ಜೇವರ್ಗಿ: ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ತಾಲ್ಲೂಕಿನ ಆಂದೋಲಾ ಗ್ರಾಮದ ಮಶಾಕ್ ಹುಸೇನ್ (65) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಆಂದೋಲಾ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಮಹಿಳೆ ಜತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತನೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜೇವರ್ಗಿ ಸಿಡಿಪಿಒ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ …
Read More »ರಟ್ಟೀಹಳ್ಳಿ ಕಾರು ಪಲ್ಟಿ: ವ್ಯಕ್ತಿ ಸಾವು
ಪಟ್ಟಣದ ಮಾಸೂರು ರಸ್ತೆಗೆ ಹೊಂದಿಕೊಂಡಿರುವ ಬ್ರಹ್ಮಗಿರಿ ಲೇಜೌಟ್ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಜೆ ಜರುಗಿದೆ.ಮೃತ ಯುವಕ ಪಟ್ಟಣದ ಶಿವಾಜಿ ನಗರ ನಿವಾಸಿ ಶಿವರಾಜ ಮಂಜುನಾಥ ಜಾಧವ (24 ವರ್ಷ) ಎಂದು ಗುರುತಿಸಲಾಗಿದ್ದು, ನಿಷ್ಠಾಳಜಿಯಿಂದ ಕಾರನ್ನು ಲೇಜೌಟ್ನಿಂದ ಮಾಸೂರು ರಸ್ತೆಯ ಕಡೆಗೆ ಓಡಿಸಿಕೊಂಡು ರಸ್ತೆಯ ಬಲ ಬದಿಗೆ ಇದ್ದ ಸಿಮೆಂಟಿನ ಪೋಲ್ ಕಟ್ಟಿಗೆ ಡಿಕ್ಕಿಯಾಗಿ ಕಾರು ಪಲ್ಪಿಯಾಗಿದೆ. ಕಾರಿನಲ್ಲಿದ್ದ ದರ್ಶನ ತಂದೆ ನಾಗೇಂದ್ರ ಅವರಿಗೆ …
Read More »ಅಡ್ರೆಸ್ ಕೇಳುವ ನೆಪದಲ್ಲಿ ಸರಣಿ ಕಳ್ಳತನ – ಖತರ್ನಾಕ್ ಲೇಡಿ ಗ್ಯಾಂಗ್ ಸೆರೆ!
ರಾಮನಗರದಲ್ಲಿ ಸರಣಿ ಕಳ್ಳತನ ಎಲ್ಲರನ್ನು ಬೆಚ್ಚಿಬೀಳಿಸಿತ್ತು . ದುಷ್ಕರ್ಮಿಗಳ ಕೃತ್ಯಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದರು. ಇದೀಗ ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ ಮೂವರು ಆರೋಪಿಗಳನ್ನು ಮಾಗಡಿ ತಾಲೂಕಿನ ಕುದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಭು (39), ವಸಂತಿ (37) ಮತ್ತು ಜ್ಯೋತಿ (32) ಎಂದು ಗುರುತಿಸಲಾಗಿದೆ. ಮಾ.3ರಂದು ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಮೂವರು ಕಾರಿನಲ್ಲಿ ಬಂದು ವಿಳಾಸ …
Read More »ಅಕ್ರಮ ಮಣ್ಣು ಗಣಿಗಾರಿಕೆಗೆ ವಿದ್ಯಾರ್ಥಿ ಬಲಿ
