Breaking News

BigTv News

ಮಾರಕಾಸ್ತ್ರಗಳಿಂದ ಕೊಚ್ಚಿ ವಕೀಲನ ಕೊಲೆ

ಕಲಬುರಗಿ: ಹಳೆಯ ಜೇವರ್ಗಿ ರಸ್ತೆಯಲ್ಲಿ ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಖಾಸಗಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಹಾಗೂ ವಕೀಲನಾಗಿದ್ದ ಅನಿಲ್ ರಾಠೋಡ್ (45) ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ …

Read More »

ಕಲಬುರಗಿಯಲ್ಲಿ ಬರ್ಬರ ಕೊಲೆ: ಬಡ್ಡಿ ವ್ಯವಹಾರದ ಶಂಕೆ

ಕಲಬುರಗಿ: ನಗರದ ಪಿ ಅಂಡ್ ಟಿ ಕ್ವಾರ್ಟರ್ಸ್ ಬಳಿಯ ಅಪಾರ್ಟ್ ಮೆಂಟ್ ಕೆಳ ಭಾಗದಲ್ಲಿರುವ ಅಂಗಡಿ ಮುಂಭಾಗದಲ್ಲಿ ಗುರುವಾರ (ಏ.2) ಸಂಜೆ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಅನಿಲ ರಾಠೋಡ‌ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

Read More »

ಕುಡಿಯಲು ಹಣ ಕೊಡದ ಅಳಿಯನನ್ನು ಕೊಂದ ಮಾವನಿಗೆ ಜೀವಿತಾವಧಿ ಜೈಲು ಶಿಕ್ಷೆ

ಶಿರಸಿ: ಅಳಿಯನನ್ನು ಕೊಂದಿದ್ದ ಮಾವನಿಗೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಿತಾವಧಿ ಜೈಲು ಶಿಕ್ಷೆ ಪ್ರಕಟಿಸಿದೆ.2024ರ ಮೇ 2 ರಂದು ಮಂಜುನಾಥಗೌಡನ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ಹತ್ಯೆ ನಡೆದಿತ್ತು. ಕುಡಿಯಲು ಹಣ ನೀಡದಿದ್ದಕ್ಕೆ ಕಟ್ಟಿಗೆಯಿಂದ ಹೊಡೆದು ಅಳಿಯನನ್ನು ಮಾವ ಕೊಲೆ ಮಾಡಿದ್ದ. ಮಾವ ವೆಂಕಟರಮಣಗೌಡನಿಂದ ಹಲ್ಲೆಗೊಳಗಾದ ಮಂಜುನಾಥಗೌಡ ಸ್ಥಳದಲ್ಲಿ ಮೃತಪಟ್ಟಿದ್ದ. ಅಪರಾಧಿ ವೆಂಕಟರಮಣಗೌಡನಿಗೆ …

Read More »

ಕೊಕ್ಕಡ ಬಾರ್‌ನಲ್ಲಿ ಇಬ್ಬರ ಮೇಲೆ ಹಲ್ಲೆ

ಬೆಳ್ತಂಗಡಿ: ಕೊಕ್ಕಡದ ಬಾರ್‌ ಒಂದರಲ್ಲಿ ಹಣಕಾಸಿನ ವಿಷಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯತೀಶ್, ಧನುಷ್ ಭಂಡಾರಿ,ಶರತ್ ಭಂಡಾರಿ, ಪ್ರವೀಣ್ ಆರೋಪಿಗಳು. ಕೊಕ್ಕಡದ ಬಾರ್‌ ಒಂದರಲ್ಲಿ ಮಾ. 29ರಂದು ರಾತ್ರಿ 9 ಗಂಟೆಗೆ ಕೊಕ್ಕಡ ಗ್ರಾಮದ ಹೊಸ ಮನೆ ನಿವಾಸಿ ಅಕ್ಷಯ್ ಎಂಬವರು ಮದ್ಯ ಸೇವಿಸಲು ಕುಳಿತಿರುವ ಸಮಯದಲ್ಲಿ ಆರೋಪಿಗಳ ಪೈಕಿ ಯತೀಶ್ ಬಂದು ಅವ್ಯಾಚ ಶಬ್ದಗಳಿಂದ ಬೈದು ದೀಕ್ಷಿತ್ …

Read More »

ಬನಶಂಕರಿ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಅನುಮಾನಾಸ್ಪದವಾಗಿ ವಾಹನ ಓಡಾಟ: ತನಿಖೆ

ಬೆಂಗಳೂರು‌: ಬನಶಂಕರಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಲ್ಲಿ ಬೊಲೆರೊ ವಾಹನದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಟ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ‘ಇದುವರೆಗೆ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ.ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಪರಿಶೀಲನೆ ನಡೆಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ವಾಹನ ನಿಲ್ಲಿಸಿ ಆಶೀರ್ವಾದ ಮಾಡುವ ನೆಪದಲ್ಲಿ ಕೆಲವರನ್ನು ಅಡ್ಡಗಟ್ಟಲಾಗಿದೆ. ರಸ್ತೆಯಲ್ಲಿ ತೆರಳುತ್ತಿದ್ದ ಬೊಲೆರೊ ವಾಹನ ಮನೆಯೊಂದರ …

Read More »

ಎಲ್ ಪಿಜಿ ಸಿಲಿಂಡರ್ ಅಭಾವದ ನೆಪ: ಕೆವೈಸಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ದೋಚಿದ ಸೈಬರ್ ವಂಚಕರು

ಉಡುಪಿ: ಎಲ್ ಪಿಜಿ ಸಿಲಿಂಡರ್ ಅಭಾವವಿರುವುದನ್ನೇ ಬಂಡವಾಳ ಮಡಿಕೊಂಡಿರುವ ಸೈಬರ್ ವಂಚಕರು ಕೆವೈಸಿ ಹೆಸರಲ್ಲಿ ಲಕ್ಷ ಲಕ್ಷ ದೋಚಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಗ್ಯಾಸ್ ಸಿಲಿಂಡರ್ ಹೆಸರಲ್ಲಿ ಉಡುಪಿಯಲ್ಲಿ ಇಬ್ಬರಿಗೆ ಲಕ್ಷ ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಎಸ್ ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ. ಕೆವೈಸಿ ಅಪ್ ಡೇಟ್ ಮಾಡುವಂತೆ ಗ್ಯಾಸ್ ಏಜೆನ್ಸಿ ಹೆಸರಲ್ಲಿ ಅಪರಿಚಿತ ನಂಬರ್ ನಿಂದ ಕರೆ ಮಾಡಿ ಬಳಿಕ ವಾಟ್ಸಾಪ್ ಗೆ ಎಪಿಕೆ ಫೈಲ್ …

Read More »

ಬಸ್ – ದ್ವಿಚಕ್ರ ವಾಹನ ನಡುವೆ ಅಪಘಾತ: ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ಸಾವು!

ದೊಡ್ಡಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪಾಲನಜೋಗಹಳ್ಳಿ ಗ್ರಾಮದ ಬಳಿ ನಡೆದಿದೆ. ಪುರುಷೋತ್ತಮ (29) ಸ್ಥಳದಲ್ಲೆ ಸಾವನಪ್ಪಿದ ದುರ್ದೈವಿಯಾಗಿದ್ದು, ರಾಜಾನುಕುಂಟೆಯ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪುರುಷೋತ್ತಮ, ಬೈಕ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಓವರ್ ಟೇಕ್ ಮಾಡಲು ಬಂದ ಕೆಎಸ್‌ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಅಪಘಾತ …

Read More »

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಬೆಂಗಳೂರು, ದೆಹಲಿ, ಹೈದರಾಬಾದ್ ಐಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ

ಬಂಗಾಳದಲ್ಲಿ ಭಾರೀ ಸದ್ದು ಮಾಡಿದ್ದ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಬೆಂಗಳೂರು, ದೆಹಲಿ, ಹಾಗೂ ಹೈದರಾಬಾದಿನ ಐಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದೆ.ಜನವರಿ ತಿಂಗಳಲ್ಲಿ ಐ-ಪ್ಯಾಕ್ ಸಂಸ್ಥಾಪಕ ಮತ್ತು ನಿರ್ದೇಶಕ ಪ್ರತಿಕ್ ಗಾಂಧಿ ಅವರ ಕಚೇರಿ ,ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಥಳಕ್ಕೆ ಧಾವಿಸಿ ತನಿಖೆಗೆ ಅಡ್ಡಿಪಡಿಸಿದ್ದರು. ಇದೀಗ ಮತ್ತೆ ಇಡಿ ಅಧಿಕಾರಿಗಳು ರಿಷಿ ರಾಜ್ …

Read More »

ಯಾದಗಿರಿ: ಲೋಕಾಯುಕ್ತ ಬಲೆಗೆ ಕೆಬಿಜೆಎನ್‌ಎಲ್‌ನ ಎಇಇ, ಜೆಇ

ಗುತ್ತಿಗೆದಾರರೊಬ್ಬರ ಬಾಕಿ ಬಿಲ್ ಬಿಡುಗಡೆಗೆ ₹ 35 ಸಾವಿರ ಫೋನ್‌ ಪೇ ಮೂಲಕ ಲಂಚ ಪಡೆದ ಆರೋಪದಡಿ ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್‌) ಎಇಇ ಹಾಗೂ ಜೆಇಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಶಹಾಪುರ ಕೆಬಿಜೆಎನ್‌ಎಲ್‌ ಕಚೇರಿಯ ಎಇಇ ಮಧುಸೂದನ ಹಾಗೂ ಜೆಇ ಮಂಜುನಾಥ ಲಂಚ ಪಡೆದ ಆರೋಪಿಗಳು. ವಡಗೇರಾ ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದ ಕಾಸಿಂಸಾಬ್ ಜಲಾಲ್‌ಸಾಬ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ …

Read More »

ಕಳ್ಳತನ ಮಾಡಲು ಹೋದವನನ್ನು ಮನೆಯಲ್ಲೇ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು

ಲಕ್ನೋ: ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮನೆಯಲ್ಲಿದ್ದ ಮಹಿಳೆಯರೇ ಸೇರಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಮಹಿಳೆಯರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಾರ್ಚ್ 21 ರಂದು ಈದ್ ಹಬ್ಬದ ಸಂಭ್ರಮದ ನಡುವೆಯೇ ಈ ಘಟನೆ ನಡೆದಿದೆ. ವೈದ್ಯರೊಬ್ಬರ ನಿವಾಸಕ್ಕೆ ಕಳ್ಳನೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಒಳನುಗ್ಗಿದ್ದಾನೆ. ಈ ವೇಳೆ ಮನೆಯವರೆಲ್ಲರೂ ಊಟದ ಮೇಜಿನ ಬಳಿ ಕುಳಿತು ಊಟ …

Read More »