ಕಾರ್ಕಳ: ತಾಲ್ಲೂಕಿನ ಕುಕ್ಕಂದೂರು ಗ್ರಾಮದಲ್ಲಿ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದವವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರ್ಜೆಡ್ಡು ಶ್ರೀದೇವಿ ಕೃಪಾ ಹಾಲ್ನ ಎದುರುಗಡೆ ರಸ್ತೆ ಬದಿ ನಿಂತ ಗೂಡ್ಸ್ ವಾಹನವೊಂದರ ಹಿಂದುಗಡೆಯಿಂದ ನೀರು ಇಳಿಯುತ್ತಿತತ್ತು. ಇದನ್ನು ನೋಡಿ ಅನುಮಾನಗೊಂಡ ನಗರ ಠಾಣೆಯ ಹೆಡ್ ಕಾನ್ಸ್ಟೆಬಲ್ ಲೋಕೇಶ್ ಅವರು ವಾಹನವನ್ನು ಪರಿಶೀಲಿಸಿದಾಗ ಅದರೊಳಗೆ 2 ದನಗಳನ್ನು ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು.
Read More »15 ವರ್ಷಗಳಿಂದ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಬಲೆಗೆ
ಉಡುಪಿ: ಕಳೆದ 15 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ, ಸುಮಾರು 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಬೇಕಾಗಿದ್ದ ಎಲ್ ಪಿಸಿ ಹಾಗೂ ವಾರೆಂಟ್ ಆರೋಪಿಯನ್ನು ಉಡುಪಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಂದಾಪುರ ತಾಲೂಕಿನ ಕುಂಭಾಶಿ ನಿವಾಸಿ ವಿಘ್ನೇಶ್ವರ ಐತಾಳ್ (56) ಎಂದು ಗುರುತಿಸಲಾಗಿದೆ. ವಿಘ್ನೇಶ್ವರ ಐತಾಳ್ ವಿರುದ್ಧ 2011ರಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಸೇರಿ 10 ವಿವಿಧ ಪ್ರಕರಣಗಳು …
Read More »ಬೆಳಾಲು; ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರಿಂದ ದಾಳಿ
ಮಡಂತ್ಯಾರು: ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾ. 4ರಂದು ಬೆಳಾಲು ಗ್ರಾಮದ ಕೀನ್ಯಾಜೆ ಎಂಬಲ್ಲಿಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜೂಜಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿದ್ದ ಕೆಲವರನ್ನು ವಿಚಾರಣೆ ಮಾಡಲಾಗಿದ್ದು, ಉಳಿದವರು ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ 5 ಕೋಳಿಗಳನ್ನು ಮತ್ತು ಕೋಳಿಗಳ ಕಾಲಿಗೆ ಕಟ್ಟುವ ೨ ಬಾಲುಗಳು …
Read More »ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ 14 ದಿನ ನ್ಯಾಯಾಂಗ ಬಂಧನ
ಬೆಂಗಳೂರು: ಬಾಲಕಿ ಜೊತೆ ಅನುಚಿತ ವರ್ತನೆ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕಿಯೊಬ್ಬಳನ್ನು ತೊಡೆ ಮೇಲೆ ಕೂರಿಸಿಕೊಂಡು ಮನಬಂದಂತೆ ವರ್ತಿಸಿದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ವೈರಲ್ ಅಗಿತ್ತು. ಇದರ ಬೆನ್ನಲ್ಲೇ ಮಹಿಳಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಈ ಸಂಬಂಧ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೇ …
Read More »ಕಾಲು ಟಚ್ ಆಗಿದ್ದಕ್ಕೆ ಕೊಲೆ ಕೇಸ್.. ಇಬ್ಬರ ಅರೆಸ್ಟ್..
ಬೆಂಗಳೂರು : ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಬಸವೇಶ್ವರ ನಗರದಲ್ಲಿ ನಡೆದಿದ್ದ ಕೊಲೆ ಕೇಸ್ ನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಸವೇಶ್ವರನಗರದ ಹೋಟೆಲ್ ನಲ್ಲಿ ಕೊಲೆ ಪ್ರಕರಣ ಸಂಬಂಧ ಮಂಜುನಾಥ್, ಭಾಗ್ಯರಾಜ್ ಎಂಬುವರ ಬಂಧನವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಮಾ.2ರ ರಾತ್ರಿ ಶಶಿಕುಮಾರ್ ಎಂಬಾತನ ಕೊಲೆಯಾಗಿತ್ತು. ಮೊದಲಿಗೆ ಕಾಲು ಟಚ್ ಆದ ವಿಚಾರಕ್ಕೆ ಜಗಳ ನಡೆದಿತ್ತು. ಶಶಿಕುಮಾರ್ & ಮಂಜುನಾಥ್ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ಮನೆಯಿಂದ ತಮ್ಮ …
Read More »ಲಂಚ ಪಡೆಯುತ್ತಿದ್ದ ಜಿಬಿಎ ಅಧಿಕಾರಿ ಲೋಕಾಯುಕ್ತ ಬಲೆಗೆ
ಬೆಂಗಳೂರು: 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಬಿಎ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾವಲು ಬೈರಸಂದ್ರ ವಿಭಾಗದ ಸ್ಯಾನಿಟರಿ ಸೂಪರ್ ವೈಸರ್ ಎಂ. ನಾಗರಾಜು(39) ಬಂಧಿತರು. ಆರ್.ಟಿ. ನಗರ ಸಮೀಪ ಆದರ್ಶ ನಗರ ನಿವಾಸಿ ಅಬ್ದುಲ್ ರೆಹಮಾನ್ ಎಂಬುವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗರಾಜು ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ದೂರುದಾರ ಅಬ್ದುಲ್ ರೆಹಮಾನ್ ಅವರಿಗೆ ಸೇರಿದ ರಸ್ತೆ ಕತ್ತರಿಸುವ ಚಿಪ್ಪಿಂಗ್ ಯಂತ್ರವನ್ನು …
Read More »ಲಾರಿ ಚಕ್ರಕ್ಕೆ ಸಿಲುಕಿದ ಬೈಕ್: ಸವಾರ ಸ್ಥಳದಲ್ಲೇ ಸಾವು
ನೆಲಮಂಗಲ: ಬೈಕ್ ಆಯತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ತಾಳೇಕೆರೆ ಗ್ರಾಮದ ಬೆಂಗಳೂರು-ತುಮಕೂರು ರಸ್ತೆಯಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಮೋಹನ್ ಪಂಡಿತ್ (27) ಮೃತ ದುರ್ದೈವಿ. ಫೈರ್ ಯಂತ್ರ ಅಳವಡಿಕೆ ಕೆಲಸ ಮಾಡುತ್ತಿದ್ದನು. ಈತ ಬುಧವಾರ ಬೆಳಗ್ಗೆ ನೆಲಮಂಗಲದ ಲ್ಯಾಂಕೋ ಟೋಲ್ ಕಡೆಯಿರುವ ಗೋದಾಮಿನಲ್ಲಿ ಯಂತ್ರ ಅಳವಡಿಕೆ ಕೆಲಸ ಮುಗಿಸಿಕೊಂಡು ದಾಬಸ್ಪೇಟೆಗೆ ಬರುವಾಗ ತಾಳೆಕೆರೆ ಸಮೀಪ ಬೈಕ್ ಆಯತಪ್ಪಿಆದ ಪರಿಣಾಮ …
Read More »₹1.61 ಕೋಟಿ ವಂಚನೆ; ಮೂವರ ವಿರುದ್ಧ ಪ್ರಕರಣ ದಾಖಲು
ಕೋಟ: ಬ್ರಹ್ಮಾವರದ ಕ್ಯಾಶ್ಯೂ ಇಂಡಸ್ಟ್ರೀಸ್ನಲ್ಲಿ 1.61 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ. ಶಿರಿಯಾರ ನಿವಾಸಿ ಎಸ್. ಯೋಗೀಶ್ ವಂಚನೆಗೊಳಗಾದವರು. ಇವರು ಕ್ಯಾಶ್ಯೂ ಇಂಡಸ್ಟ್ರೀಸ್ನ ಮಾಲಕರಾಗಿದ್ದು, ಸಂಸ್ಥೆಯಲ್ಲಿ ತೆಂಗಿನ ಕಾಯಿ, ಕೊಬ್ಬರಿ ಹಾಗೂ ಅಡುಗೆ ಎಣ್ಣೆ ಖರೀದಿ-ಮಾರಾಟ ಮತ್ತು ಗೇರು ಬೀಜ ಸಂಸ್ಕರಣೆ ಕಾರ್ಯ ನಡೆಸುತ್ತಿದ್ದರು. ಸಂಸ್ಥೆಯಲ್ಲಿ ಲೆಕ್ಕಪತ್ರ ನಿರ್ವಹಣೆ ಹಾಗೂ ದಾಸ್ತಾನು ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದ ರತೀಶ್ ತನ್ನ ಸ್ನೇಹಿತರಾದ ರಾಜೇಶ್ ಮತ್ತು …
Read More »ಬೀದರ್ನಲ್ಲಿ ಹೈಡ್ರಾಮಾ: ಠಾಣೆ ಮುಂದೆ ಗಲಾಟೆ, 20 ಜನ ಬಂಧನ!
ಬೀದರ್: ಜಿಲ್ಲೆಯಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಠಾಣೆ ಮುಂದೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಈ ಪ್ರಕರಣದಲ್ಲಿ ದಾಖಲಾದ 49 ಆರೋಪಿಗಳ ಪೈಕಿ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಎದುರು ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನ ಸೇರಿದಂತೆ ಇಲಾಖೆಯ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕಲ್ಲು ತೂರಾಟದಿಂದ ಡಿಎಆರ್ ವಾಹನಕ್ಕೂ ಹಾನಿ ಉಂಟಾಗಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ …
Read More »₹10,000 ಲಂಚ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆ ಸಿಬ್ಬಂದಿ ಬಂಧನ
ಬೆಂಗಳೂರು: ಗುತ್ತಿಗೆದಾರರೊಬ್ಬರಿಂದ ₹10,000 ಲಂಚ ಪಡೆಯುತ್ತಿದ್ದ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪಾಲಿಕೆಯ ಸ್ಯಾನಿಟರಿ ಸೂಪರ್ವೈಸರ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ನಗರದ ಕಾವಲ್ ಬೈರಸಂದ್ರದ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಅಬ್ದುಲ್ ರೆಹಮಾನ್ ಅವರು ರಸ್ತೆ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಅಲ್ಲಿದ್ದ ಚಿಪ್ಪಿಂಗ್ ಯಂತ್ರವನ್ನು ನಗರ ಪಾಲಿಕೆಯ ಆರೋಗ್ಯ ವಿಭಾಗದ ಸ್ಯಾನಿಟರಿ ಸೂಪರ್ವೈಸರ್ ಎಂ.ನಾಗರಾಜ ಅವರು ಅನಧಿಕೃತವಾಗಿ ಜಪ್ತಿ ಮಾಡಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಯಂತ್ರವನ್ನು ಬಿಡುಗಡೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





