Breaking News

BigTv News

ಕೃಷಿ ಅಧಿಕಾರಿಗಳ ಭರ್ಜರಿ ದಾಳಿ! ಚಿಕ್ಕಮಗಳೂರಿನಲ್ಲಿ ಅಕ್ರಮ ಯೂರಿಯಾ ದಾಸ್ತಾನು ಪತ್ತೆ!

ಚಿಕ್ಕಮಗಳೂರು: ಒಂದೆಡೆ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗಳಿಗೆ ಸಕಾಲಕ್ಕೆ ಯೂರಿಯಾ ಗೊಬ್ಬರ ಸಿಗದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಮಧ್ಯವರ್ತಿಗಳು ಕೃಷಿ ಬಳಕೆಯ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿರುವ ಕೋಳಿ ಫಾರಂ ಒಂದರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಇಂದು ಮಿಂಚಿನ ದಾಳಿ ನಡೆಸಿದ್ದಾರೆ. ಕೃಷಿ ಉದ್ದೇಶದ ಯೂರಿಯಾವನ್ನು ಅಕ್ರಮವಾಗಿ ಸಂಗ್ರಹಿಸಿ, ಅದನ್ನು ಕೈಗಾರಿಕಾ ಉದ್ದೇಶಗಳಿಗಾಗಿ ರೀ-ಪ್ಯಾಕಿಂಗ್ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. …

Read More »

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಹೊತ್ತಿ ಉರಿದ ಕಾರು: ಐವರು ಸಜೀವ ದಹನ

ರಾಜಸ್ಥಾನದ ಅಲ್ವಾರ್‌ ಜಿಲ್ಲೆಯ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಐದು ಮಂದಿ ಮೃತಪಟ್ಟಿದ್ದಾರೆ. ವೈಷ್ಣೋದೇವಿ ಯಾತ್ರೆಯಿಂದ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹತ್ತಿದ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬರೀ ಹದಿನೈದು ನಿಮಿಷಗಳಲ್ಲಿ ಐದು ಜೀವಗಳು ಹೊತ್ತಿ ಉರಿದಿವೆ. ಬೆಂಕಿ ನಂದಿಸಿದ ನಂತರ ಕಾರು ಸುಟ್ಟು ಕರಕಲಾಗಿದ್ದು, ಮೃತದೇಹಗಳು ಗುರುತು ಸಿಗದಂತೆ ಬದಲಾಗಿವೆ. ಮೂವರು ಮಹಿಳೆಯರು, ಒಬ್ಬ ಪುರುಷ ಹಾಗೂ …

Read More »

ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಹತ್ಯೆ ಪ್ರಕರಣ: ರವಿ ಸೇರಿ 6 ಆರೋಪಿಗಳಿಗೆ ಗಲ್ಲು ಶಿಕ್ಷೆ

ಗಂಗಾವತಿ: 2025ರಲ್ಲಿ ಕೊಪ್ಪಳ ರಸ್ತೆಯಲ್ಲಿ ನಡೆದ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಹತ್ಯೆ ಪ್ರಕರಣದಲ್ಲಿ ಆರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ನ್ಯಾಯಾಧೀಶ ಸದಾನಂದಪ್ಪ ನಾಯ್ಕ ಅವರು ಆರೋಪಿಗಳಾದ ರವಿ, ವಿಜಯ, ಧನರಾಜ್, ಭರತ್, ಸಲೀಂ ಹಾಗೂ ಗಂಗಾಧರ ಗೌಳಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. 2025ರಲ್ಲಿ ಗಂಗಾವತಿಯ ಕೊಪ್ಪಳ ರಸ್ತೆಯಲ್ಲಿ ಬಿಜೆಪಿ ಮುಖಂಡ ವೆಂಕಟೇಶ …

Read More »

ಸೀತಾಂಗೋಳಿ: ಕೊ*ಲೆ ಆರೋಪಿಯ ಬಂಧನ

ಕುಂಬಳೆ: ಸೀತಾಂಗೋಳಿಯಲ್ಲಿ ಹಾಡುಹಗಲೇ ಬಾಪಾಲಿಪೊನ ಕುಂಟಿಕಾನ ನಿವಾಸಿ ಸಫಾಹಿದ್‌ ಯಾನೆ ಶಫಾಯಿತ್‌ (35) ಅವರನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ನಾಯ್ಕಾಪು ಕೋಟೆಕಾರು ನಿವಾಸಿ ಶ್ರೀನಿವಾಸ (39) ಬಂಧಿತ ವ್ಯಕ್ತಿ. ಎ.28 ರಂದು ಮಧ್ಯಾಹ್ನ 2.30 ರ ವೇಳೆ ಸೀತಾಂಗೋಳಿಯ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಬದಿಯಲ್ಲಿ ಶಫಾಯತ್‌ ಅವರ ಮೃತದೇಹ ಪತ್ತೆಯಾಗಿತ್ತು. ಅದನ್ನು ಕಂಡ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ …

Read More »

ಮಟ್ಕಾ, ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ

ಲಿಂಗಸುಗೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಮಟ್ಕಾ ಹಾಗೂ ಇಸ್ಪೀಟು ಅಡ್ಡೆ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕಿನ ಈಚನಾಳ ಕ್ರಾಸ್ ಬಳಿ ಮಟ್ಕಾ ಸಂಖ್ಯೆ ಬರೆಯುತ್ತಿದ್ದ ಈಚನಾಳ ಗ್ರಾಮದ ಪೀರಸಾಬ ಇಮಾಮಸಾಬ ವಶಕ್ಕೆ ಪಡೆದುಕೊಂಡು ಆತನ ಬಳಿಯಿದ್ದ ₹ 750 ಜಪ್ತಿ ಮಾಡಲಾಗಿದೆ. ತಾಲ್ಲೂಕಿನ ಯಲಗಲದಿನ್ನಿ ಹಳ್ಳದ ಬಳಿ ಇಸ್ಟೀಟು ಜೂಜಾಟದ ಅಡ್ಡೆ ಮೇಲೆ ಪಿಐ ಹೊಸಕೇರಪ್ಪ ದಾಳಿ ನಡೆಸಿ ₹ 2,500 ಜಪ್ತಿ …

Read More »

ಯುವಕನ ಕೊಲೆ: ಆರೋಪಿ ಬಂಧನ

ಕಾಸರಗೋಡು: ಸೀತಾಂಗೋಳಿಯ ಮೇಲಿನ ಪೇಟೆಯ ಕಟ್ಟಡವೊಂದರಲ್ಲಿ ಬಾಪಾಲಿಪೊನ ಕುಂಟಿಕಾ ನಿವಾಸಿ ಶಫಾಯತ್ (35) ಎಂಬುವರನ್ನು ಕೊಲೆ ಮಾಡಿದ ಆರೋಪದಲ್ಲಿ ಕುಂಬಳೆ ಬಳಿಯ ನಾಯ್ಕಾಪು ಕೋಟೆಕಾರು ನಿವಾಸಿ ಶ್ರೀನಿವಾಸ (39) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಶಫಾಯತ್ ಅವರ ಶವ ಕಟ್ಟಡದ ಹಿಂಬದಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗಂಭೀರ ಏಟು ತಗುಲಿರುವುದು ಕಂಡುಬಂದಿದೆ. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಶ್ರೀನಿವಾಸ ಮತ್ತು ಶಫಾಯತ್ ನಡುವೆ ಮಾತಿನ …

Read More »

ಉಡುಪಿ | ಕಾಲೇಜು ವಿದ್ಯಾರ್ಥಿಗಳಿದ್ದ ಬಸ್‌ ಟ್ಯಾಂಕರ್‌ಗೆ ಡಿಕ್ಕಿ: ಮೂವರ ಸಾವು

ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದ ಬಸ್ಸೊಂದು ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಮತ್ತು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಕುಂದಾಪುರ ವ್ಯಾಪ್ತಿಯ ತ್ರಾಸಿಯ ಮರವಂತೆ ಬೀಚ್ ಬಳಿ ಬುಧವಾರ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದು, ಬಸ್ಸಿನಲ್ಲಿ ಒಟ್ಟು 50 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿಗಳು ಮುರ್ಡೇಶ್ವರಕ್ಕೆ …

Read More »

ಕಾರಿಗೆ ನಕಲಿ ನಂಬರ್: ಚಾಲಕನ ವಿರುದ್ಧ ಪ್ರಕರಣ

ಪುತ್ತೂರು: ಮೋಸ ಮಾಡುವ ಉದ್ದೇಶದಿಂದ ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಬಳಕೆ ಮಾಡುತ್ತಿದ್ದ ಕಾರೊಂದನ್ನು ನಗರ ಠಾಣೆಯ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಗರದ ಹೊರವಲಯದ ಕೂರ್ನಡ್ಕ ನಿವಾಸಿ ಹಬೀಬ್ ಆರೋಪಿ. ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದ ಸಂಜಯನಗರ ಬಳಿ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾಗ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದ. ಅನುಮಾನಗೊಂಡ …

Read More »

ಮೂವರ ಬಂಧನ; 15 ಕೆ.ಜಿಗೂ ಹೆಚ್ಚು ಗಾಂಜಾ ವಶ

ಮಡಿಕೇರಿ: ತಾಲ್ಲೂಕಿನ ಇಬ್ನಿವಳವಾಡಿ ಗ್ರಾಮದ ಸಿಂಕೋನ- ಮಕ್ಕಂದೂರು ರಸ್ತೆಯಲ್ಲಿ ಒಡಿಶಾದ ಇಬ್ಬರು ಸೇರಿ ಮೂವರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು, 15 ಕೆ.ಜಿ 903 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಒಡಿಶಾದ ಸುಲ್ತಾನ್ ಪ್ರಧಾನ್ (55), ಸ್ವರ್ಣಲತಾ ನಾಯಕ (35) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜಾಬೀರ್ (21) ಬಂಧಿತರು. ಇನ್‌ಸ್ಪೆಕ್ಟರ್‌ಗಳಾದ ಐ.ಪಿ.ಮೇದಪ್ಪ, ಎಚ್.ವಿ.ಚಂದ್ರಶೇಖರ್, ಎಎಸ್‌ಐ ಚರ್ಮಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪ್ರಕರಣ ದಾಖಲಾಗಿದೆ.

Read More »

ಕುಂಬಳೆ: ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು; ಕೊಲೆ ಆರೋಪಿ ಸೆರೆ

ಕಾಸರಗೋಡು: ಕುಂಬಳೆ ಸೀತಾಂಗೋಳಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಆತನನ್ನು ತಲೆಗೆ ಬಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಕೋಟೆಕ್ಕಾರಿನ ಶ್ರೀನಿವಾಸ (39) ಬಂಧಿತ ಆರೋಪಿ. ಮುಂಡಿತ್ತಡ್ಕ ಬಾಪಲಿಪೋನ ಪಾಡ್ಲಡ್ಕದ ಸಫಾಯಿದ್ (30) ಕೊಲೆಯಾದವರು. ಸೀತಾಂಗೋಳಿ ಪೇಟೆ ಸಮೀಪದ ನಿರ್ಜನ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿತ್ತು. ಪೂರ್ವ ದ್ವೇಷವೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮರದ …

Read More »