ಒಬ್ಬ ಪಾಪಿ ಗಂಡ ಹೆಂಡತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಅವಳು ಸಾವು ಬದುಕಿನ ಮದ್ಯೆ ಕಿಮ್ಸ್ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಆ ಪಾಪಿ ಗಂಡ ಪೊಲೀಸರ ಮುಂದೆಯೇ ಚಾಕುವಿನಿಂದ ಇರಿದಿದ್ದಾನೆ.ಹಳೆ ಹುಬ್ಬಳ್ಳಿಯ ಶ್ರರಾಮ ನಗರದ ನಿವಾಸಿಯಾದ ಮಂಜುನಾಥ ಬೆಂಡೆಗೆರೆ ಎಂಬಾತಾನೆ ತನ್ನ ಹೆಂಡತಿ ಸವಿತಾಳ ಕುತ್ತಿಗೆಗೆ ಇರಿದಿದ್ದಾನೆ. ಇವರಿಬ್ಬರೂ 17 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರೂ ಮಕ್ಕಳು ಕೂಡಾ ಇದ್ದಾರೆ. ಪತಿ ಮಂಜುನಾಥ ಅವನ ಹೆಂಡತಿಗೆ ಮನೆಯಿಂದ ವರದಕ್ಷಿಣೆ ತೆಗೆದು ಕೊಂಡು ಬಾ

ಎಂದು ಕಿರುಕುಳ ಕೊಡುತ್ತಿದ್ದನಂತೆ. ಅವಳ ತವರ ಮನೆಯಲ್ಲಿ ಒಂದು ವಾಹನ ಕೂಡಾ ಕೊಡಿಸಿದ್ದರು. ಇಷ್ಟಾದರೂ ದಿನ ಅವಳಿಗೆ ವರದಕ್ಷಿಣೆ ತರುವಂತೆ ಪಿಡಿಸುತ್ತಿದ್ದ.ಆಕೆ ತನ್ನ ತಂದೆಯನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು ಆಗ ಪೊಲೀಸರು ಮಂಜುನಾಥನನ್ನು ಕರೆಸಿ ಬುದ್ದಿ ಹೇಳಿದ್ದಾರೆ. ಅದಕ್ಕೆ ಕೋಪಗೊಂಡು ಪತಿ ಅವಳಿಗೆ ಪೊಲೀಸರ ಮುಂದೆ ಚಾಕುವಿನಿಂದ ಇರಿದಿದ್ದಾನೆ. ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಿತಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

