ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಸಮೀಪದ ನೂಜಿಯಲ್ಲಿ ಶುಕ್ರವಾರ ಸಂಜೆ ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸುಡುಮದ್ದು ತಯಾರಿಕಾ ಘಟಕದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿಯಾದ ಆರೋಪಿ ಅಬ್ದುಲ್ ಗಫೂರ್ ಎಂಬಾತ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ, ಅಕ್ರಮವಾಗಿ ಸಂಗ್ರಹಿಸಿದ್ದ. ಈ ಸುಡುಮದ್ದುಗಳು ಸ್ಪೋಟಗೊಂಡಿದೆ. ಸ್ಫೋಟದ …
Read More »‘ಕಾರಿನೊಳಗೆ ಶವ ಪತ್ತೆ’ ಬಾರ್ ಮುಂಭಾಗ ಪ್ರತಿಭಟನೆ
ಹಾಸನ: ಕಾರಿನೊಳಗೆ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಕೊಲೆ ಎಂದು ಆರೋಪಿಸಿ ಶವ ಪತ್ತೆಯಾದ ಹಾಸನ-ಹಳೇಬೀಡು ರಸ್ತೆಯ ರಾಯಪುರ ಗ್ರಾಮದ ಸಮೀಪದಲ್ಲಿರುವ ಬಾರ್ ಎದುರು ಶವ ಇಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಸಾಲಗಾಮೆ ಹೋಬಳಿ ಸೀಗೆ ವೀರಾಪುರ ಗ್ರಾಮದ ದೊರೆಸ್ವಾಮಿ (42) ಮೃತ. ಬಾರ್ ಎದುರು ನಿಲ್ಲಿಸಿದ್ದ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೀರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ದೊರೆಸ್ವಾಮಿ …
Read More »ಬಳ್ಳಾರಿ | ಜಾತಿ ನಿಂದನೆ ಆರೋಪ: ಮೂವರ ವಿರುದ್ಧ ಪ್ರಕರಣ
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಲ್ಲು ಗ್ರಾಮದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ನಾಲ್ವರಿಗೆ ಜಾತಿ ನಿಂದನೆ ಹಾಗೂ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾರ್ಚ್ 1ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ಗ್ರಾಮದ ಮದ್ಯದಂಗಡಿ ಎದುರು ಈ ಘಟನೆ ನಡೆದಿದೆ. ದೂರುದಾರ ಸೂರ್ಯನಾರಾಯಣ ಹಾಗೂ ಅವರ ಜೊತೆಗಿದ್ದ ಗಾಳೆಪ್ಪ, ಎರ್ರಿಸ್ವಾಮಿ ಮತ್ತು ಮಲ್ಲಪ್ಪ ಎಂಬುವವರು ಮದ್ಯದಂಗಡಿ ಬಳಿ ಇದ್ದಾಗ, ಗ್ರಾಮದ ಎರ್ರಿಸ್ವಾಮಿ, …
Read More »ಬಳ್ಳಾರಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ಮಗನನ್ನೇ ಕೊಂದು, ಪೀಸ್ ಪೀಸ್ ಮಾಡಿ ಚೀಲದಲ್ಲಿ ತುಂಬಿದ ತಂದೆ!
ಹೂವಿನಹಡಗಲಿಯ ಬೀರಬ್ಬಿಯಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಚೀಲದಲ್ಲಿ ಪೀಸ್ ಪೀಸ್ ಆಗಿ ಸಿಕ್ಕ ವ್ಯಕ್ತಿಯ ಮೃತದೇಹದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಈ ಪ್ರಕರಣದಲ್ಲಿ ಆರೋಪಿ ಎಂಬುದು ಗೊತ್ತಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.ಬೀರಬ್ಬಿ ಗ್ರಾಮದ ಬೀರೇಶ (25) ಕೊಲೆಯಾಗಿದ್ದ ಯುವಕ. ಆತನ ತಂದೆ ಲಕ್ಷ್ಮಪ್ಪ (55) ಹತ್ಯೆಗೈದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸುಮಾರು …
Read More »ಕಸ ಹಾಕುವ ವಿಚಾರಕ್ಕೆ ಗಲಾಟೆ: ತಂದೆ ಕೊಲೆ, ಪುತ್ರ ಗಂಭೀರ
ಕೋಲಾರ: ಕಸ ಹಾಕುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ತಂದೆ ಕೊಲೆ ಮಾಡಲಾಗಿದ್ದು, ಮಗನಿಗೆ ಗಂಭೀರ ಗಾಯವಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. 60 ವರ್ಷದ ಶಾಜು ಖಾನ್ ಮೃತಪಟ್ಟವರು ಎಂದು ಹೇಳಲಾಗಿದೆ. ಮಚ್ಚಿನಿಂದ ಹೊಡೆದು ಕೊಲೆ ಮಾಡಿ ವಾಸೀಂ ಮತ್ತು ಶಬ್ಬೀರ್ ಪರಾರಿಯಾಗಿದ್ದಾರೆ. ಶಾಜು ಖಾನ್ ಪುತ್ರ ಶಹಾಬುದ್ದೀನ್ ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೌನಿಪಲ್ಲಿ ಪೊಲೀಸ್ …
Read More »ಖಾತೆ ಬಳಸಿ, ಹಣ ವರ್ಗಾವಣೆ
ಬಳ್ಳಾರಿ : ವ್ಯಕ್ತಿಯೊಬ್ಬರ ದಾಖಲೆಗಳು ಬಳಸಿ, ಬ್ಯಾಂಕ್ ಖಾತೆ ತೆರೆದು 64.62 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಪಾರ್ವತಿನಗರದ ನಿವಾಸಿ ಡಿ. ಸಿದ್ದೇಶ್ ಅವರನ್ನು 2025ರ ಜನವರಿಯಲ್ಲಿ ಭೇಟಿಯಾಗಿದ್ದ ಇಕ್ಬಾಲ್, ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ.ಇವರ ಹೆಸರಿನಲ್ಲಿ ಐಡಿಎಫ್ಸಿ ಬ್ಯಾಂಕ್ನಲ್ಲಿ ಬಳಾರಿ ಕಂಪ್ಯೂಟರ್ ಸಿಸ್ಟಮ್ಸ್ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆಸಿದ್ದ. ಖಾತೆ ತೆರೆಯುವ ನೆಪದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಿಎಸ್ಟಿ ಪ್ರತಿ ಹಾಗೂ …
Read More »ಕನಕಪುರ | ಜಮೀನಿಗೆ ಬೆಂಕಿ: ಹಳೆ ದ್ವೇಷ ಎಂದು ಆರೋಪ
ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಚಾಮುಂಡಿಪುರದಲ್ಲಿ ಜಮೀನಿಗೆ ಬೆಂಕಿ ತಗುಲಿ ಮರಗಿಡಗಳು ಸುಟ್ಟು ನಾಶವಾಗಿವೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿದ್ದಾರೆ ಎಂದು ದೂರಿ ಜಮೀನಿನ ಮಾಲೀಕ ನಾಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ನಾಗರಾಜು ಅವರು ಶನಿವಾರ ನಗರದ ನ್ಯಾಯಾಲಯಕ್ಕೆ ಹೋಗಿ ಸಂಜೆ ವಾಪಸ್ ಬರುವಾಗ ಜಮೀನಿಗೆ ಬೆಂಕಿ ಬಿದ್ದು ಮರಗಿಡ, ತೋಟದ ಮನೆ ಬೆಂಕಿಗೆ ಆಹುತಿಯಾಗಿದೆ. ಜಮೀನಿನಲ್ಲಿ ಕಟ್ಟಿದ್ದ ಜೋಡಿ ಹಸುಗಳಲ್ಲಿ ಒಂದು ಹಸು ಕಾಣೆಯಾಗಿದ್ದು, ಮತ್ತೊಂದು ಹಸುವಿಗೆ …
Read More »ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಬಳ್ಳಾರಿ : ವೇಗವಾಗಿ ಚಲಿಸಿದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಲ್ಲಿನ ಅಲ್ಲಂ ಸುಮಂಗಳಮ್ಮ ಕಾಲೇಜು ಬಳಿ ನಡೆದಿದೆ. ಆಂಧ್ರದ ಕರ್ನೂಲ್ನಿಂದ ಆಗಮಿಸಿದ್ದ ಕಾರು, ದುರ್ಗಮ್ಮ ಗುಡಿ ವೃತ್ತದಿಂದ ಸಂಚರಿಸುವ ವೇಳೆ ಅಲ್ಲಂ ಸುಮಂಗಳಮ್ಮ ಕಾಲೇಜು ಬಳಿ ರಸ್ತೆಯ ಹಂಪ್ಸ್ ಗಮನಿಸದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಬದಿಯ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಚಾಲಕ ಸೇರಿದಂತೆ ಓರ್ವ ಸವಾರ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಬ್ಬ ಲೋಕೇಶ್ ಎಂಬ ಸವಾರ ಸಾರ್ವಜನಿಕರ …
Read More »ಉತ್ತರ ಕನ್ನಡದಲ್ಲಿ ಬೆಚ್ಚಿಬೀಳಿಸಿದ ಕೊಲೆ ರಹಸ್ಯ ಬಯಲು: ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ರುಂಡವಿಲ್ಲದ ವೃದ್ಧೆಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಿವಾಸಿ ಮನ್ಮನೆಯ ಕೃಷ್ಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 20 ರಂದು ಕೊಳಗಿ ಅರಣ್ಯದಲ್ಲಿ ಬೆತ್ತಲಾಗಿ ಬಿದ್ದ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಗೋಕರ್ಣ ಸಿಪಿಐ ಶ್ರೀಧರ್ …
Read More »ಹೊಸಕೋಟೆ | 5.5 ಕೆಜಿ ಗಾಂಜಾ, ಎಂಡಿಎಂಎ ವಶ: 8 ಮಂದಿ ಸೆರೆ
ಹೊಸಕೋಟೆ: ಉಪವಿಭಾಗ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಮತ್ತು ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ. ಡಿವೈಎಸ್ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ಟಿಎಸ್ಹಳ್ಳಿ ಠಾಣೆ ಇನ್ಸ್ಪೆಕ್ಟರ್ ಸುಂದರ್ ಹಾಗೂ ನಂದಗುಡಿ ಠಾಣೆ ಇನ್ಸ್ಪೆಕ್ಟರ್ ಶಾಂತರಾಮ ಅವರ ನೇತೃತ್ವದ ತಂಡಗಳು ಕಾರ್ಯಾಚರಣೆ ನಡೆಸಿ ಬಂಧಿತರಿಂದ ಒಟ್ಟು 5.5 ಕೆ.ಜಿ ಗಾಂಜಾ, ಎಂಡಿಎಮ್ಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