ಗದಗ: ಅಕ್ರಮವಾಗಿ ನಡೆಸಲಾಗುತ್ತಿದ್ದ ಮಣ್ಣು ಗಣಿಗಾರಿಕೆಯ ಹೊಂಡದಲ್ಲಿ ಬಿದ್ದು ನರ್ಸಿಂಗ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ತಾಲೂಕಿನ ಕಣಗಿನಾಳ ರಸ್ತೆ ಬಳಿ ನಡೆದಿದೆ. ಹೋಳಿ ಹಬ್ಬದ ಬಣ್ಣ ಆಡಿ ಆರೇಳು ಸ್ನೇಹಿತರು ಸ್ನಾನಕ್ಕೆ ತೆರಳಿದ್ದರು.ಈ ವೇಳೆ ದುರಂತ ಸಂಭವಿಸಿದೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, 30-40 ಅಡಿ ಆಳ ಹೊಂಡ ತೆಗೆಯಲಾಗುತ್ತಿದೆ. ಈ ಹಿಂದೆ ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ, ಚಿಂಚಲಿ ಗ್ರಾಮಗಳಲ್ಲಿ …
Read More »ಜಾತಿನಿಂದನೆ ಆರೋಪ: ನಾಲ್ವರ ವಿರುದ್ಧ ಪ್ರಕರಣ
ಯಾದಗಿರಿ: ತಕರಾರಿರುವ ನಿವೇಶನಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಅಳತೆಗೆ ಕಾರ್ಯದ ವೇಳೆ ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ ಆರೋಪದಡಿ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸುರಪುರ ತಾಲ್ಲೂಕಿನ ಕರಡಕಲ್ ಗ್ರಾಮದ ಭೀಮಣ್ಣ ಅಂಬಿಗೇರ, ಸಿದ್ದಪ್ಪ ಅಂಬಿಗೇರ, ಅಂಬಮ್ಮ ಅಂಬಿಗೇರ ಮತ್ತು ದೇವಪ್ಪ ಅಂಬಿಗೇರ ವಿರುದ್ಧ ಪ್ರಕರಣ ದಾಖಲಾಗಿದೆ. ಕರಡಕಲ್ ಗ್ರಾಮದ ರೇಣುಕಮ್ಮ ಗುಡಕಲ್ ಅವರ ಜಾಗದ ಕುರಿತ ತಕರಾರಿತ್ತು. ತಕರಾರಿರುವ …
Read More »ಲಂಚ ಪಡೆಯುತ್ತಿದ್ದ ಹೀನಾ ಲೋಕಾ ಬಲೆಗೆ
ಹುಬ್ಬಳ್ಳಿ: ರೊಟ್ಟಿ ಕೇಂದ್ರದ ಲೈಸೆನ್ಸ್ಗೆ ಲಂಚ ಪಡೆಯುವ ವೇಳೆ ಹು-ಧಾ ಮಹಾನಗರ ಪಾಲಿಕೆ ವಲಯ 1ರ ಆರೋಗ್ಯ ನಿರೀಕ್ಷಕಿ ಹೀನಾ ಕೌಸರ್ ಕುರಹಟ್ಟಿ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಳೆಪ್ಪ ತಳವಾರ ಎನ್ನುವವ ವ್ಯಕ್ತಿ ತಮ್ಮ ಪತ್ನಿ ಹೆಸರಿನಲ್ಲಿ ರೊಟ್ಟಿ ಕೇಂದ್ರ ತೆರೆಯಲು ಉದ್ದೇಶಿಸಿದ್ದರು. ವಲಯ 1ರ ಆರೋಗ್ಯ ನಿರೀಕ್ಷಕಿ ಹೀನೌ ಕೌಸರ್ ಅವರನ್ನು ಭೇಟಿಯಾಗಿದ್ದರು. ಕೇಂದ್ರ ತೆರೆಲಯ ಲೈಸೆನ್ಸ್ ಪಡೆಯಬೇಕು. ಅದಕ್ಕೆ 4,500 ರೂ. ಲಂಚ ಹಣ ಕೊಡಬೇಕು …
Read More »ಉರ್ವ ಮಾದಕವಸ್ತು ಎಂಡಿಎಂಎ ಮಾರಾಟ ಇಬ್ಬರ ಬಂಧನ
ಮಂಗಳೂರು: ಉರ್ವ ಮಾರಿಗುಡಿ ಬಳಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಒಟ್ಟು 12.46 ಗ್ರಾಂ ತೂಕದ 1,24,600 ರೂ. ಅಂದಾಜು ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಗೊಲ್ತಮಜಲು ಮೂಲದ ಅಶೋಕನಗರ ವೇಲ್ಸ್ ಪೇಟೆಯ ತಿಲಕ್ ರಾಜ್ (31) ಮತ್ತು ಬಜಪೆ ಭಟ್ರಕೆರೆ ಮೂಲದ ಕುದ್ರೋಳಿ ನಡುಪಳ್ಳಿ ಬಳಿಯ ಶೇಕ್ ಮೊಹಮ್ಮದ್ ಹ್ಯಾರಿಸ್ ಅಲಿಯಾಸ್ ಜಿಗರ್ (32) ಬಂಧಿತ …
Read More »ಹಣಕ್ಕಾಗಿ ಆರೋಗ್ಯ ಅಧಿಕಾರಿ ಮೇಲೆ ಹಲ್ಲೆ: ಪತಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್
ಯಾದಗಿರಿ: ತವರು ಮನೆಯಿಂದ ಹಣ ತರುವಂತೆ ಬೆದರಿಸಿ ಗೃಹಿಣಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಆಕೆಯ ಪತಿ ಸೇರಿ ನಾಲ್ವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುಮಠಕಲ್ ತಾಲ್ಲೂಕಿನ ಕೇಶ್ವಾರ ಗ್ರಾಮದ ನಿವಾಸಿ, ಕೊಂಕಲ್ ಪಿಎಚ್ಸಿಯ ಆರೋಗ್ಯ ಸುರಕ್ಷಣಾಧಿಕಾರಿಯಾದ ಸುನಿತಾ ವಿಶ್ವನಾಥ ಅವರು ನೀಡಿದ ದೂರಿನ ಅನ್ವಯ ಪತಿ ವಿಶ್ವನಾಥ ಸಾಬಣ್ಣ ನಿರೇಟಿ, ಶಿವಕಾಂತ ಸಾಬಣ್ಣ ನಿರೇಟಿ, ಶರಣಮ್ಮ ನರಸಿಂಹುಲು ನಿರೇಟಿ ಮತ್ತು ಶಿವಕುಮಾರ ನರಸಿಂಹುಲು ನಿರೇಟಿ …
Read More »ಎಪಿಕೆ ಫೈಲ್ ಡೌನ್ಲೋಡ್ ಮಾಡಿಸಿ ಮೋಸ
ಹುಬ್ಬಳ್ಳಿ: ಫೇಸ್ಬುಕ್ನಲ್ಲಿ ಬಂದ ಯುಸಿಒ ಪೆನ್ಷನ್ ಕಾರ್ಡ್ ಜಾಹೀರಾತುಳ್ಳ ಎಪಿಕೆ ಫೈಲ್ ಡೌನ್ ಲೋಡ್ ಮಾಡಿದ ನಗರದ ವ್ಯಕ್ತಿಯೊಬ್ಬರು ವಂಚಕರ ಬಲೆಗೆ ಬಿದ್ದು, 5.99 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅರುಣ ಕೆ. ವಂಚನೆಗೆ ಒಳಗಾದವರು. ಫೇಸ್ಬುಕ್ ನೋಡುವಾಗ ಯುಸಿಒ ಪೆನ್ಷನ್ ಕಾರ್ಡ್ ಬಗ್ಗೆ ಮಾಹಿತಿ ಬಂದಿದೆ. ಯುಸಿಒ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿದ್ದ ಅರುಣ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ನಂತರ ಅಮಿತಕುಮಾರ ಎಂಬಾತ ವಾಟ್ಸ್ಆಯಪ್ ಮೂಲಕ ಸಂಪರ್ಕಿಸಿ, ಎಪಿಕೆ ಫೈಲ್ …
Read More »ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನಿತಿನ್(26) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಹೇಳಲಾಗಿದೆ. ದಿನಸಿ ವರ್ತಕ ಬೆಲ್ಲದ ಕೃಷ್ಣಪ್ಪ ಅವರ ಮೊಮ್ಮಗ ಹಾಗೂ ನಾಗರಾಜ್ ಅವರ ಪುತ್ರ ನಿತಿನ್ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





