Breaking News

BigTv News

ಶ್ರೀಲಂಕಾ ಬಳಿ ಇರಾನ್ ಹಡಗಿನ ಮೇಲೆ ಇಸ್ರೇಲ್ ‘ಜಲಾಂತರ್ಗಾಮಿ ದಾಳಿ’ : 101 ಮಂದಿ ನಾಪತ್ತೆ, 78 ಜನರಿಗೆ ಗಾಯ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಇರಾನಿನ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ ಮಾಡಲಾಗಿದ್ದು, ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ರಾಯಿಟರ್ಸ್ ಉಲ್ಲೇಖಿಸಿವೆ. ಶ್ರೀಲಂಕಾದ ಸಮುದ್ರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಹಡಗು ವಿಪತ್ತು ಕರೆ ನೀಡಿದ ನಂತರ ಶ್ರೀಲಂಕಾ ಸೇನೆಯಿಂದ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆಗೆ ನಾಂದಿ ಹಾಡಿತು. ಇರಾನಿನ ಹಡಗಿನಿಂದ ತುರ್ತು ಸಂಕೇತ ಬಂದ …

Read More »

ಶ್ರೀಲಂಕಾ ಬಳಿ ಇರಾನ್ ಹಡಗಿನ ಮೇಲೆ ಇಸ್ರೇಲ್ ‘ಜಲಾಂತರ್ಗಾಮಿ ದಾಳಿ’ : 101 ಮಂದಿ ನಾಪತ್ತೆ, 78 ಜನರಿಗೆ ಗಾಯ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಇರಾನಿನ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ ಮಾಡಲಾಗಿದ್ದು, ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ ಎಂದು ಶ್ರೀಲಂಕಾ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ರಾಯಿಟರ್ಸ್ ಉಲ್ಲೇಖಿಸಿವೆ. ಶ್ರೀಲಂಕಾದ ಸಮುದ್ರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಹಡಗು ವಿಪತ್ತು ಕರೆ ನೀಡಿದ ನಂತರ ಶ್ರೀಲಂಕಾ ಸೇನೆಯಿಂದ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆಗೆ ನಾಂದಿ ಹಾಡಿತು. ಇರಾನಿನ ಹಡಗಿನಿಂದ ತುರ್ತು ಸಂಕೇತ ಬಂದ …

Read More »

ಕಾವೇರಿ ನದಿಯಲ್ಲಿ ಗೃಹಿಣಿ ಶವ ಪತ್ತೆ

ಚಾಮರಾಜನಗರ |ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ ಹರಿಯೋ ಕಾವೇರಿ ನದಿಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಮೃತಳನ್ನು ರಶ್ಮಿ (39) ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ರಶ್ಮಿ ಕಾವೇರಿ ನದಿಗೆ ಹಾರಿ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಶ್ಮಿ ಮಂಡ್ಯ ಜಿಲ್ಲೆಯ ಬೆಳಕವಾಡಿ ಗ್ರಾಮದ ನಿವಾಸಿ ಲೋಕೇಶ್ ಎಂಬುವವರ ಪತ್ನಿ ಎಂದು ತಿಳಿದುಬಂದಿದೆ.ಗಂಡ ಹಾಗೂ ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ವಾಸವಿದ್ದ ರಶ್ಮಿ, ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು …

Read More »

ಹಾವೇರಿ: ಪಡಿತರ ಚೀಟಿಗೆ ₹5 ಸಾವಿರ ಲಂಚ; ಆಹಾರ ನಿರೀಕ್ಷಕ ಬಂಧನ

ಹಾವೇರಿ: ಪಡಿತರ ಚೀಟಿ ಮಾಡಿಸಿಕೊಟ್ಟಿದ್ದಕ್ಕೆ ₹ 5000 ಲಂಚ ಪಡೆದ ಆರೋಪದಡಿ ಆಹಾರ ನಿರೀಕ್ಷಕ (ಪ್ರಭಾರ) ವಿಜಯಕುಮಾರ ಗುಡಗೇರಿ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ತಾಲ್ಲೂಕಿನ ಪ್ರಭಾರ ಆಹಾರ ನಿರೀಕ್ಷಕ ವಿಜಯಕುಮಾರ, ಹಿರೇಲಿಂಗದಹಳ್ಳಿಯ ಬೀರಪ್ಪ ಕಾಶಂಬಿ ಅವರಿಗೆ ಪಡಿತರ ಚೀಟಿ ಮಾಡಿಕೊಟ್ಟಿದ್ದ. ಇದಕ್ಕಾಗಿ ಫೋನ್ ಪೇ ಮೂಲಕ ಲಂಚ ಪಡೆದಿದ್ದ. ಬೀರಪ್ಪ ಅವರ ಸಂಬಂಧಿ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿ ವಿಜಯಕುಮಾರ ಅವರನ್ನು ಬಂಧಿಸಲಾಗಿದೆ’ ಎಂದು …

Read More »

ಅಡುಗೆ ವಿಚಾರಕ್ಕೆ ಅತ್ತೆಯೊಂದಿಗೆ ಜಗಳ- ಮಾಜಿ ಮಹಿಳಾ ಟೆಕ್ಕಿ ಆತ್ಮಹತ್ಯೆ!

ಬೆಂಗಳೂರು: ಅಡುಗೆಯ ವಿಚಾರಕ್ಕೆ ಅತ್ತೆಯೊಂದಿಗೆ ಜಗಳ ಏರ್ಪಟ್ಟ ನಂತರ 35 ವರ್ಷದ ಮಾಜಿ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಷ್ಮಾ (35) ಎಂದು ಗುರುತಿಸಲಾಗಿದೆ. ಸುಷ್ಮಾ ಈ ಹಿಂದೆ ಡೆಲ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐದು ವರ್ಷಗಳ ಹಿಂದೆ ಸುಷ್ಮಾ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದು, ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಪೊಲೀಸರ ಪ್ರಕಾರ ಸುಷ್ಮಾ ಪತಿಯ ಮನೆಯಲ್ಲಿ …

Read More »

ಹೊಲಕ್ಕೆ ಹೋಗಿ ಕಾಣೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ದೋಟಿಕೊಳ್ ಗ್ರಾಮದಲ್ಲಿ 25 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ದೋಟಿಕೊಳ ಗ್ರಾಮದ ಶರಣು ಗುಂಡಪ್ಪ ಭೋಸಗಿ(25) ಮೃತ ವ್ಯಕ್ತಿ. ಕಡಲೆ ಬೆಳೆ ಕಾಯಲು ಹೊಲಕ್ಕೆ ಹೋಗಿದ್ದು, ಮನೆಗೆ ಮರಳಿರಲಿಲ್ಲ. ಇದರಿಂದ ಸಂಶಯಗೊಂಡು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಯುವಕ ಕಣ್ಮರೆಯಾದ ಕುರಿತು ದೂರು ದಾಖಲಾಗಿತ್ತು ಎಂದು ಎಸ್‌ಐ ಗಂಗಮ್ಮ ಜಿನಿಕೇರಿ ತಿಳಿಸಿದರು. ಬೆನ್ನಲ್ಲಿಯೇ ದೋಟಿಕೊಳ ಗ್ರಾಮದ ಸಣ್ಣ ನೀರಾವರಿ ಕೆರೆಯಲ್ಲಿ ಶವವಾಗಿ …

Read More »

ಅತ್ಯಾಚಾರ ಆರೋಪ: ಆಸ್ಪತ್ರೆ ನಿರ್ದೇಶಕನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜಯನಗರದಲ್ಲಿ ಇರುವ ಆಸ್ಪತ್ರೆಯೊಂದರ ಕಾರ್ಯಕಾರಿ ನಿರ್ದೇಶಕರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ‘ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತ್ರಿವಿಕ್ರಂ ರಾವ್‌ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ. ‘ಮೂರು ದಿನಗಳ ಹಿಂದೆ ಸಂತ್ರಸ್ತೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ದೂರು ನೀಡಿದ …

Read More »

ಮಾಜಿ ಪ್ರೇಯಸಿಯ ಹೆಸರಿಲ್ಲಿ ಲಕ್ಷಾಂತರ ರೂ. ವಂಚನೆ: ದೂರು

ಸಿದ್ದಾಪುರ: ಮಾಜಿ ಪ್ರೇಯಸಿ ಹೆಸರಿನಲ್ಲಿ ವಾಟ್ಸ್‌ಆಯಪ್‌ ಮತ್ತು ಇನ್‌ಸ್ಟಾಗ್ರಾಂ ಮೂಲಕ ಚಾಟ್‌ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊಸಂಗಡಿ ಗ್ರಾಮದ ದಿವ್ಯ ನಾಯ್ಕ ವಂಚಿಸಿದ ಮಹಿಳೆ. ದಿವ್ಯ ಅವರ ಮಾವನ ಮಗಳಾದ ಅನುಷಾ ಹಾಗೂ ರವೀಂದ್ರ ಅವರ ನಡುವೆ ಪ್ರೀತಿ ಬೆಳೆದಿತ್ತು. ಮನೆಯವರಿಗೆ ಈ ವಿಚಾರ ತಿಳಿದ ಅನಂತರ ಇಬ್ಬರು ದೂರವಾಗಿದ್ದರು. ಬಳಿಕ ಅನುಷಾ ಬಳಸುತ್ತಿದ್ದ ಮೊಬೈಲ್ ನಂಬರನ್ನು ದಿವ್ಯ …

Read More »

ಕಾರ್ಕಳ | ಹಿಂಸಾತ್ಮಕವಾಗಿ ದನ ಸಾಗಾಟ: ಪ್ರಕರಣ ದಾಖಲು

ಕಾರ್ಕಳ: ತಾಲ್ಲೂಕಿನ ಕುಕ್ಕಂದೂರು ಗ್ರಾಮದಲ್ಲಿ ಜಾನುವಾರುಗಳನ್ನು ಕಳವು ಮಾಡಿ ಕಸಾಯಿಖಾನೆಗೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದವವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರ್ಜೆಡ್ಡು ಶ್ರೀದೇವಿ ಕೃಪಾ ಹಾಲ್‌ನ ಎದುರುಗಡೆ ರಸ್ತೆ ಬದಿ ನಿಂತ ಗೂಡ್ಸ್ ವಾಹನವೊಂದರ ಹಿಂದುಗಡೆಯಿಂದ ನೀರು ಇಳಿಯುತ್ತಿತತ್ತು. ಇದನ್ನು ನೋಡಿ ಅನುಮಾನಗೊಂಡ ನಗರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಲೋಕೇಶ್ ಅವರು ವಾಹನವನ್ನು ಪರಿಶೀಲಿಸಿದಾಗ ಅದರೊಳಗೆ 2 ದನಗಳನ್ನು ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಲಾಗಿತ್ತು.

Read More »

ಗಾಂಜಾ ಸಾಗಾಣೆ ಮಾಡುತ್ತಿದ್ದವನ ಬಂಧನ

ಕೊಳ್ಳೇಗಾಲ:ಪಟ್ಟಣದ ಕೃಷಿ ಮಾರುಕಟ್ಟೆ ಮುಂಭಾಗದ ರಸ್ತೆಯಲ್ಲಿ ಸೋಮವಾರ ಸಂಜೆ ಪ್ಲಾಸ್ಟಿಕ್ ಕವರ್‌ನಲ್ಲಿ 320 ಗ್ರಾಂ ತೂಕದ ಒಣಗಾಂಜಾ ಸಾಗಾಣೆ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಹೊಸ ಪೋಡಿನ ನಿವಾಸಿ ಜಡೆಯ ಅಲಿಯಾಸ್ ಕೆಂಪಿ(25) ಬಂಧಿತ ಆರೋಪಿ. ಇವನು ಕೆಂಪನಪಾಳ್ಯ ಮುಖ್ಯ ರಸ್ತೆ ಸಿಗುವ ಕೃಷಿ ಮಾರುಕಟ್ಟೆ ಎದರು ರಸ್ತೆಯಲ್ಲಿ ಒಣ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ವಿ ವರ್ಷಾ ಹಾಗೂ ಉಪವಿಭಾಗ …

Read More »