Breaking News

ಚಿಪ್ಸ್ ತಯಾರಿ ಗೋಡೌನ್ ನಿಂದ 1 ಲಕ್ಷ ರೂ. ಕಳವು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಆಡಂ ಕುದ್ರು ಎಂಬಲ್ಲಿ ಚಿಪ್ಸ್ ಶಾಪ್ ಗೆ ಸಂಬಂಧಿಸಿದ ಗೋಡೌನ್ ನಿಂದ 1 ಲಕ್ಷ ರೂ. ನಗದು ಕಳವಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಲಿ ಹಸನ್ ಎಂಬವರು ಹಾಟ್ ಚಿಪ್ಸ್ ವ್ಯಾಪಾರ ನಡೆಸುತ್ತಿದ್ದ ಆಡಂ ಕುದ್ರುವಿನಲ್ಲಿ ಶಾಪ್ ಗೆ ಸಂಬಂಧಿಸಿದ ಗೋಡೌನ್ ಹೊಂದಿದ್ದರು. ಅಲ್ಲಿ ಚಿಪ್ಸ್ ತಯಾರಿ ಕೆಲಸ ನಡೆಯುತ್ತದೆ. ಜತೆಗೆ ಕಚೇರಿಯೂ ಇದೆ. ಎ.24ರಂದು ರಾತ್ರಿ ಅಂಗಡಿಗೆ ಸಂಬಂಧಿಸಿದ ದಿನದ ಕಲೆಕ್ಷನ್ 1 ಲಕ್ಷ ರೂ. ವನ್ನು ಕಚೇರಿಯ ಟೇಬಲ್ ನ ಡ್ರಾವರ್ ನಲ್ಲಿ ಇಟ್ಟು ಲಾಕ್ ಮಾಡಿ ಹೋಗಿದ್ದರು. ಎ.27ರಂದು ಬೆಳಗ್ಗೆ 7.30ಕ್ಕೆ ಬಂದು ಕಚೇರಿಯ ಟೇಬಲ್ ಡ್ರಾವರ್ ಪರಿಶೀಲಿಸಿದಾಗ ಯಾರೋ ಕಳ್ಳರು ಆಯುಧವನ್ನು ಉಪಯೋಗಿಸಿ ಟೇಬಲ್ ನ ಡ್ರಾವರ್ ತುಂಡರಿಸಿ ಅಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *