Breaking News

BigTv News

ಶ್ರೀರಂಗಪಟ್ಟಣ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್‌ನಲ್ಲಿ ನಡೆದಿದೆ. ಮೈಸೂರು ಮೂಲದ ಸುಹೇಬ್‌(25) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಯುವಕನನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋದ ನಾಲ್ಕೈದು ಜನರ ತಂಡ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ : ಮೂವರು ಆರೋಪಿಗಳು ಅರೆಸ್ಟ್!

ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಬೌದ್ಧ ಸನ್ಯಾಸಿ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ. ಎಪ್ರಿಲ್ 29 ರಂದು ಧಾರವಾಡದ ಹಳಿಯಾಳ ರಸ್ತೆಯಲ್ಲಿ ಸನ್ಯಾಸಿಯ ಶವ ಪತ್ತೆಯಾಗಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಏಪ್ರಿಲ್ 29ರಂದು ಧಾರವಾಡದ ಹಳಿಯಾಳ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೌದ್ಧ ಸನ್ಯಾಸಿಯೊಬ್ಬರ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ …

Read More »

ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ

ಮಂಗಳೂರು: ಬಜಪೆ ಬಸ್ಸು ನಿಲ್ದಾಣದಲ್ಲಿ ಬಸ್ಸಿನ ಸಮಯದ ಚಾರವಾಗಿ ಖಾಸಗಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರ ನಡುವೆ ಪರಸ್ಪರ ಹೊಡೆದಾಟ ನಡೆದಿದ್ದು, ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ಸೊಂದರ ಚಾಲಕ ಶ್ರೀನಿವಾಸ (26) ಮತ್ತು ಇನ್ನೊಂದು ಬಸ್ಸಿನ ನಿರ್ವಾಹಕ ಸಂತೋಷ್ ಶೆಟ್ಟಿ (52) ಪರಸ್ಪರ ಹೊಡೆದಾಡಿಕೊಂಡವರು. ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಬಜಪೆ ಬಸ್ಸು ನಿಲ್ದಾಣದ ಬಳಿ ಬಂದಾಗ ಪೊಲೀಸರ ಮುಂದೆಯೇ ಈ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದು ಹೊಡೆದಾಡಿದ್ದಾರೆ. …

Read More »

‘ಇಂದು ಜೈಲ್, ನಾಳೆ ಬೇಲ್, ನಿನ್ನನ್ನು ಬಿಡಲ್ಲ’: ಅತ್ತೆಗೆ ಚಾಕುವಿನಿಂದ ಇರಿದ ಅಳಿಯನ ಸ್ಟೇಟಸ್

ಬೆಳಗಾವಿ: ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಅಳಿಯ ಚಾಕುವಿನಿಂದ ಇರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟೆಯಲ್ಲಿ ನಡೆದಿದೆ. ಮಹಾದೇವಿ(45) ಅವರಿಗೆ ಅಳಿಯ ಅರವಿಂದ ಗವಳಿ ಚಾಕುವಿನಿಂದ ಇರಿದಿದ್ದಾನೆ. ಎರಡು ತಿಂಗಳ ಹಿಂದೆ ಅರವಿಂದ ಗವಳಿ ಪತ್ನಿಗೆ ಹೆರಿಗೆಯಾಗಿತ್ತು. ಪದೇ ಪದೇ ವಿಡಿಯೋ ಕಾಲ್ ಮಾಡಿ ಮಗು ತೋರಿಸುವಂತೆ ಪಟ್ಟು ಹಿಡಿಯುತ್ತಿದ್ದ. ಕೆಲಸ ಬಿಟ್ಟು ಮೊಬೈಲ್ ಹಿಡಿದುಕೊಂಡು ಕೂರುವುದಕ್ಕೆ ಆಗುವುದಿಲ್ಲ ಎಂದು ಅತ್ತೆ ಹೇಳಿದ್ದರು. ಒಂದು …

Read More »

ಮನೆಯಲ್ಲಿ ಇಣುಕುತ್ತಿಯಾ ಅಂತ ಚಾಕು ಇರಿತ

ಹುಬ್ಬಳ್ಳಿ: ಮನೆಯೊಳಗೆ ಯಾಕೆ ಇಣುಕಿ ನೋಡುತ್ತಿಯಾ ಎಂದು ವ್ಯಕ್ತಿಯೊಬ್ಬರಿಗೆ ಚಾಕು ಇರಿದ ಘಟನೆ ಇಲ್ಲಿಯ ಎಸ್.ಎಂ. ಕೃಷ್ಣ ನಗರದಲ್ಲಿ ಸೋಮವಾರ ನಡೆದಿದೆ. ಸಿಖಂದರ್ ಶೇಖ್ ಎನ್ನುವಾತ ಸಲ್ಮಾನ್ ಕಲಾದಗಿಗೆ ಚಾಕು ಇರಿದಿದ್ದಾನೆ. ಎದೆ ಮತ್ತು ಎಡಗೈಗೆ ಗಾಯವಾಗಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಕು ಇರಿತಕ್ಕೀಡಾದ ಸಲ್ಮಾನ್ ಚಾಕು ಇರಿದಿದ್ದರ ಕುರಿತು ದೂರು ಕೊಟ್ಟಿದ್ದರೆ, ಸಲ್ಮಾನ್ ನನಗೆ ಕಲ್ಲಿನಿಂದ ಹೊಡೆದಿದ್ದಾನೆ ಎಂದು ಸಿಖಂದರ್ ಪ್ರತಿ ದೂರು ದಾಖಲಿಸಿದ್ದಾನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ …

Read More »

ಕ್ಷಣಾರ್ಧದಲ್ಲೇ ಸುಟ್ಟು ಕರಕಲಾದ ಬಸ್; ಉಳಿದ ಪ್ರಯಾಣಿಕರ ಜೀವ

ರಾಣೆಬೆನ್ನೂರು: ಟೈಯರ್ ಬ್ಲಾಸ್ಟ್ ಆಗಿ ಹತ್ತಿಕೊಂಡ ಬೆಂಕಿಯಿಂದ ಕೆಎಸ್‌ಆರ್ ಟಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ದೇವರಗುಡ್ಡ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದ್ದು, ಚಾಲಕನ ಜಾಗೃತೆಯಿಂದ ಅದೃಷ್ಟವಶಾಹತ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಗದಗಿಗೆ ಹೊರಟಿದ್ದ ಕೆಎಸ್‌ಆರ್ ಟಿಸಿಯ ಪಲ್ಲಕ್ಕಿ ಬಸ್ ಬೆಂಕಿಗಾಹುತಿಯಾಗಿರುವುದು. ರಾಣೆಬೆನ್ನೂರಿನಿಂದ ದೇವರಗುಡ್ಡ ಬಳಿ ಬಸ್ ಹೊರಟಿದ್ದ ಸಮಯದಲ್ಲಿ ಬ್ರೇಕ್ ಲೈನರ್ ಚಕ್ರಕ್ಕೆ ತಿಕ್ಕಿ ಬಿಸಿಯಾಗಿದೆ. ಇದರಿಂದ ವಾಸನೆ ಬಂದಿದ್ದರಿಂದ ಚಾಲಕ …

Read More »

ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆ

ಚಿತ್ರದುರ್ಗ: ನಗರದ ರಾಮದಾಸ್‌ ಕಾಂಪೌಂಡ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಶನಿವಾರ ರಾತ್ರಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದಿಂದ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಪ್ರಮೋದ್‌ (43) ಕೊಲೆಯಾದ ವ್ಯಕ್ತಿ. ಅವಿವಾಹಿತರಾಗಿದ್ದ ಅವರು ಮನೆಯಲ್ಲಿ ಒಬ್ಬರೇ ಇದ್ದರು. ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹತ್ಯೆಮಾಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್ …

Read More »

ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ : ಲಾಂಗು,ಮಚ್ಚುಗಳಿಂದ ಕೊಚ್ಚಿ ಯುವಕನ ಹತ್ಯೆ.!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿ ಭಾನುವಾರ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದ್ದು, ಸಕ್ಕರೆ ನಾಡಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಕಡಿದು ಹತ್ಯೆ ಮಾಡಿದೆ. ಮೈಸೂರು ಮೂಲದ ಮಹಮ್ಮದ್ ಸೋಹೇದ್ (27) ಕೊಲೆಯಾದ ದುರ್ದೈವಿ. ಬೈಕಿನಲ್ಲಿ ತೆರಳುತ್ತಿದ್ದ ಸೋಹೇದ್ನನ್ನು ನಾಲ್ಕೈದು ಮಂದಿ ಕಿರಾತಕರ ತಂಡ ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದೆ. ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂ ತಲುಪುತ್ತಿದ್ದಂತೆ ಅಡ್ಡಗಟ್ಟಿದ ಹಂತಕರು, ಲಾಂಗು ಮತ್ತು …

Read More »

ಮನೆ ಕೆಲಸದಾಕೆಯಿಂದ ಚಿನ್ನಾಭರಣ ಕಳವು ಆರೋಪ: ಪ್ರಕರಣ ದಾಖಲು

ಬ್ರಹ್ಮಾವರ: ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಮನೆ ಕೆಲಸದಾಕೆ ಕಳವು ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೂರಿನ ಆಶಾ ಎಸ್. ಪೂಜಾರಿ ಎಂಬವರು ಹೇರೂರು ಗ್ರಾಮದಲ್ಲಿ ರುವ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಆರೂರಿನ ಲತಾ ಎಂಬವರನ್ನು ನೇಮಿಸಿದ್ದು, ಎ.1ರಂದು ಮನೆಯ ಕಪಾಟಿನಲ್ಲಿಟ್ಟಿದ್ದ ತಂದೆಯ 25 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿರುವುದು ಕಂಡುಬಂದಿದೆ. …

Read More »

ಬೆಂಗಳೂರು | ಪೂಜೆ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಜ್ಯೋತಿಷಿ ವಿರುದ್ಧ ಪ್ರಕರಣ ದಾಖಲು

ಜ್ಯೋತಿಷಿಯೊಬ್ಬ ಪೂಜೆ ಹಾಗೂ ದೀಕ್ಷೆಯ ನೆಪದಲ್ಲಿ ಬ್ಯೂಟಿಷನ್ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಡಿ ಇಲ್ಲಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ. ಕುಂಬಳಗೋಡು ನಿವಾಸಿ ಮೋಹನಕುಮಾರ್(35) ಎಂಬ ಜ್ಯೋತಿಷಿ ವಿರುದ್ಧ ರಾಜಾಜಿನಗರದಲ್ಲಿ ಬ್ಯೂಟಿಷನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆ ಅತ್ಯಾಚಾರ ಆರೋಪ ಮಾಡಿದ್ದು, ಪೊಲೀಸರು ಆರೋಪಿಯ ಪತ್ತೆ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜ್ಯೋತಿಷಿಯಾದ ಮೋಹನ್ ತನ್ನ ತಂಗಿಯನ್ನು ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್‍ಗೆ ಸೇರಿಸಲು …

Read More »