Breaking News

ಉಡುಪಿ : ಪಾದೂರು ತೈಲ ಸಂಗ್ರಹಾಲಯದ ಮೇಲೆ ಡ್ರೋನ್‌ ದಾಳಿ!

ಪಾಕಿಸ್ತಾನದ ಮೇಲೆ ಭಾರತ ದಾಳಿಯ ಬೆನ್ನಲ್ಲೇ ಉಡುಪಿ ಜಿಲ್ಲೆಯ ಪಾದೂರು ತೈಲ ಸಂಗ್ರಹಾಲಯದ ಮೇಲೆ ಡ್ರೋನ್‌ ದಾಳಿ ನಡೆದಿದೆ. ಸಂಜೆ 4 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ತೈಲ ಸಂಗ್ರಹಾಲಯದ ಒಳಗೆ ಹಾಗೂ ಹೊರ ಭಾಗಕ್ಕೆ ಹಾನಿಯಾಗಿದೆ.ಕೂಡಲೇ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿಯನ್ನು ನೀಡಲಾಗಿತ್ತು. ದಾಳಿಯ ಬೆನ್ನಲ್ಲೇ ಐಎಸ್‌ಪಿಆರ್‌ಎಲ್‌ನ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಅಷ್ಟೇ ಅಲ್ಲಾ, ಅದಾನಿ ಕಂಪನಿಯ ಫೈರ್‌ ಇಂಜಿನ್‌ ಹೊರಭಾಗದ ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡಿತು. ಅಷ್ಡೇ ಅಲ್ಲಾ ನಾಲ್ಕೈದು ನಿಮಿಷಗಳಲ್ಲಿಯೇ ಮೊದಲ ಹಂತದಲ್ಲಿ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯೂ ಆಗಿತ್ತು.ಘಟನೆಯಲ್ಲಿ ಒಟ್ಟು ಇಬ್ಬರು ಮರಣವನ್ನಪ್ಪಿದ್ದು, 12 ಮಂದಿಗೆ ಕಾಪು ಆಸ್ಪತ್ರೆಯಲ್ಲಿ ಹಾಗೂ 20 ಮಂದಿಯನ್ನು ಶಿರ್ವದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೇ ಬಾರಿಗೆ ಡ್ರೋನ್‌ ಮೂಲಕ ವೈರಿಗಳು ಆಕ್ರಮಣಕ್ಕೆ ಮುಂದಾಗಿದ್ದರೂ ಕೂಡ ಡ್ರೋನ್‌ ದಾಳಿಯನ್ನು ತಪ್ಪಿಸುವಲ್ಲಿ ಡಿಎಆರ್‌ ಕ್ವಿಕ್‌ ರೆಸ್ಪಾನ್ಸ್‌ ತಂಡ ಯಶಸ್ವಿ ಆಯಿತು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *