗಿ ಬಲತ್ಕಾರ ಮಾಡುತ್ತಾ ಬಂದ ಎನ್ನಲಾಗಿದೆ.

ಸಧ್ಯ ಆಕೆಯ ದೂರನ್ನು ಧಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು, ಅತ್ಯಾಚಾರದ ಆರೋಪಿ ಮುಫ್ತಿ ಗುಲಾಮ ಜಿಲಾನಿ ಅಜಹರಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಖಂಡವಾದಿಂದ ಆತನನ್ನು ಹುಬ್ಬಳ್ಳಿಗೆ ಕರೆತರಲಾಗುತ್ತಿದೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *