Breaking News

BigTv News

ಆತ್ರಾಡಿ ಜೋಡಿ ಕೊಲೆ ಪ್ರಕರಣ: ತಾಯಿ-ಮಗಳನ್ನು ಕೊಂದ ಪಾಪಿ ಹರೀಶ್‌ಗೆ ಜೀವಾವಧಿ ಶಿಕ್ಷೆ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಆತ್ರಾಡಿ ಮದಗದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ತಾಯಿ ಮತ್ತು ಮಗಳ ಹತ್ಯೆ ಪ್ರಕರಣದ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಗುರುವಾರ ಮಹತ್ವದ ತೀರ್ಪು ನೀಡಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಹರೀಶ್ ಆರ್. ಅಲಿಯಾಸ್ ಗಣೇಶ (33) ಶಿಕ್ಷೆಗೆ ಗುರಿಯಾದ ಆರೋಪಿ. ತಮಿಳುನಾಡು ಮೂಲದ ಚೆಲುವಿ …

Read More »

ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಬೆಳಗಾವಿ : ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ ಕಿರಣ ಡೊಕ್ಕಣ್ಣನವರ್ ಹಾಗೂ ಸಯ್ಯದ್ ತಹಶೀಲ್ದಾರ್ ಸಸ್ಪೆಂಡ್ ಆಗಿದ್ದಾರೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಪೇದೆಗಳು ಅಮಾನತು ಆಗಿದ್ದಾರೆ. ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದ. ಶನಿವಾರ ಆದಿತ್ಯ ಮತ್ತು ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಗಾಂಜಾ ಸೇವನೆ ಆರೋಪದಲ್ಲಿ ವಶಕ್ಕೆ ಪಡೆದಿರುತ್ತಾರೆ. …

Read More »

₹1.45 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮನೆಯ ಬೀಗ ಮುರಿದು ₹1.45 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಗ್ರಾಮದ ಯಶ್ವಂತ್‌ ಕುಟುಂಬದವರು ಏ.27ರಂದು ಚನ್ನರಾಯಪಟ್ಟಣದಲ್ಲಿ ನೆಂಟರ ಮದುವೆಗಾಗಿ ಮನೆಗೆ ಬೀಗ ಹಾಕಿ ತೆರಳಿದ್ದರು. ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ನೋಡಿದಾಗ, ಮನೆಯ ಮುಂಬಾಗಿಲ ಬೀಗ ಹಾಕಿದ್ದು, ಕೊಟ್ಟಿಗೆಯ ಬಾಗಿಲನ್ನು ತೆರೆದ ಕಳ್ಳರು, ಮನೆಯ ಒಳಗೆ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ 25 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. …

Read More »

ಮಟ್ಕಾ ಜುಗಾರಿ ಅಡ್ಡೆಗೆ ದಾಳಿ

ಗಂಗೊಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಯುತ್ತಿರುವ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಎಸ್ ಐ ಸುದರ್ಶನ್ ಬಿ. ಎನ್. ನೇತೃತ್ವದ ತಂಡ ದಾಳಿ ನಡೆಸಿದ ಘಟನೆ ಎ. 27ರ ಸಂಜೆ ಸಂಭವಿಸಿದೆ. ಈ ವೇಳೆ 865 ರೂ. ನಗದು ಹಾಗೂ ಮಟ್ಕಾ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ಸುರೇಶ್ ಶೇರುಗಾರ್ ಗಂಗೊಳ್ಳಿಯ ಗಣೇಶ್ ಪೂಜಾರಿ ತಿಳಿಸಿದಂತೆ ಮಟ್ಕಾ ಜುಗಾರಿ ಆಡಿಸುತ್ತಿರುವುದಾಗಿ ತಿಳಿದು ಬಂದಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚಿಪ್ಸ್ ತಯಾರಿ ಗೋಡೌನ್ ನಿಂದ 1 ಲಕ್ಷ ರೂ. ಕಳವು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಆಡಂ ಕುದ್ರು ಎಂಬಲ್ಲಿ ಚಿಪ್ಸ್ ಶಾಪ್ ಗೆ ಸಂಬಂಧಿಸಿದ ಗೋಡೌನ್ ನಿಂದ 1 ಲಕ್ಷ ರೂ. ನಗದು ಕಳವಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಲಿ ಹಸನ್ ಎಂಬವರು ಹಾಟ್ ಚಿಪ್ಸ್ ವ್ಯಾಪಾರ ನಡೆಸುತ್ತಿದ್ದ ಆಡಂ ಕುದ್ರುವಿನಲ್ಲಿ ಶಾಪ್ ಗೆ ಸಂಬಂಧಿಸಿದ ಗೋಡೌನ್ ಹೊಂದಿದ್ದರು. ಅಲ್ಲಿ ಚಿಪ್ಸ್ ತಯಾರಿ ಕೆಲಸ ನಡೆಯುತ್ತದೆ. ಜತೆಗೆ ಕಚೇರಿಯೂ ಇದೆ. ಎ.24ರಂದು ರಾತ್ರಿ ಅಂಗಡಿಗೆ ಸಂಬಂಧಿಸಿದ …

Read More »

ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನಗಳ ವಶ

ಗಂಗಾವತಿ: ತಾಲ್ಲೂಕಿನ ಜಂಗಮರ ಕುಲ್ಗುಡಿ ಗ್ರಾಮ ಸೀಮಾ ವ್ಯಾಪ್ತಿಯ ರೈಲ್ವೆ ಬ್ರಿಡ್ಜ್ ಕೆಳಗಡೆ ತೆರಳುವ ಮಾರ್ಗದ ಮಧ್ಯೆ ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಹಿಂದೂಪರ ಮತ್ತು ಗೋ ರಕ್ಷಣೆ ಆಸಕ್ತ ಯುವಕರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಖಲೆಗಳ ಬಗ್ಗೆ ಪೊಲೀಸರು ಚಾಲಕರನ್ನು ವಿಚಾರಿಸಿದಾಗ, ‘ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಿಂದ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಗೆ ರವಾನೆ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಸಿಂಧನೂರಿನ ಎಪಿಎಂಸಿಯಿಂದ ಅನಂತಪುರ ಜಿಲ್ಲೆಗೆ ಬೊಲೆರೊ, …

Read More »

ಐದು ತಿಂಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಆತ್ಮಹತ್ಯೆಗೆ ಶರಣು

ಚಿಕ್ಕಬಳ್ಳಾಪುರ: ಸಂಶಯ ಎಂಬುದು ಎಂತಹ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತಿಯ ಅನುಮಾನದ ಭೂತಕ್ಕೆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ರೂಪಾ (30) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರೂಪಾ ಶವ ಪತ್ತೆಯಾಗಿದೆ. 5 ತಿಂಗಳ ಹಿಂದೆಯಷ್ಟೇ ಮುನಿರಾಜು ಜತೆ ರೂಪಾ ವಿವಾಹವಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಮೂಲದ ರೂಪಾ ಅವರನ್ನು ಹೊನ್ನೇನಹಳ್ಳಿಯ ಮುನಿರಾಜು ಅವರಿಗೆ ವಿವಾಹ …

Read More »

ವೇಶ್ಯವಾಟಿಕೆ ದಂಧೆಯ ಮೇಲೆ ಪೊಲೀಸ್ ದಾಳಿ; 11 ಮಂದಿಯ ಬಂಧನ

ಮಾನ್ವಿ: ತಾಲೂಕಿನ ಹಿರೇಕೋಟ್ನೆಕಲ್-ಬ್ಯಾಗವಾಟ್ ರಸ್ತೆಯ ಕೆನಾಲ್ ಸಮೀಪದ ಹೊಲ ಪ್ರದೇಶದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ, 11 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಜಾಲದ ಕಿಂಗ್‌ಪಿನ್ ಎಂದು ಗುರುತಿಸಲಾದ ಮಾನ್ವಿ ಇಂದಿರಾನಗರ ನಿವಾಸಿ ತಾಯಪ್ಪ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಕೆಲಸದ ಹುಡುಕಾಟದಲ್ಲಿದ್ದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರನ್ನು …

Read More »

ತಾಯಿಯೊಂದಿಗೆ ಅಕ್ರಮ ಸಂಬಂಧದ ಶಂಕೆ: ಮಲಗಿದ್ದ 20 ವರ್ಷದ ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಕುಡುಕ ತಂದೆ!

ಉತ್ತರ ಪ್ರದೇಶ: ಮದ್ಯದ ಅಮಲಿನಲ್ಲಿ ತಂದೆಯೊಬ್ಬ ತನ್ನ ಸ್ವಂತ ಮಗನನ್ನೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಮಗನಿಗೆ ತನ್ನ ತಾಯಿಯೊಂದಿಗೇ ಅಕ್ರಮ ಸಂಬಂಧವಿದೆ ಎಂಬ ಸಂಶಯದಿಂದ ಈ ಭೀಕರ ಕೃತ್ಯ ಎಸಗಲಾಗಿದೆ. ವರದಿಗಳ ಪ್ರಕಾರ, ಆರೋಪಿ ತಂದೆಯು ತೀವ್ರವಾಗಿ ಮದ್ಯ ಸೇವಿಸಿ ಮನೆಗೆ ಬಂದಿದ್ದನು. ತನ್ನ 20 ವರ್ಷದ ಮಗನು ತನ್ನ ಪತ್ನಿಯೊಂದಿಗೆ (ಮಗನ ತಾಯಿ) ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಕಳೆದ …

Read More »

ತವರಿನಿಂದ ಬಾರದ ಪತ್ನಿ, ಪತಿ ಆತ್ಮಹತ್ಯೆ

ಹನೂರು: ತವರು ಮನೆಗೆ ತೆರಳಿದ್ದ ಪತ್ನಿ ಮೂರು ದಿನ ಕಳೆದರೂ ವಾಪಸಾಗದ ಹಿನ್ನೆಲೆಯಲ್ಲಿ ಬೇಸತ್ತ ಪತಿ ಸೋಮವಾರ ಮದ್ಯದ ಜತೆಗೆ ಲಾರಿಯ ರೇಡಿಯೇಟರ್‌ಗೆ ಹಾಕುವ ಆಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಬಿದರಹಳ್ಳಿ ಗ್ರಾಮದ ಮೋಹನ್‌ಕುಮಾರ್ (38) ಮೃತರು. ಲಾರಿ ಚಾಲಕರಾಗಿರುವ ಅವರು, ಕಾರ್ಯನಿಮಿತ್ತ ಬೇರೆಡೆ ತೆರಳಿ ಸೋಮವಾರ ಗ್ರಾಮಕ್ಕೆ ಆಗಮಿಸಿದ್ದರು. ಆದರೆ, ಪತ್ನಿ ಸರೋಜಾ ತವರು ಮನೆ ಅರಬಗೆರೆ ಗ್ರಾಮಕ್ಕೆ ತೆರಳಿ 3 ದಿನ ಕಳೆದರೂ ಮನೆಗೆ ವಾಪಸಾಗಿರಲಿಲ್ಲ. …

Read More »