Breaking News

ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನಗಳ ವಶ

ಗಂಗಾವತಿ: ತಾಲ್ಲೂಕಿನ ಜಂಗಮರ ಕುಲ್ಗುಡಿ ಗ್ರಾಮ ಸೀಮಾ ವ್ಯಾಪ್ತಿಯ ರೈಲ್ವೆ ಬ್ರಿಡ್ಜ್ ಕೆಳಗಡೆ ತೆರಳುವ ಮಾರ್ಗದ ಮಧ್ಯೆ ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಹಿಂದೂಪರ ಮತ್ತು ಗೋ ರಕ್ಷಣೆ ಆಸಕ್ತ ಯುವಕರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಖಲೆಗಳ ಬಗ್ಗೆ ಪೊಲೀಸರು ಚಾಲಕರನ್ನು ವಿಚಾರಿಸಿದಾಗ, ‘ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಿಂದ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಗೆ ರವಾನೆ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಸಿಂಧನೂರಿನ ಎಪಿಎಂಸಿಯಿಂದ ಅನಂತಪುರ ಜಿಲ್ಲೆಗೆ ಬೊಲೆರೊ, ಅಶೋಕ ಲೈಲಾಂಡ್ ಗೂಡ್ಸ್ 6 ವಾಹನಗಳಲ್ಲಿ 30 ಜಾನುವಾರು ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಜಯರಾಮ, ಶಿವಕುಮಾರ, ಚಂದ್ರಶೇಖರ, ಮದನ್, ಸಚಿನ್‌, ಪರಶುರಾಮ ಎಂಬ ಯುವಕರು ವಾಹನಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 30 ಜಾನುವಾರನ್ನು ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ಬೆಟ್ಟದ ಗೋಶಾಲೆಗೆ ಯುವಕರು ಬಿಟ್ಟಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *